ಸೆ.24ರಂದು ಅಮೆರಿಕ ಮಂದಾರದಲ್ಲಿ ಗಣೇಶೋತ್ಸವ

Ganesha Habba 2011 in Mandara
ಅಮೆರಿಕಾದ "ಮಂದಾರ" ನ್ಯೂ ಇಂಗ್ಲೆಂಡ್ ಕನ್ನಡ ಕೂಟ ತನ್ನ ನೂತನ ಪದಾಧಿಕಾರಿಗಳೊಂದಿಗೆ ಹೊಸ ಹುಮ್ಮಸ್ಸಿನಿಂದ ಗಣೇಶೋತ್ಸವ ಸಮಾರಂಭಕ್ಕೆ ಸಜ್ಜಾಗುತ್ತಿದೆ.

ಇದೇ ಬರುವ ಸೆಪ್ಟೆಂಬರ್ 24ರಂದು ಮೆಸಾಚುಸೆತ್ಸ್ ರಾಜ್ಯದ ಫ್ರೆಮಿಂಗ್ ಹ್ಯಾಮಿನಲ್ಲಿ ಗಣೇಶೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಣ್ಮನ ಕಿವಿಗಳಿಗೆ ರಸದೌತಣದ ಜೊತೆಗೆ ಬಾಯಲ್ಲಿ ನೀರೂರಿಸುವ ಹಬ್ಬದ ರಸಗವಳದ ಸಿದ್ಧತೆಯೂ ಭರದಿಂದ ಸಾಗಿದೆ.

ಕಾರ್ಯಕ್ರಮದ ಪಟ್ಟಿ : ಗಣಪತಿ ಪೂಜೆಯೊಂದಿಗೆ ಸರಿಯಾಗಿ ಮಧ್ಯಾಹ್ನ 2 ಗಂಟೆಗೆ ಆರಂಭವಾಗುವ ಕಾರ್ಯಕ್ರಮ, ಭರವಸೆಯ ಕಲಾವಿದೆ ದೀಪ್ತಿ ನವರತ್ನ ಅವರ ಕರ್ನಾಟಕ ಸಂಗೀತ, ಗಣಪತಿ ಆರಾಧನೆಯೊಂದಿಗೆ ಮನರಂಜನೆಗೆ ಮೊದಲುಗೊಳ್ಳಲಿದೆ.

ಕನ್ನಡ ಸಂಗೀತ ಕ್ಷೇತ್ರದ ಹೊಸ ತಲೆಮಾರಿನ ಅದ್ಭುತ ಹಾಡುಗಾರ ಗಣೇಶ್ ದೇಸಾಯಿ ಮತ್ತು 'ಮೂಡಲ ಮನೆ' ಖ್ಯಾತಿಯ ನಮಿತಾ ದೇಸಾಯಿಯವರ ಲಾಲಿತ್ಯಪೂರ್ಣ ನೃತ್ಯಾವಳಿ, ಕಾರ್ಯಕ್ರಮದ ಕೇಂದ್ರ ಆಕರ್ಷಣೆ.

ಕರ್ನಾಟಕದ ವಿವಿಧ ಸಂಸ್ಕೃತಿಯ ಬಟ್ಟೆಬರೆಗಳ ಸೊಬಗನ್ನು ಪರಿಚಯಿಸುವ ಫ್ಯಾಶನ್ ಶೋ, ಹಳ್ಳಿ ಹೆಂಗಸರ ವಿಶಿಷ್ಟ ವಾದ್ಯಗೋಷ್ಠಿಯ ದುಡಿತ-ಮಿಡಿತ ಜಾನಪದ ಸಂಗೀತ, ಕಲಾಶ್ರೀ ಪ್ರೊ. ಮಲ್ಲಣ್ಣರವರ ತಂಡದಿಂದ ಕನ್ನಡ ಜನಪ್ರಿಯ ಗೀತೆಗಳ ಲಘು ರಸಸಂಜೆ. ಇವೆಲ್ಲದರ ಜೊತೆಗೆ ಇದೇ ಮೊದಲ ಬಾರಿಗೆ "ನ್ಯೂ ಇಂಗ್ಲೆಂಡ್ ನಾಲಾಯಕರು" ತಂಡದವರು ನಗೆಗಡಲಲ್ಲಿ ನಿಮ್ಮನ್ನೆಲ್ಲ ತೇಲಿಸಲು ಪ್ರಸ್ತುತಪಡಿಸುತ್ತಿರುವ ಹಾಸ್ಯನಾಟಕ.

ಮಧ್ಯಾಹ್ನ 2 ಗಂಟೆಗೆ ಆರಂಭವಾಗುತ್ತಿರುವ ಕಾರ್ಯಕ್ರಮ ನಡೆಯಲಿರುವ ಸ್ಥಳದ ವಿಳಾಸ ಹೀಗಿದೆ : Keef Tech Auditorium, 750 Winter Street, Framingham MA. ಈಗಲೇ ಕಾರ್ಯಕ್ರಮಕ್ಕೆ ಹೊರಡಲು ತಯಾರಾಗುತ್ತಿದ್ದರೆ ಸ್ವಲ್ಪ ತಡೆಯಿರಿ. ಇನ್ನೂ ಇದೆ!

ಅಪ್ಪಟ ಕರ್ನಾಟಕ ಶೈಲಿಯ ರುಚಿಕರ ಹಬ್ಬದೂಟದ ನಂತರ ರಂಗದಮೇಲೆ ರಂಗುರಂಗಿನ ಯಕ್ಷಗಾನ. ಯಕ್ಷಗಾನ ಕಲಾವೃಂದದವರ ಆಶ್ರಯದಲ್ಲಿ ಸ್ಥಳೀಯ ಕಲಾವಿದರೂ ಸೇರಿ ನಡೆಸಿಕೊಡಲಿದ್ದಾರೆ "ಮಾಗಧ ವಧೆ".

ಇದೇ ಸಂದರ್ಭದಲ್ಲಿ ಮಂದಾರ ಕನ್ನಡ ಕೂಟಕ್ಕೆ ಸದಸ್ಯರಾಗಿ ತಮ್ಮ ಕುಟುಂಬವನ್ನು ನೊಂದಾಯಿಸಿಕೊಳ್ಳಲು ಮರೆಯಬೇಡಿ. ಬನ್ನಿ, ಆನಂದಿಸಿ, ಹಬ್ಬದೂಟದೊಡನೆ ಗಣಪನ ಕೃಪೆಯಲ್ಲಿ ಕನ್ನಡಕೂಟವನ್ನು ಹರಸಿ ಬೆಳೆಸಿ. ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗಾಗಿ ನಮ್ಮ ಜಾಲತಾಣಕ್ಕೆ http://www.nekk.org ಭೇಟಿ ನೀಡುತ್ತಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+