ದುಬೈನಲ್ಲಿ 'ಆಷಾಡದ ಒಂದು ದಿನ' ಕನ್ನಡ ನಾಟಕ

Kannada drama show in Dubai
ದುಬೈ, ಡಿ. 27 : ಧ್ವನಿ ಪ್ರತಿಷ್ಠಾನ ರಜತ ಮಹೋತ್ಸವದ ಯಶಸ್ವಿ ಸಮಾರಂಭಗಳ ನಂತರ ಇಪ್ಪತ್ತೇಳನೆ ವರ್ಷದ ಕಾಣಿಕೆಯಾಗಿ "ಆಷಾಡದ ಒಂದು ದಿನ" ಕನ್ನಡ ನಾಟಕವನ್ನು 30ನೇ ಮಾರ್ಚ್ 2012 ಶುಕ್ರವಾರ ಸಂಜೆ 5 ಗಂಟೆಗೆ ಜುಮೇರಾ ಇಂಗ್ಲಿಷ್ ಸ್ಪೀಕಿಂಗ್ ಸ್ಕೂಲ್ ನ ಏಮೇರೆಟ್ಸ್ ಥಿಯೇಟರ್ ನಲ್ಲಿ ರಂಗವೇರಲಿದೆ.

ಈ ನಾಟಕವನ್ನು ದುಬೈ ಕನ್ನಡಿಗರಿಗಾಗಿ 2010ರ ಸಾಲಿನ ಕರ್ನಾಟಕ ನಾಟಕ ಆಕಾಡೆಮಿ ಪ್ರಶಸ್ತಿ ಪುರಸ್ಕ್ರತ ಪ್ರಕಾಶ್ ರಾವ್ ಪಯ್ಯಾರ್ ಅವರು ನಿರ್ದೇಶಿಸಲಿದ್ದಾರೆ. ’ಧ್ವನಿ’ ಈ ಹಿಂದೆ ಗಿರೀಶ್ ಕಾರ್ನಡರ ’ನಾಗ ಮಂಡಲ’, ’ಹಯವದನ’, ’ಒಡಕಲು ಬಿಂಬ’ ನಾಟಕಗಳನ್ನು ದುಬೈಯಲ್ಲಿ ಪ್ರದರ್ಶಿಸಿದೆ. ’ಧ್ವನಿ’ ನಿರ್ಮಿಸಿದ ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳು ಭಾರತದ ವಿವಿಧೆಡೆ ಹಲವಾರು ಪ್ರದರ್ಶನಗೊಂಡಿವೆ. ನಾಟಕಗಾರ ಪ್ರೊ. ಮೋಹನ್ ರಾಕೇಶ್ ಅವರ ಈ "ಆಷಾಡ್ ಕಾ ಏಕ್ ದಿನ್" ನಾಟಕವನ್ನು ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ.

ಮೋಹನ್ ರಾಕೇಶ್ ಬಗ್ಗೆ : ಹಿಂದಿಯ ಸುಪ್ರಸಿದ್ಧ ನಾಟಕಕಾರ ಮೋಹನ್ ರಾಕೇಶ್ ಅವರ ಪ್ರಪ್ರಥಮ ಈ ನಾಟಕ 1958ರಲ್ಲಿ ರಚಿಸಲ್ಪಟ್ಟು ಹಿಂದಿಯ ಪ್ರಥಮ ಆಧುನಿಕ ನಾಟಕ ಎಂಬ ಹೆಗ್ಗಳಿಕೆಯೊಂದಿಗೆ 1959ರ ಅತ್ಯುತ್ತಮ ನಾಟಕ ಪ್ರಶಸ್ತಿಯನ್ನು ಸಂಗೀತ ನಾಟಕ ಆಕಾಡೆಮಿಯಿಂದ ಪಡೆದುಕೊಂಡಿತು. ಹಿಂದಿ ರಂಗಭೂಮಿಯ ದಿಕ್ಕು ದೆಸೆ ಬದಲಾಯಿಸಿದ ಈ ನಾಟಕ ಭಾರತದ ಪ್ರಖ್ಯಾತ ರಂಗ ನಿರ್ದೇಶಕರಿಂದ ದೇಶದ ವಿವಿಧೆಡೆ ಪ್ರದರ್ಶಿಸಲ್ಪಟ್ಟಿದೆ.

1972ರಲ್ಲಿ ಮೋಹನ್ ರಾಕೇಶ್ ಅವರು ದೈವಾಧೀನರಾದಾಗ ಅವರ ಮೂರು ನಾಟಕಗಳು ಪ್ರಕಟಗೊಂಡಿದ್ದವು; ನಾಲ್ಕನೇ ನಾಟಕ ಅಪೂರ್ಣವಾಗಿತ್ತು. ಮೋಹನ್ ರಾಕೇಶ್ ಅವರು ಏಳು ಕಾದಂಬರಿ ಏಳು ಕಥಾ ಸಂಕಲನ ಹಾಗೂ ನೂರಾರು ಇತರ ಪ್ರಕಾರದ ಸಾಹಿತ್ಯ ಲೇಖನಗಳನ್ನು ರಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+