ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಳುಗಾಡಿನ ಮಲೆನಾಡು ಓಮನ್ ದೇಶದ ಸಲಾಲ್ಹ

By * ರಂಗನಾಥ ಪಿ.ಎಸ್, ಓಮನ್
|
Google Oneindia Kannada News

Salalah, natural beauty unveiled
ಮಲೆನಾಡು ಎಂದಾಕ್ಷಣ ನಮ್ಮ ಕಣ್ಮುಂದೆ ಪಶ್ಚಿಮಘಟ್ಟ, ಹಲವಾರು ನದಿಗಳು, ನೂರಾರು ಜಲಪಾತಗಳು ಸದಾ ಹಸಿರು ತುಂಬಿರುವ ಗಿರಿಶ್ರೇಣಿಗಳು, ದಟ್ಟ ಕಾನನಗಳು ಸುಳಿಯುತ್ತವೆ. ಆದರೆ ಈ ಹಸಿರಿಗು ಮತ್ತು ಮರಳುಗಾಡಿಗು ಎತ್ತಣಿಂದೆತ್ತಣ ಸಂಬಂಧ? ಓಮನ್ ದೇಶದ ದಕ್ಷಿಣ ಭಾಗದ ದೋಫರ್ ಎನ್ನುವ ಪ್ರಾಂತ್ಯ ಇಂತಹ ಗಿರಿಶಿಖರಗಳಿಂದ ತುಂಬಿದೆ. ಅಲ್ಲಲ್ಲಿ ಹರಿಯುವ ನದಿಗಳು, ಚಿಕ್ಕ ಚಿಕ್ಕ ಜಲಪಾತಗಳು, ನದಿ ತೊರೆಗಳು ನಮ್ಮ ಮಲೆನಾಡನ್ನು ಜ್ಞಾಪಿಸುತ್ತವೆ.

ಸಲಾಲ್ಹ ಎನ್ನುವ ನಗರ ದೋಫರ್ ಪ್ರಾಂತ್ಯದ ರಾಜಧಾನಿ ಹಾಗು ಇದು ಓಮನ್ ದೇಶದ ಎರಡನೇ ವಾಣಿಜ್ಯ ನಗರ ಮಸ್ಕತ್ ನಿಂದ 1,000 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ಕರೀಫ್ ಸೀಸನ್ ಎಂದು ಕರೆಯಲ್ಪಡುವ ಮುಂಗಾರು ಹಬ್ಬ ಬಹು ಜನಪ್ರಿಯ. ಸುತ್ತ ಮುತ್ತಲಿನ ಅರಬ್ ದೇಶಗಳಾದ ಸೌದಿ ಅರೇಬಿಯ, ಯುಎಇ, ಕತಾರ್, ಬಹ್ರೇನ್, ಕುವೈತ್ ಮತ್ತಿತರ ಅರಬ್ ದೇಶಗಳ ಪ್ರಜೆಗಳು ಅವರ ದೇಶದಲ್ಲಿರುವ ಬಿಸಿವಾತಾವರಣದಿಂದ ತಪ್ಪಿಸಿಕೊಳ್ಳಲು ಸಲಾಲ್ಹದಲ್ಲಿನ ತಂಪಾದ ಹವೆ ಮತ್ತು ವಾತಾವರಣವನ್ನು ಸವಿಯಲು ಸಾಮನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಭೇಟಿಯಿಡುತ್ತಾರೆ.

ಸರಕಾರ ಸಹ ಪ್ರವಾಸಿ ಹಬ್ಬವನ್ನಾಗಿ ಆಚರಿಸಿ ಪ್ರೋತ್ಸಾಹ ನೀಡುತ್ತದೆ. ಓಮನ್ ದೇಶದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಭಾರತೀಯನಿಗೂ ಈ ಸ್ಥಳದ ಬಗ್ಗೆ ಅರಿವಿರುತ್ತದೆ ಹಾಗು ಸಾಧ್ಯವಾದವರೆಲ್ಲರು ಭೇಟಿಯಿತ್ತಿರುತ್ತಾರೆ. ಯಾರ ಬಾಯಲ್ಲಿ ಕೇಳಿದರು ಒಮಾನ್ ನಲ್ಲಿ ನೋಡೊದಿಕ್ಕೆ ಏನಿದೆ ಅಂದ್ರೆ ಎಲ್ಲರು ಹೇಳೋದೆ ಸಲಾಲ್ಹ.

ಪ್ರವಾಸಿಗರ ಬೇಸಿಗೆ ರಜೆ ಕಳೆಯಲು ಮತ್ತು ಹಿತಕರವಾದ ಹವಾಮಾನ ಆನಂದಿಸಲು ದೋಫಾರ್ ಗವರ್ನ್ಮೆಂಟ್ ಆಫ್ ಸಲಾಲ ಉತ್ಸವ ನಡೆಸಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಈ ಬಾರಿ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಉತ್ಸವದ ಅಂಗವಾಗಿ ವಸ್ತು ಪ್ರದರ್ಶನ, ಸಾಂಪ್ರದಾಯಿಕ ಹಳ್ಳಿ ಜೀವನ ಹಾಗು ಬುಡಕಟ್ಟು ಜನರ ವೈವಿಧ್ಯತೆಯ ಪ್ರದರ್ಶನ, ರಂಗಪ್ರದರ್ಶನ ಮತ್ತು ಅನೇಕ ಇತರ ಮನರಂಜನೆ ಚಟುವಟಿಕೆಗಳು ಒಂದು ತಿಂಗಳು ನಡೆದವು. ಸರ್ಕಾರದ ಮತ್ತು ಖಾಸಗಿ ಸಂಘ ಸಂಸ್ಥೆಗಳು ಪ್ರವಾಸಿಗರಿಗಾಗಿ ಉಪಯುಕ್ತ ಮಾಹಿತಿ ಮತ್ತು ಸೇವೆಗಳನ್ನು ನೀಡಿದವು.

ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಇಲ್ಲಿನ ಓಮನ್ ಏರ್ ಹಾಗು ಮೊದಲನೆ ದರ್ಜೆಯ ಹೋಟೆಲ್ ಗಳಾದ ಕ್ರೌನ್ ಪ್ಲಾಜ, ಹಿಲ್ಟನ್ ಮತ್ತು ಮ್ಯಾರಿಯಟ್ ಗಳು ವಿವಿಧ ರೀತಿಯ ಕೊಡುಗೆಗಳನ್ನು ನೀಡಿ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಹಿಂದೆ ಬೀಳಲಿಲ್ಲ.

ಸುರಕ್ಷತೆ ಮತ್ತು ಪ್ರವಾಸಿಗರಿಗೆ ಭದ್ರತೆ ಖಚಿತಪಡಿಸಲು, ರಾಯಲ್ ಓಮನ್ ಪೊಲೀಸ್ (ROP) ಎಲ್ಲಾ ಸ್ಥಳಗಳಲ್ಲಿ ಉಪಸ್ಥಿತರಿದ್ದರು. ಮಾಮೂಲಿ ದಿನಗಳಲ್ಲಿ ಕಡಿಮೆಯಿದ್ದ ಸಂಚಾರ ಈ ಒಂದು ತಿಂಗಳ ಅವಧಿಯಲ್ಲಿ ಹತ್ತು ಪಟ್ಟು ಹೆಚ್ಚಾಗಿತ್ತು. ಎಲ್ಲಾ ದಿನ ನಿಯಂತ್ರಣ ಮತ್ತು ಸಂಚಾರ ನಿಯಂತ್ರಿಸಲು ROP ಬಹು ಶ್ರಮಿಸಿದರು. ತುರ್ತು ಸಹಾಯ ಮಾಡಲು ಸಿವಿಲ್ ರಕ್ಷಣಾ ಸಿಬ್ಬಂದಿ ಕೂಡ ತುರ್ತು ಸೇವೆಗೆ ಸಿದ್ಧರಾಗಿದ್ದರು. ಮೊಬೈಲ್ ಜಾಲವನ್ನು ಬಲಪಡಿಸಲು Omantel ಅತ್ಯಧಿಕ ಗೋಪುರಗಳನ್ನು ನಿರ್ಮಿಸಿತ್ತು. ಬಹುತೇಕ ಇಲ್ಲಿಯ ಎಲ್ಲ ಮಾಧ್ಯಮಗಳು ಪ್ರವಾಸೋದ್ಯಮವನ್ನು ಪ್ರಚಾರ ಮಾಡಲು ಹಿಂದೆ ಬೀಳಲಿಲ್ಲ.

ಸುಲ್ತಾನರ ಮಾಧ್ಯಮ ಉತ್ಸವ ಚಟುವಟಿಕೆಗಳನ್ನು ಪ್ರಚಾರ ಮಾಡಲು ಪ್ರಮುಖ ಪಾತ್ರ ವಹಿಸಿದೆ. ವಿಶೇಷ ಟಿವಿ ಮತ್ತು ರೇಡಿಯೊ ಕಾರ್ಯಕ್ರಮಗಳು ಪ್ರತಿದಿನ ಅರೇಬಿಕ್ ಮತ್ತು ಇಂಗ್ಲೀಷ್ ಪತ್ರಿಕೆಗಳು ವರದಿ ಜೊತೆಗೆ ಚಟುವಟಿಕೆಗಳು ಕವರ್ ಮಾಡಲಾಗಿವೆ. ಟಿವಿ ಕಾರ್ಯಕ್ರಮಗಳು ವೀಕ್ಷಕರನ್ನು ನಿಜವಾದ ಥ್ರಿಲ್ ಮತ್ತು ಮನೊರಂಜನೆಗಾಗಿ khareef ಚಟುವಟಿಕೆಗಳು ಮತ್ತು Salalah ಜೊತೆಗಿರುವ ಅನುಭವ ನೀಡುತ್ತದೆ. ಪ್ರೆಸ್, ಪಬ್ಲಿಕೇಷನ್ ಮತ್ತು ಜಾಹೀರಾತು (OEPPA)ಗೆ ಓಮನ್ ಎಸ್ಟಾಬ್ಲಿಷ್ಮೆಂಟ್, ಅಬ್ಸರ್ವರ್ ಮತ್ತು ಅದರ ಸಹೋದರಿ ಅರೆಬಿಕ್ Daily ಓಮನ್ ನ ಪ್ರಕಾಶಕರು ಘಟನೆಯ ಮಾಧ್ಯಮ ಹೊಣೆಗಾರಿಕೆಯನ್ನು ಹೊತ್ತಿದ್ದರು.

ಪರಿಚಯ : ರಂಗನಾಥ ಪಿ.ಎಸ್. ಊರು ರಾಂಪುರ ಗ್ರಾಮ, ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮುರು ತಾಲೂಕ್, ಉದ್ಯೋಗ ನಿಮಿತ್ತ ಓಮನ್ ದೇಶದಲ್ಲಿನ ಸಲಾಲ್ಹ ನಗರದಲ್ಲಿ ವಾಸ.

English summary
Salalah, city of prophets, is considered as malenadu of gulf contries. Peopel from all parts of gulf cities visit this place to enjoy greenary and relatively cold weather during August and September months. An article by Ranganath PS from Oman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X