ಸಿಲಿಕಾನ್ ವ್ಯಾಲಿಯಲ್ಲಿ ಶ್ರೀ ಕೃಷ್ಣ ಸಂಧಾನ ನಾಟಕ

ದಕ್ಷಿಣ ಕ್ಯಾಲಿಫೋರ್ನಿಯಾದ ರಂಗಧ್ವನಿ ನಾಟಕ ಸಂಸ್ಥೆ ಈ ನಾಟಕವನ್ನು ಪ್ರದರ್ಶಿಸಲಿದೆ. ರಂಗಧ್ವನಿ ನಾಟಕ ಸಂಸ್ಥೆ ಕಳೆದ 5-6 ವರ್ಷಗಳಿಂದ ಅಮೆರಿಕೆಯ ಹಲವಾರು ಸ್ಥಳಗಳಲ್ಲಿ ಹಲವಾರು ನಾಟಕಗಳನ್ನು ಪ್ರದರ್ಶಿಸಿ ಹೆಸರು ಮಾಡಿದೆ. ಈ ನಾಟಕ ಸಂಸ್ಥೆಯ ಜನಪ್ರಿಯ ನಾಟಕಗಳು "ಯಮನ ಕಾಲ್ ಸೆಂಟರ್", "ಹಾಲಿವುಡ್ನಲ್ಲಿ ಯಮ", "ಜೋಕುಮಾರಸ್ವಾಮಿ", "ಪಶ್ಚಾತ್ತಾಪ", "ತಿರುಗೇಟು". ಎಲ್ಲಾ ನಾಟಕಗಳೂ ಅಮೆರಿಕೆಯಾಧ್ಯಂತ ಹಲವಾರು ಪ್ರದರ್ಶನಗೊಂಡಿವೆ. ಶ್ರೀ ಕೃಷ್ಣ ಸಂಧಾನ ನಾಟಕ ರಂಗಧ್ವನಿಯ 8ನೇ ಪ್ರದರ್ಶನ. ಕನ್ನಡಿಗರು ಬಂದು ಈ ಹಾಸ್ಯ ನಾಟಕವನ್ನು ನೋಡಿ ನಕ್ಕು ನಲಿಯಬೇಕಾಗಿ ಕೋರಿಕೆ.
ನಾಟಕದ ವಿವರ
ರಚನೆ : ವಿಎಸ್ ಅಶ್ವಥ್
ನಿರ್ದೇಶನ : ವಲ್ಲೀಶ ಎಂ ವಿ ಶಾಸ್ತ್ರಿ
ಪಾತ್ರ ಪರಿಚಯ
1. ನಾಟಕದ ಮೇಷ್ಟ್ರು : ವಲ್ಲೀಶ ಎಂ ವಿ ಶಾಸ್ತ್ರಿ
2. ದುರ್ಯೋಧನ : ಡಾ|| ಮಾರುತಿ ಪ್ರಸಾದ್
3. ದುಶ್ಯಾಸನ : ಶಂಕಂ ಜಗನ್ನಾಥ್
4. ಶ್ರೀ ಕೃಷ್ಣ : ಸೋಮಶೇಖರ್
5. ಸಂಗಮೇಶ್ವರ : ವೆಂಕಟೇಶ್ ಎಂ. ಸಿ.
6. ಭೀಷ್ಮ : ಶ್ರೀನಿವಾಸ್ ಟಿ ವಿ
7. ವಿಧುರ : ವಿಜಯ್ ಕೊಟ್ರಪ್ಪ
8. ಶಕುನಿ : ಅರುಣ್ ಮಾಧವ್
9. ರುಕ್ಮಿಣಿ : ಮೀನಾ ಅರುಣ್ ಮಾಧವ್
ಪ್ರಸಾಧನ : ವಿದ್ಯಾ ವಲ್ಲೀಶ್
ಉಡಿಗೆ ತೊಡಿಗೆ : ಯಶವಂತ್ ದೇಶಪಾಂಡೆ, ಗುರು ನಾಟಕ ಸಂಸ್ಥೆ, ಹುಬ್ಬಳ್ಳಿ. [ಕನ್ನಡ ನಾಟಕ]












Click it and Unblock the Notifications