ಆಂಗ್ಲನಾಡಿನಲ್ಲಿ ಯುವಕನ್ನಡಿಗರ ಮೇಳ

Big Ben, London
ಬೆಂಗಳೂರು, ಏ. 21 : ಇದೇ ಏಪ್ರಿಲ್ 24 ಶನಿವಾರ ಮತ್ತು 25 ಭಾನುವಾರ ಆಂಗ್ಲನಾಡಿನ 'ಸ್ಟೋಕ್ ಆನ್ ಟ್ರೆಂಟ್' ನಗರದಲ್ಲಿ ಯುವಕನ್ನಡಿಗರ ಮೇಳ ಅದ್ದೂರಿ ಕಾರ್ಯಕ್ರಮ ಏರ್ಪಾಟಾಗಿದೆ. ಇದೇ ಮೊದಲನೆಯಬಾರಿ ಆಂಗ್ಲನಾಡಿನ ಎರಡನೆಯ ಪೀಳಿಗೆಯ ಕನ್ನಡ ಯುವಕ ಯುವತಿಯರು ತಮ್ಮ ನೇತೃತ್ವದಲ್ಲೇ ಸಂಪೂರ್ಣವಾಗಿ ನಡೆಸಲಿರುವ ಈ ಯುವಕನ್ನಡಿಗರ ಮೇಳ, ಹೊರದೇಶದಲ್ಲಿ ನೆಲಸಿರುವ ಈ ಕನ್ನಡಿಗರ ವಿಶಿಷ್ಟ ಕಾರ್ಯಕ್ರಮವಾಗಲಿದೆ.

ಪರದೇಶದಲ್ಲಿ ಕನ್ನಡದ ಉಳಿವು ಮತ್ತು ಏಳಿಗೆಗಾಗಿ ಹಿರಿಯರು ದುಡಿದು ದುಡಿದು ಸುಸ್ತಾಗಿದ್ದಾರೆ. ಇನ್ನು ಮುಂದೆ ಕನ್ನಡದ ಕೆಲಸಗಳನ್ನು ನಾವು ಕೈಗೆತ್ತಿಕೊಳ್ಳೋಣ ಎನ್ನುತ್ತಿದ್ದಾರೆಯೇ ಕನ್ನಡ ಹುಡುಗರು ಮತ್ತು ಹುಡುಗಿಯರು?

ಆಂಗ್ಲನಾಡಿನ ಕನ್ನಡಬಳಗ ಯುಕೆ 2008 ಆಗಸ್ಟ್ ನಲ್ಲಿ ತನ್ನ ರಜತಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದೆ. ಅದರ ನೆನಪುಗಳನ್ನು ಹೊತ್ತು ತರುವ ವಿಶೇಷ ಸಂಚಿಕೆಯನ್ನು ಈ ಯುವಮೇಳದಲ್ಲಿ ಬಿಡುಗಡೆ ಮಾಡಲಿದೆ.

ಯುವಮೇಳದಲ್ಲಿ ಈಟೀವಿಯ "ಎದೆತುಂಬಿ ಹಾಡುವೆನು" ಪ್ರತಿಭಾನ್ವಿತ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀಮತಿ ಶ್ರುತಿ ಸುಧೀರ್ ಅವರಿಂದ ಸುಗಮ ಸಂಗೀತ, ಸುವರ್ಣ ಟಿವಿಯ Confident Star Singer ಸ್ಪರ್ಧೆಯಲ್ಲಿ ಹಾಡಿದ್ದ ಸಂಗೀತಾ ರಾಜೀವ್ ಅವರಿಂದ ಕನ್ನಡ ಚಲನಚಿತ್ರಗೀತೆ, ಚಿತ್ರಲೇಖ ನೃತ್ಯ ಕಲಾವಿದರಿಂದ 'ಪಂಚತಂತ್ರ' ನೃತ್ಯ ನಾಟಕಾಭಿನಯ ಮತ್ತು ಡಾ. ಜ್ಯೋತ್ಸ್ನಾ ಶ್ರೀಕಾಂತ್ ಮತ್ತು ಸಂಗಡಿಗರಿಂದ 'ಕಲನ' ಸಂಗೀತವೇ ಮುಂತಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಎರಡು ದಿನಗಳ ಸಮಾರಂಭದ ಹೆಚ್ಚಿನ ವಿವರಗಳಿಗೆ ಕನ್ನಡಬಳಗ ಯುಕೆಯ ಅಂತರ್ಜಾಲ ತಾಣವನ್ನು ಒಮ್ಮೆ ನೋಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+