ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಕಾಶ್ ರಾವ್ ಪಯ್ಯಾರ್ ಈಗ 'ಮಯೂರ'

|
Google Oneindia Kannada News

Prakashrao Payyar, Sharjah
ಶಾರ್ಜಾ ಕರ್ನಾಟಕ ಸಂಘದ ವತಿಯಿಂದ ನೀಡುತ್ತಿರುವ 2009ನೇ ಸಾಲಿನ 'ಮಯೂರ ಪ್ರಶಸ್ತಿ' ಪುರಸ್ಕಾರಕ್ಕೆ ಕನ್ನಡ ಸಾಹಿತಿ, ರಂಗ ನಿರ್ದೇಶಕ ಹಾಗೂ ಸಂಘಟಕ ಪ್ರಕಾಶ್ ರಾವ್ ಪಯ್ಯಾರ್ ಅವರು ಪಾತ್ರರಾಗಿದ್ದಾರೆ

ಕಳೆದ ಇಪ್ಪತೈದು ವರ್ಷಗಳಿಂದ ಮುಂಬೈ ಹಾಗೂ ಯು.ಎ.ಇ.ಯಲ್ಲಿ ನೆಲೆಸಿ ಸತತ ಕನ್ನಡ ಚುಟುವಟಿಕೆಗಳನ್ನು ಹಮ್ಮಿಕೊಂಡು ಕಾರ್ಯ ಪ್ರವೃತ್ತರಾಗಿರುವ ಪ್ರಕಾಶ್ ರಾವ್ ಪಯ್ಯಾರ್ ಅವರ ಎರಡು ಸ್ವರಚಿತ ನಾಟಕಗಳು, ಎರಡು ಕವನ ಸಂಕಲನಗಳು ಮೂರು ಸಂಪಾದಿತ ಕೃತಿಗಳು ಸೇರಿದಂತೆ ಏಳು ಕೃತಿಗಳು ಪ್ರಕಟಗೊಂಡಿವೆ.

ದುಬೈಯಲ್ಲಿ ಗಿರೀಶ್ ಕಾರ್ನಾಡರ ನಾಗಮಂಡಲ, ಹಯವದನ ಹಾಗೂ ಒಡಕಲು ಬಿಂಬ ನಾಟಕಗಳನ್ನು ನಿರ್ದೇಶಿಸಿ ರಂಗ ಏರಿಸಿದ ಕೀರ್ತಿ ಪ್ರಕಾಶ್ ರಾವ್ ಪಯ್ಯಾರ್ ಅವರಿಗೆ ಸಲ್ಲುತ್ತದೆ. ಉತ್ತಮ ಸಂಘಟಕರಾಗಿರುವ ಇವರು ಧ್ವನಿ ಎಂಬ ಸಂಸ್ಥೆಯನ್ನು 1985ರಲ್ಲಿ ಅಸ್ತಿತ್ವಕ್ಕೆ ತಂದು ಆ ಮೂಲಕ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ಸತತವಾಗಿ ನಡೆಸುತ್ತಾ ಬಂದಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ತಾ.13.11.2009ರ ಶುಕ್ರವಾರ ಶಾರ್ಜಾದಲ್ಲಿರುವ ಕೊಹಿನೂರ್ ಹೋಟೆಲ್ ಸಭಾಗೃಹ, ಅಜ್ಮಾನದಲ್ಲಿ ನೆರವೇರಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X