ದುಬೈಯಲ್ಲಿ ಜೂ. 26ರಂದು ರಂಗ ಸಿರಿ ಉತ್ಸವ
ದುಬೈ,
ಜೂ. 25 : ಧ್ವನಿ ಪ್ರತಿಷ್ಠಾನದ ರಂಗ ಸಿರಿ ಉತ್ಸವ 26ನೇ ಜೂನ್ 2009, ಶುಕ್ರವಾರ ಸಂಜೆ 4.30 ಗಂಟೆಯಿಂದ ಅಲ್ ನಾಸರ್ ಲೀಜರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನೆರವೇರಲಿರುವುದು. id="toptextpromo">ಉತ್ಸವದ
ಅಂಗವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಲೇಖಕ ಗಿರೀಶ್ ಕಾರ್ನಾಡರ 'ಒಡಕಲು ಬಿಂಬ' ನಾಟಕ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಮುಖ್ಯ ಭೂಮಿಕೆಯಲ್ಲಿ ಗೋಪಿಕ ಮಯ್ಯ ಹಾಗೂ ಸರ್ವೊತ್ತಮ್ ಶೆಟ್ಟಿ ಅಭಿನಯಿಸಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಾಗಿಣಿ
ಭರಣ ಅವರ ಕೂಚುಪುಡಿ ನೃತ್ಯ ಮತ್ತು ರಂಗಗೀತೆಗಳ ವಿಶೇಷ ಕಾರ್ಯಕ್ರಮಗಳಿವೆ. ಪ್ರಖ್ಯಾತ ರಂಗ ನಿರ್ದೇಶಕ ಮತ್ತು ಚಲನಚಿತ್ರ ನಿರ್ದೇಶಕ ಟಿ.ಯಸ್.ನಾಗಾಭರಣ ಹಾಗೂ ಡಾ. ಬಿ.ವಿ ರಾಜಾರಾಂ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಮಾರಂಭಕ್ಕೆ ಯು.ಎ.ಇ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ರಂಗ ಸಿರಿ ಉತ್ಸವದ ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿ ವಿನಂತಿಸಿ ಕೊಂಡಿದೆ.











Click it and Unblock the Notifications