ಕಪ್ಪಣ್ಣ, ಜರಗನಹಳ್ಳಿಗೆ ದುಬೈ ಧ್ವನಿ ಗೌರವ

ದುಬೈ, ಜೂ. 12 : ಧ್ವನಿ ಪ್ರತಿಷ್ಠಾನದ ಇಪ್ಪತ್ತಮೂರನೇ ಹುಟ್ಟುಹಬ್ಬ 20.06.2008 ನೇ ಶುಕ್ರವಾರ ಸಂಜೆ 5.30 ಕ್ಕೆ ದುಬೈನ ಭಾರತೀಯ ದೂತವಾಸ ಸಭಾಗೃಹದಲ್ಲಿ ನೆರವೇರಲಿದೆ. ಇದೇ ಸಂದರ್ಭದಲ್ಲಿ ಗಿರೀಶ್ ಕಾರ್ನಾಡರ ಪ್ರಖ್ಯಾತ ನಾಟಕ "ಹಯವದನ"ವನ್ನು ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ರಂಗವೇರಿಸಲಾಗುವುದು.

ಕಾರ್ಯಕ್ರಮದಲ್ಲಿ ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು.ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜರಗನಹಳ್ಳಿ ಶಿವಶಂಕರ ಅವರನ್ನು "ಕಾವ್ಯ ಕ್ಷೇತ್ರದ ಸಾಧನೆಗಾಗಿ" "ಧ್ವನಿ ಪುರಸ್ಕಾರ-2008" ನೀಡಿ ಗೌರವಿಸಲಾಗುವುದು. ಶ್ರೀನಿವಾಸ ಕಪ್ಪಣ್ಣ ಅವರಿಗೆ "ಧ್ವನಿ-ಶ್ರೀರಂಗ ರಂಗ ಪ್ರಶಸ್ತಿ" ನೀಡಿ ಗೌರವಿಸಲಾಗುವುದು.

ನಾಟಕಕ್ಕೆ ಉಚಿತ ಪ್ರವೇಶವಿದ್ದು ರಂಗಾಸಕ್ತ ಯು.ಎ.ಇ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿರುವರು.

ಹೆಚ್ಚಿನ ವಿವವರಗಳಿಗೆ ಧ್ವನಿ ಪ್ರತಿಷ್ಠಾನದ ಕಾರ್ಯದರ್ಶಿ ಗಣೇಶ್ ಕುಲಾಲ್ ಅವರನ್ನು ಸಂಪರ್ಕಿಸಿ . ಪೋಸ್ಟ್ ಬಾಕ್ಸ್ ಸಂಖ್ಯೆ 25017, ಶಾರ್ಜಾ.
ಇಮೇಲ್ : [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+