ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ಮನಿಯಲ್ಲಿ ವೇದಬ್ರಹ್ಮ ಸುಬ್ರಾಯ ಶರ್ಮ

By ಲೇಖಕ : ಚಿತ್ರದುರ್ಗ ಸಂಜೀವ ಮೂರ್ತಿ
|
Google Oneindia Kannada News

Vedabrahma Subbaraya Sharmaಕರ್ನಾಟಕದ ಶಂಕರರೆಂದೇ ಪ್ರಸಿದ್ಧರಾದ ಹೊಳೆನರಸೀಪುರದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳ ಸಾಕ್ಷಾತ್ ಶಿಷ್ಯರಾದ ವೇದಬ್ರಹ್ಮ ಕೆ.ಜಿ. ಸುಬ್ರಾಯ ಶರ್ಮರು ಮೇ 25ರಿಂದ ಹದಿನೈದು ದಿನಗಳ ಕಾಲ ಜರ್ಮನಿ ಪ್ರವಾಸ ಕೈಗೊಂಡಿದ್ದಾರೆ. ಅವರು ಬರ್ಲಿನ್ ನಲ್ಲಿ 15 ದಿನಗಳ ಕಾಲ ನಾನಾ ಯೂನಿವರ್ಸಿಟಿಗಳಲ್ಲಿ ಹಾಗೂ ಇಂಡಿಯನ್ ಎಂಬೆಸಿಯಲ್ಲಿ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರವಚನಗಳನ್ನು ನೀಡಲಿದ್ದಾರೆ.

ವೇದ ಮಂತ್ರಗಳ ಅರ್ಥ ಹಾಗೂ ಪರಿಣಾಮ, ನಮಗೆ (ಪ್ರಪಂಚಕ್ಕೆ) ವೇದಾಂತದ ಆವಶ್ಯಕತೆ, ಶ್ರೀಮದ್ಭಗವದ್ಗೀತಾ ಭಾಷಾ ಸೌಂದರ್ಯ ಮತ್ತು ಮಾಧುರ್ಯ, ಉಪನಿಷತ್ತುಗಳ ಮಹತ್ತ್ವ ಎಂಬ ವಿಷಯಗಳ ಬಗ್ಗೆ ಹಾಗೂ ಮುಖ್ಯವಾಗಿ ಭಾರತೀಯ ರಾಯಭಾರಿ ಕಚೇರಿಯ ಸಭಾಂಗಣದಲ್ಲಿ ಎಂ.ಎ. ಸಂಸ್ಕೃತ ವಿದ್ಯಾರ್ಥಿಗಳಿಗಾಗಿ ಸಂಸ್ಕೃತದಲ್ಲಿ "ಬಾದರಾಯಣರ ಬ್ರಹ್ಮಸೂತ್ರ ಶಾಂಕರ ಭಾಷ್ಯ" ಕುರಿತು ಜೂನ್ 6ರಂದು ಉಪನ್ಯಾಸಗಳನ್ನು ಮಾಡಲಿದ್ದಾರೆ.

ವೇ|| ಶರ್ಮರು ತಮ್ಮ ವಿದ್ಯಾಗುರುಗಳಾದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳ ಬಳಿ ಪುರಾತನ ಗುರುಕುಲ ಪದ್ಧತಿಯಲ್ಲಿ 16 ವರ್ಷಗಳ ಕಾಲ ಗುರುಸೇವೆಯನ್ನು ಮಾಡಿ , ಇಲ್ಲಿಯವರೆಗೂ ದೇಶ ವಿದೇಶಗಳಲ್ಲಿ ಸುಮಾರು 75,000 ತಾಸುಗಳ ವೇದಾಂತ ಪ್ರವಚನಗಳನ್ನು ಜಾತಿ, ಮತ, ಕುಲ, ಪಂಥ, ಇತ್ಯಾದಿಗಳ ಭೇದವಿಲ್ಲದೆ ಎಲ್ಲ ಮಾನವರಿಗೂ ಉಣಬಡಿಸುತ್ತಿದ್ದಾರೆ. ಅದರಲ್ಲೂ ಶಾಂಕರ ಪ್ರಸ್ಥಾನತ್ರಯ ಭಾಷ್ಯಗಳನ್ನು ವೇದಾಂತಗಳಲ್ಲಿ ಭಗವತ್ಪಾದ ಶಂಕರರು ತಿಳಿಸಿಕೊಟ್ಟಿರುವಂತೆ ಅಧ್ಯಾರೋಪ ಅಪವಾದ ಕ್ರಮದಲ್ಲಿ ಆತ್ಮನ ಅಂದರೆ ತನ್ನ ನಿಜಸ್ವರೂಪವನ್ನು ತಿಳಿಸಿಕೊಡುವದರಲ್ಲಿ ಅಗ್ರಗಣ್ಯರೆಂದರೆ ತಪ್ಪಾಗಲಾರದು.

ಶರ್ಮರು ಕನ್ನಡ, ಸಂಸ್ಕೃತ, ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪೂರ್ವ ಸಿದ್ಧತೆ ಇಲ್ಲದೆ ನಿರರ್ಗಳವಾಗಿ ಪ್ರವಚನ ಮಾಡುವದರಲ್ಲಿ ನಿಷ್ಣಾತರು. ಇವರ ಎಲ್ಲಾ ಕಾರ್ಯಕ್ರಮಗಳು ಪವಿತ್ರ ಭಾರತದ ಪತಾಕೆಯನ್ನು , ಹೆಚ್ಚುಗಾರಿಕೆಯನ್ನೂ, ಶ್ರೇಷ್ಠತೆಯನ್ನೂ ಪ್ರತಿಪಾದಿಸಲು ಎಲ್ಲೆಡೆ ಸಹಕಾರ ಸಿಗಲಿ ಮತ್ತು ಭಾರತಕ್ಕೆ ಸುಖವಾಗಿ ಮರಳಲಿ ಎಂದು ಹಾರೈಸೋಣ.

The Berlin Itenerary :

A. Subbaraya Sharmas talk is scheduled on 6th June at 1800 hrs in the embassy auditorium.

Rakesh Ranjan
Counsellor (Education & Culture)
Embassy of India
Tiergartenstrasse 17, 10785 Berlin
Tel: 0049-30-25 79 54 02
Fax: 0049-25 79 54 10
Email: [email protected]
Internet: www.indianembassy.de

B.

1. 25.05.2008 1900 hrs Berlin : Lecture in English about the Meaning and effects of Mantras

2. 30.05.2008 1800 hrs Potsdam (Berlin) Havana, followed by discourse on Vedas

3. 31.05.2008 1600 hrs Potsdam (Berlin): Need of Upanishads in this modern world.

4. 04.06.2008 1500hrs Leipzig: Giving a talk at the MA(Sanskrit) students on the sweetness of language in Bhagavadgita

5. 06.06.2008 1800hrs Berlin: Giving a talk at the Embassy of India to invited guests on Brahmasutra Shaankara Bhaashya in Sanskrit.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X