ನೋಟ -1 : ರೆಡಿಂಗ್‌ನಲ್ಲಿ ಯುಗಾದಿ ಕಲರವದೂರದ ಊರಲ್ಲಿ ಮಾವಿನ ಚಿಗುರು.. ಕೋಗಿಲೆ ಗಾನ


ರೆಡಿಂಗ್‌ಗೆ ಯುಗಾದಿಯ ಚಿಗುರು ಸ್ವಲ್ಪ ತಡವಾಗಿ ಬಂತು. ಆದರೇನಂತೆ ರೆಡಿಂಗ್‌ ತುಂಬಾ ಹೊಸ ಚಿಗುರು ಹೂವುಗಳ ಪರಿಮಳ ಇದ್ದೇ ಇದೆ.

  • ರಾಜು ಹಿರೇಗೌಡರ ಮತ್ತು ವೇದಾ
Ugadi celebration in Reading, UKದೇವಸ್ಥಾನದ ಹೆಬ್ಬಾಗಿಲಲ್ಲಿ ಯುಗಾದಿ ಶುಭಾಶಯ ಇರುವ ತೋರಣ. ಒಳಗೆ ಬರುತ್ತಿದ್ದಂತೆ ಕನ್ನಡದ ಬ್ಯಾಡ್ಜ್‌ , ಹೆಂಗಸರಿಗೆ ಹೂವು ಹಾಗು ಪನ್ನೀರಿನಿಂದ ಸ್ವಾಗತ. ಸಿರಿಗನ್ನಡಂ ಗೆಲ್ಗೆಯೆನ್ನುವ ಬ್ಯಾಡ್ಜ್‌ ಎಲ್ಲರ ಎದೆಯಮೆಲೆ ಮೆರೆಯುತ್ತಿದ್ದರೆ, ನಾವು ಪರದೇಶದಲ್ಲಿರುವ ಭಾವನೆಯೆ ಹೊರಟು ಹೋಗಿತ್ತು . ಕನ್ನಡಿಗರು ಎಂಬ ಹೆಮ್ಮೆ ತೋರುತ್ತಿತ್ತು.

ರಂಗಮಂಟಪವನ್ನು ಸಿಂಗರಿಸಲಾಗಿತ್ತು. ಅರ್ಚನಾ ಹಾಗೂ ಭಾರ್ಗವಿ ಅವರು ಪುರಂದರ ದಾಸರ ಕೀರ್ತನೆ ಮೂಲಕ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೀರ್ತನೆ ಹಾಡುವಾಗಲೆ ಕೆಳಗಡೆ ಗಣೇಶನಿಗೆ ಶ್ರೀಮತಿ ಗಾಯತ್ರಿ, ಮುಂತಾದವರು ಆರತಿ ಮಾಡಿ , ನಂತರ ಎಲ್ಲರಿಗೂ ಬೇವು-ಬೆಲ್ಲ ಹಂಚಿದರು.

ವಿನಯ್‌ ರಾವ್‌ ಅವರು ಚಿಕ್ಕದಾಗಿ -ಚೊಕ್ಕವಾಗಿ ಸ್ವಾಗತ ಭಾಷಣ ಮಾಡಿ, ರಂಗಮಂಟಪದಲ್ಲಿ ಮುಂದಿನ ಕಾರ್ಯಕ್ರಮಗಳನ್ನು ನಡೆಸಿಕೂಡಲು ಪವನ್‌ ಹಾಗು ಗಾಯತ್ರಿಯವರಿಗೆ ಅನುವು ಮಾಡಿಕೊಟ್ಟರು. ಪವನ್‌ ಹಾಗೂ ಗಾಯತ್ರಿ, ಪ್ರತಿಯಾಂದು ಕಾರ್ಯಕ್ರಮಗಳ ವಿವರಗಳ ನಡುವೆ ತಿಳಿ ಹಾಸ್ಯ ಸೇರಿಸಿ ಕಾರ್ಯಕ್ರಮ ನಡೆಸಿಕೊಟ್ಟರು.

ಹಾಡು-ಕುಣಿತ ವೈಭೋಗ

ಕುಮಾರಿ ಅನು ಮತ್ತು ಸೊನು ಅವರಿಂದ ‘ರಿಷಿ’ ಚಿತ್ರದ ‘ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ’ ಎನ್ನುವ ನ್ಯತ್ಯ, ಹಬ್ಬದ ಕಳೆ ಹೆಚ್ಚಿಸಿತು, ಈ ದೃಶ್ಯ ಕಣ್ಮರೆಯಾಗುತಿದ್ದಂತೆ, ವಸಂತ ಋತುವಿನ ಕೋಗಿಲೆ ಶ್ರೀದೇವಿ ಅವರು ಹಾಡಿದ ಬೇಂದ್ರೆ ಅವರ ಕವನ ‘ಯುಗ-ಯುಗಾದಿ ಕಳೆದರು’ ಆರಂಭವಾಯಿತು. ನಂತರ ಜಿ.ಎಸ್‌.ಶಿವರುದ್ರಪ್ಪ ಅವರ ಕವನ ‘ಎದೆ ತುಂಬಿ ಹಾಡಿದೆನು’ ಹಾಡನ್ನು ಹಾಡಿದರು.

ಗಾಯತ್ರಿ ಹಾಗು ಪವನ್‌ ತಂಡದವರಿಂದ ಚನ್ನವೀರ-ಕಣವಿ ಅವರ ‘ವಿಶ್ವ-ವಿನೂತನ ಕವನ’ ಸೊಗಸಾಗಿ ಬಂತು. ಎಂ.ಬಿ.ರೇಷ್ಮಾ ಅವರ ಭಾವಗೀತೆಯ ನಂತರ ಬಂದ ‘ಜನುಮದ ಜೋಡಿ’ ಶ್ರೀದೇವಿ ಮತ್ತು ವಿಜೇಂದ್ರ ಅವರುಗಳು ಹಾಡಿದ ‘ಗಂಧದ ಗುಡಿ’ ಚಿತ್ರದ ಹಾಡು ಸೊಗಸಾಗಿತ್ತು. ನೆನಪಿನ ಲೋಕದಿಂದ ವಾಸ್ತವ ಪ್ರಪಂಚಕ್ಕೆ ಕರೆತಂದದ್ದು,

ರಸಮಯ ಭೋಜನ

ಶಶಿಕಾಂತ ಹಾಗು ತಂಡದವರು ವ್ಯವಸ್ಥೆ ಮಾಡಿದ್ದ ಘಮ-ಘಮಿಸುವ ಭೋಜನ. ಈ ಸಲ ಉತ್ತರ ಕರ್ನಾಟಕದ ಸಿಹಿ ಮಂಡಿಗೆ ತರಿಸಲಾಗಿತ್ತು. ಇದನ್ನು ಬಳ್ಳಾರಿಯಿಂದ ತರಿಸಿ ಇಲ್ಲಿಯ ಜನರಿಗೆ ಪರಿಚಯಿಸಿದವರು ಪವನ್‌. ಊಟದ ಸಮಯದಲ್ಲಿ ಡಾ. ಮೋಹನ್‌ ಅವರು ಚಿತ್ರಗೀತೆ ಹಾಡಿದರು.

ಊಟ ಮುಗಿಯಿತು ಈಗ ಆಟದ ಸಮಯ. ರಂಗಮಂಟಪದ ಮೇಲೆ ಮಮ್ಮಿ ಆಟವನ್ನು ಎಲ್ಲರೂ ಆನಂದಿಸಿದರು. ದಿವಂಗತ ಪೂರ್ಣಚಂದ್ರ ತೇಜಸ್ವಿ ಅವರ ಆತ್ಮ ಶಾಂತಿಗಾಗಿ ಒಂದೆರಡು ನಿಮಿಷ ಮೌನಚರಣೆ ನಡೆಯಿತು. ನಂತರ ವೀರುಪ್ರಸಾದ ಹಾಗು ತಂಡದವರಿಂದ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಎನ್ನುವ ಹಾಡನ್ನು ಹಾಸ್ಯಾಸ್ಪದವಾಗಿ ಹಾಡಿ, ರಂಜಿಸಲಾಯಿತು.

ವಿಜಯ ಕೊಟ್ಟೂರು ಅವರು ಅರ್ಥಪೂರ್ಣವಾದ ಭಾಷಣ ಮಾಡಿದರು, ಕುಮಾರಿ ಬಿಂದು ಮತ್ತು ಅಶ್ವಿತಾ ಅವರ ‘ಗುರು’ ಚಿತ್ರದ ನೃತ್ಯ ಸೊಗಸಾಗಿತ್ತು. ನಂತರ ಡಾ. ಜೊತ್ಸನ ಶ್ರೀಕಾಂತ್‌ ಅವರು ವೈಯಲಿನ್‌ ನುಡಿಸಿದರು. ಕಾಫಿಯ ಸಮಯವನ್ನು ತಮ್ಮ ಹಾಡಿನ ಮೂಲಕ ನೆನಪು ಮಾಡಿದವರು ಅನ್ನಪೂರ್ಣ.

ಕುಮಾರಿ ಅನು ಮತ್ತು ಸೊನು ಮಾಡಿದ ‘ತಾಲ್‌’ ಚಿತ್ರದ ನೃತ್ಯ ಹಾಗು ಕುಮಾರಿ ನವ್ಯಾ ಮಾಡಿದ ಕ್ರೇಜಿ ಕಿಯ ರೇ ನೃತ್ಯ, ಐಶ್ವರ್ಯ ರೈನ ಮದುವೆ ನಂತರದ ನಿವೃತ್ತಿಯನ್ನು ತುಂಬುವಂತಿತ್ತು. ಅಭಿಷೇಕನ ಕೊರತೆ ಕಾಣುತ್ತಿತ್ತು!

ಮರೆಯಲಾರೆ ಯುಗಾದಿ..

ಇಂದು ನೆರೆದ ಮಹಿಳೆಯರಲ್ಲಿ ತುಂಬಾ ಚೆನ್ನಾಗಿ ಕಾಣುವ ಸರ್‌-ಪ್ರೈಜ್‌ ಬಹುಮಾನವು, ಚೇತನಾ ಅವರಿಗೆ ಸಿಕ್ಕಿತು. ಸುಂದರ್‌ ತಂಡದವರಿಂದ ಸನ್ಮಾನ-ಸಮಾರಂಭ ಎನ್ನುವ ನಾಟಕ ಚೆನ್ನಾಗಿ ಮೂಡಿಬಂತು.

ವಿನಯ್‌ ರಾವ್‌ ಅವರು ವಂದನಾರ್ಪಣೆ ಮಾಡಿದರು. ಇದೆಲ್ಲಾ ಮುಗಿದಾಗ ಸಮಯ 7-30. ಸಮಯ ಕಳೆದಿದ್ದು ಗೊತ್ತೆ ಆಗಲಿಲ್ಲ, ಭಾರವಾದ ಹೃದಯದಿಂದ ಮನೆಗೆ ಬಂದೆವು. ಸುಮರು 300 ಕನ್ನಡಿಗರು ಒಂದೆಡೆ ಸೇರುವಂತೆ ಮಾಡಿದ್ದಕ್ಕೆ ಧನ್ಯವಾದ.

ಒಂದೇ ಒಂದು ವಾಕ್ಯದಲ್ಲಿ ಹೇಳುತ್ತೇನೆ, ‘ನಂಗೆ ಮೊಮ್ಮಕ್ಕಳಾಗಿ, ನಾ ಮುದುಕನಾಗಿ, ತಲೆಗಿನ ಕೂದಲು ಉದರಿ ಬಾಯಾಗಿನ ಹಲ್ಲು ಉದರಿ ಬಚ್ಚನಾದ್ರು, ಈ ಕಾರ್ಯಕ್ರಮವನ್ನು ಮನಸ್ಸಿನ್ಯಾಗ ರಿವ್ಯಿಂಡ್‌ ಮಾಡಿ-ಮಾಡಿ ನೆನಪ್ಸಕೊಳ್ಳತೆನಿ’.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+