ಅನಿವಾಸಿ ಕನ್ನಡಿಗ,ಲೇಖಕ ಡಾ.ಪ್ರಸನ್ನ ಕುಮಾರ್ ನಿಧನ
ಬೆಂಗಳೂರು, ಜುಲೈ 28 : ಅಮೆರಿಕಾದ ಡೆಟ್ರಾಯಿಟ್ ನಲ್ಲಿ ನೆಲೆಸಿದ್ದ ಅನಿವಾಸಿ ಕನ್ನಡಿಗ ಮತ್ತು ಲೇಖಕ ಡಾ.ಪ್ರಸನ್ನ ಕೆ.ಕುಮಾರ್ ಇನ್ನಿಲ್ಲ.
ಜು.24ರಂದು ಹೃದಯಾಘಾತಕ್ಕೆ ಬಲಿಯಾದ ಅವರು, ಪತ್ನಿ ಡಾ.ಸಾವಿತ್ರಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಜುಲೈ 26ರಂದು ಪ್ರಸನ್ನ ಅವರ ಅಂತ್ಯ ಸಂಸ್ಕಾರ ನೆರವೇರಿತು.
ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಡಾ.ಪ್ರಸನ್ನ ಅವರು, ಹೊಸಕೆರೆಹಳ್ಳಿಯಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ 1ಲಕ್ಷ ರೂ.ಗಳನ್ನು ನೀಡಿದ್ದರು. ಕನ್ನಡ ಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಪ್ರಸನ್ನ, ತ್ರಿವೇಣಿ ಕನ್ನಡ ಸಂಘದ ಸಂಸ್ಥಾಪದ ಸದಸ್ಯರಲ್ಲಿ ಒಬ್ಬರು. ಅವರು ಹೊಯ್ಸಳ ಕನ್ನಡ ಸಂಘದ ಕಾರ್ಯನಿರ್ವಾಹಕ ಸಮತಿಯ ಸದಸ್ಯ ಹೆಚ್.ಆರ್.ಗೋಪಾಲಕೃಷ್ಣರ ಸಂಬಂಧಿ.
ಪ್ರಸನ್ನ ನಿಧನಕ್ಕೆ ಲೇಖಕ ಹರಿಹರೇಶ್ವರ ಶನಿವಾರ ಸಂತಾಪ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications