ಮೂಳೆಮಾಂಸದ ತಡಿಕೆಯಲ್ಲ, ಹೋರಾಟದ ಕುಡಿಗಳು ನಾವು
ನಮ್ಮ ಈ ಆತಂಕದ ಕ್ಷಣಗಳನ್ನು ನೀವು ಇತರರಿಗೆ ಮನವರಿಕೆಮಾಡಿಕೊಡುವುದಕ್ಕಿಂತ ಮುಖ್ಯವಾದ ಸಂಗತಿ ಇನ್ನೊಂದಿದೆ. ಅದೆಂದರೆ, ಪ್ರತಿಯೊಬ್ಬರೂ ಈ ಗುಂಪಿಗೆ ಈಗಲೇ ತಮ್ಮ ಹೆಸರನ್ನು ನೊಂದಾಯಿಸುವುದು ಅತೀ ಅತೀ ಮುಖ್ಯವಾಗಿದೆ.
ನಿಮ್ಮ ಸ್ನೇಹಿತರು, ಬಂಧು ಬಾಂಧವರು ಮತ್ತು ಓದುಗರಿಗೆ ಈ ವಿಷಯವನ್ನು ಅಗತ್ಯವಾಗಿ ರವಾನಿಸಿ. ಹೆಸರು ನೊಂದಾಯಿಸಿಕೊಳ್ಳುವುದು, ನೊಂದಾಯಿಸಿಕೊಂಡರಾಯಿತು ಎನ್ನುವುದಕ್ಕಿಂತ ಹೆಚ್ಚು ಸುಲಭ, ದಯವಿಟ್ಟು ನೆನಪಿಡಿ. ಈ ಸಮರಕ್ಕೆ ಅಸಂಖ್ಯ ಮಂದಿ ಸೈನಿಕರ ಅಗತ್ಯವಿದೆ. ನಮ್ಮ ಆಜನ್ಮ ವೈರಿಯ ವಿರುದ್ಧ ಹೋರಾಡುವುದಕ್ಕೆ ಎಷ್ಟು ತೋಳುಗಳಿದ್ದರೂ ಸಾಲದು. ದಯವಿಟ್ಟು ಎಲ್ಲರೂ ತಮ್ಮ ಹೆಸರನ್ನು ಈಗಲೇ ನೊಂದಾಯಿಸಿಕೊಳ್ಳವಂತೆ ತಿಳಿಸಿಬಿಡಿ. ಯಾಕೆಂದರೆ, ಕಾಲಮಿಂಚಿಹೋಗಬಾರದಲ್ಲ?
ನಿಮ್ಮ ಸಹಕಾರಕ್ಕೆ ಅನಂತ ಧನ್ಯವಾದಗಳು. ನೀವಿಲ್ಲದಿದ್ದರೆ ನಾನೇನೂ ಮಾಡಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಸರಿ. ಬನ್ನಿ, ನಾವೆಲ್ಲ ಒಂದು ಗುಂಪಿನ ಸದಸ್ಯರಾಗೋಣ. ಒಲವಿಂದ ಕೂಡಿ ಹುಡುಕೋಣ. ಹುಡುಕಿ ಅದನ್ನು ತರೋಣ.
ಪ್ರೀತಿಯಿಂದ, ರಶ್ಮಿ












Click it and Unblock the Notifications