ನೋಡಪ್ಪ ಕುಮಾರ ಕೇಳಪ್ಪ ಸರಿಯಾಗಿ..
'ಪ್ರೇಮಲೋಕ' ಸಿನಿಮಾ ಹಾಡಿನಂತೆ ದೇವು, ಕುಮ್ಮಿ ಮತ್ತು ಯಡ್ಡಿಯ ಹಾಡುಪಾಡು!
- ವೇದಾ ಹಾಗು ರಾಜು ಹಿರೇಗೌಡ್ರು, ಬ್ರಿಟನ್.
ದೇವೇಗೌಡ್ರು :

ನೋಡಪ್ಪ ಕುಮಾರ ಕೇಳಪ್ಪ ಸರಿಯಾಗಿ
ನೀ ಇಲ್ಲಿ ಸೇರೋದು ರಾಜಕೀಯ ಸಲುವಾಗಿ
ಜೆಡಿಎಸ್ ಪಕ್ಷ ನೀ ಇನ್ನು ಮಿಡ್ಲ ಯೇಜು
ಹುಷಾರಾಗಿರಬೇಕು , ಚೆನ್ನಾಗಿ ರಾಜಕೀಯ ಮಾಡಬೇಕು
ನಾ ತುಂಬಾ ಕಟ್-ನಿಟ್ಟು ತೆಲೆ ಕೆಟ್ಟರೆ ಗೆಟ್ ಔಟ್
ನಾ ಹೇಳಿದಂಗೆ ಕೇಳಬೇಕು ನಾ ಹೇಳಿದಂಗೆ ಮಾಡಬೇಕು
ಉಮ್... Understand?
Yes Dad.
Hello my Lovely man
Who are you? Who are you?
ಕನ್ನಡ ಬರೋಲ್ವ ಕಣ್ಣೆರೆಡು ಕಾಣಲ್ವ.
ಕನ್ನಡಕದೊಳಗಿಂದ ಕಾಣ್ತಿಲ್ಲ ನಿನ್ನಂದ.
ಹೌದೇನು ವಾಟಾಳ ಬಾಯಿಮುಚ್ಚಿಕೊಂಡು ಹೋಗತ್ತ.
ಗೌಡ್ರು ಮಗ ಅಂತ ಬಿಡತೀನಿ ನಾಳೆಯಿಂದ ಧರಣಿ ಕುತ್ಕೊತೀನಿ.
Understand?
Yes Boss
ಸುಂದರ ಯುವಕ ಕುಮಾರ ಸ್ವಾಮಿ ಬೇಟೆಯನಾಡಲು ಬಂದ..
ಎಲ್ಲಿಗೆ ಸಾರ್?
ವಿಧಾನ-ಸೌಧಕ್ಕೆ ಸಾರ್...
ಬೇಟೆಯ ಮರೆತು ರಾಜಕೀಯ ಸೊಗಸು ನೋಡುತ ನಿಂತ
ಯಾಕೆ ಸಾರ್?
ಏ ಯೋಚನೆ ಮಾಡಕೆ ಸಾರ್...
ವಿಧಾನಸೌಧದ ನಡುವೆ, ಅಮವಾಸೆಯಂತ ಸುಂದರ ಮನುಷ್ಯನ ಕಂಡ
ಹೌದಾ ಸಾರ್? ಹೌದು ಸಾರ್.
ಮನುಷ್ಯನ ನೋಡಿ ಹತ್ತಿರ ಹೋಗಿ ಮನುಷ್ಯನ ಕೈ ಹಿಡಿದುಕೊಂಡ
ಆಮೇಲೆ ಸಾರ್, ಹೇಳಿ ಸಾರ್?
ಹತ್ತಿರ ಕರೆಯುತ್ತಾ, ಕೈಯನ್ನು ಕುಲುಕುತ್ತಾ, ಕಣ್ಣನ್ನೆ ನೋಡುತ್ತಾ, ಸ್ವಲ್ಪ ನಗೆ ನಗುತ್ತಾ,
ಯಾರೋ ನೀನು ಚಲುವ ಅಂದ.. ನಿನ್ನ ಅಡ್ರಸ್ ಏನು ಅಂದ.
ಹಣೆಯಲ್ಲಿ ಬೆವರುತ್ತಾ, ಕೈಗಳು ನಡುಗುತ್ತಾ, ನೆಲವನ್ನೆ ನೋಡುತ್ತಾ ನುಡಿದರು ನಾಚುತ್ತಾ.
ನಾನು ಇನ್ನು ನಿಮಗೆ ಸ್ವಂತ ಅಂತ. ಹೆಸರು ಯ್ಯಡ್ಢಿ ಅಂತ.
ಬಂದರು ಸಾರ್, ಹೋಹೂ ಬಂದರು ಸಾರ್ ಹೋಹೂ.
ಸ್ಪೀಕರ್ರು ಸಾರ್ ಬಂದರು ಸಾರ್.
ನೀನೇನ ಯಡ್ಧಿಅಣ್ಣ ?
ಅಲ್ಲ ನಾ ಕುಮಾರಣ್ಣ
ಯಾರನ್ನ ನೋಡಬೇಕು?
ನಿಮ್ಮನ್ನೆ ನೋಡಬೇಕು
ಏನಾಗಬೇಕಿತ್ತು?
ಅಡಮ್ಮಿಟ್ಟಾಬೇಕಿತ್ತು
ಸರಿ ಈ-ಕಡೆ ಕಳುಸಿ ಸಾರ್.. ಶಟ್ಟಪ್ ಅಂದ್ರ ಬಾಯಿ ಮುಚ್ಚಿ ಸಾರ್
ಹೋಗಪ್ಪ ಕುಮಾರ ಅಲ್ಲೆ ಯಲ್ಲೊ ಅಡ್ಜಸ್ಟ್ ಮಾಡಕೊ
ನಿನಗ್ಯಾವುದು ಇಷ್ಟವೊ ಆ ಕುರ್ಚಿ ಸೆಲೆಕ್ಟ್ ಮಾಡ್ಕೋ ಈ ಕುರ್ಚಿ ಸೆಲೆಕ್ಟ್ ಮಾಡ್ಕೊ
ಬಂದ ಕೂಡಲೇ ಮೀಟಿಂಗ್ ಕಂಡಕೂಡಲೇ ಫೈಟ್ಟಿಂಗ್
ಶಟ್ಟರೆ ನೀವು ಅಲ್ಲಿ ಕುತೂಕೋ..
ಪ್ರಕಾಶ್ ನೀ ಇಲ್ಲಿ ಬಾರೊ
ಈಶ ನೀ ಕೈಯೆತ್ತು
ಅನಂತು ನಿ ಬಾಯಿ ಮುಚ್ಹಿಕೊ
ಒಳ್ಳೆ ಕೆಲಸವೆಲ್ಲ ಬಿಡಬೇಕು ಏನಿದ್ದರು ದುಡ್ಡು ಮಾಡಬೇಕು.
ಲಲ ಲಾ ಲಾ ಲಾ ಲಾಲ ಲಲ ಲಾ ಲಾ ಲಾಲ
20ತಿಂಗಳ ನಂತರ,ಯಡ್ಧಿ :
ಕುಮಾರ ಒಂದು ಕೇಳತೀನಿ ಇಲ್ಲ ಅನ್ನದೇ ಕೊಡ್ತೀಯಾ?
ನಿನ್ನ ಡಿಸಿಎಂ ಮಾಡ್ತೀನಿ, ನನಗೆ ಬೆಂಬಲ ಕೊಡ್ತೀಯ
ಮನಸಿನ ಆಸೆ ಹೇಳಲೇನು
ಗೌಡರ ಮಗ ನೀನು, 20ತಿಂಗಳು ಜೊತೆಗಿದ್ದೆ ನಾನು
ನಾ ನಿನಗೆ ಜೋಡಿ ಅಲ್ಲವೇನೂ?
ಯಡ್ಡಿ ಒಂದು ಹೇಳತ್ತೀನಿ ಇಲ್ಲ ಅನ್ನದೇ ಕೇಳ್ತೀಯಾ?
ನಿನ್ನ ಸಿಎಂ ಮಾಡತ್ತಿನಿ ಹೇಳು ಕೆಲಸ ಮಾಡ್ತೀಯ?
ನಿಜವಾದ ಗಂಡೆ ಅದ್ರೆ ನೀನು ಗೌಡ್ರನ್ನ್ ಗೆಲ್ಲು ನೀನು,
ಷರತ್ತನ್ನು ಒಪ್ಪು ನೀನು ಅಮೇಲೆ ಸಿಎಂ ಅಲ್ಲವೇನು?
ಇದು ನನ್ನನಿನ್ನ ರಾಜಕೀಯ ಚಿನ್ನ
ಈ ಗೀತೆ ಎಷ್ಟು ಸಾರಿ ಕೆಡವಿದರು ಚೆನ್ನ,
ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು
ಈ ರಾಜಕೀಯ ಗೀತೆಯು
ಸ್ವಲ್ಪ ದಿನಗಳ ನಂತರ :
ಹೇ ಮೋಸಗಾರನ ಹೃದಯ ಶೂನ್ಯನ
ನಿನಗೆ ಇಂದು ನಾ ಬೇಡವಾದೆನಾ
ಎಂದು ಯಡ್ಧಿ ಹೇಳಿಕೊಂಡು ಊರು-ಊರು
ತಿರುಗುತ್ತಿದ್ದಾರೆ...
ಭಾನುವಾರ ಚೆನ್ನರಾಯಪಟ್ಟಣದಲ್ಲಿ ಸಿಕ್ಕಿದ್ರೊ!












Click it and Unblock the Notifications