• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಶ್ಲೀಲ ಹರಟೆಗೂ ಬೆಲೆಯುಂಟೆ ?

By Super
|

ಜನಪ್ರಿಯ ರೇಡಿಯಾ ಕಂಪೆನಿ ಕ್ಲೀಯರ್‌ ಚಾನೆಲ್‌ ತನ್ನ ಆರು ಕೇಂದ್ರಗಳಲ್ಲಿ ಈತನ ಕಾರ್ಯಕ್ರಮ ರದ್ದು ಮಾಡಿತು. ಈತನ ಕಾರ್ಯಕ್ರಮಕ್ಕೆ ಬಹಳ ಸಾರಿ ದಂಡ ವಿಧಿಸಲಾಗಿದೆ. ಒಂದು ಅಂದಾಜಿನ ಪ್ರಕಾರ ಇಲ್ಲಿಯವರೆಗೆ ಈತನ ಕಾರ್ಯಕ್ರಮಗಳಿಗೆ ಒಟ್ಟು 2 ಮಿಲಿಯನ್‌ ಡಾಲರ್‌ ದಂಡ ವಿಧಿಸಲಾಗಿದೆ. ಆದರೆ ಈತನ ಕಾರ್ಯಕ್ರಮಗಳಿಂದ ಬರುವ ಆದಾಯದ ಮುಂದೆ ಈ ದಂಡ ಕ್ಷುಲ್ಲಕ. ಕೇಂದ್ರ ಪ್ರಸರಣ ಆಯೋಗ ದಂಡವನ್ನು 27,500 ಡಾಲರುಗಳಿಂದ 500,000 ಡಾಲರುಗಳಿಗೆ ಏರಿಸಲು ಉದ್ದೇಶಿಸಿದೆ. ಹಾಗೂ, ಯಾವುದೇ ರೇಡಿಯೋ ಕೇಂದ್ರ ಎಂಟು ವರ್ಷಗಳಲ್ಲಿ ಮೂರು ಬಾರಿ ನಿಯಮ ಉಲ್ಲಂಘನೆ ಮಾಡಿದರೆ ಅವುಗಳ ಪರವಾನಗಿ ರದ್ದು ಮಾಡಲು ಸಹಾ ಪಣ ತೊಟ್ಟಿದೆ.

ಜನವರಿ 2006 ರಿಂದ ಹೊವರ್ಡ್‌ ಯಾವುದೇ ರೇಡಿಯಾ ಕಾರ್ಯಕ್ರಮ ಮಾಡುವುದಿಲ್ಲ. ಇದರಿಂದ ರೇಡಿಯೋ ಸತ್ತೇ ಹೋಗುತ್ತಾ ? ಆತಂಕ ವ್ಯಕ್ತ ಪಡಿಸಿದವರು ಬಹಳ ಜನ. ಹೊವರ್ಡ್‌ ಏನೂ ದೇವರಲ್ಲ. ಈತ ಬರುವ ಮೊದಲೂ ರೇಡಿಯಾ ಇತ್ತು. ಈತ ಬಿಟ್ಟ ನಂತರವೂ ಇರುತ್ತೆ ಅನ್ನೋ ಜನ ಬಹಳ.

ಮಾಧ್ಯಮಗಳ ರಾಜ ಎಂದೇ ಕರೆಯಲ್ಪಡುವ ಈ ಹೊವರ್ಡ್‌ ಹುಟ್ಟಿದ್ದು ಜನವರಿ 12, 1954 ರಲ್ಲಿ, ಜ್ಯಾಕ್ಸನ್‌ ಹೈಟ್ಸ್‌, ನ್ಯೂಯಾರ್ಕ್‌ನಲ್ಲಿ. ಅಪ್ಪ ನ್ಯೂಯಾರ್ಕಿನ ರೇಡಿಯೋ ಸ್ಟೇಷನ್ನೊಂದರಲ್ಲಿ ಉದ್ಯೋಗಿ. ಓದಲು ಹೋಗಿದ್ದು ಬಾಸ್ಟನ್‌ ಯೂನಿವರ್ಸಿಟಿಗೆ. 1976ರಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ. ಕನೆಕ್ಟಿಕಟ್‌, ಡೆಟ್ರಾಯಿಟ್‌ ಮತ್ತು ವಾಶಿಂಗ್ಟನ್‌ ಗಳಲ್ಲಿ ರೇಡಿಯಾ ಡಿ.ಜೆ. ಆಗಿ ಕೆಲಸ. ಆದರೆ ಮೊದಲ ಯಶಸ್ಸು ಸಿಕ್ಕಿದ್ದು ನ್ಯೂಯಾರ್ಕಿನಲ್ಲೇ. 22 ವರ್ಷ ಸಂಸಾರದ ನಂತರ ಹೆಂಡತಿಯಿಂದ ವಿಚ್ಛೇದನ ಪಡೆದಿರುವ ಈತ ಮೂರು ಹೆಣ್ಣು ಮಕ್ಕಳ ತಂದೆ.

ಈತನಿಗೆ ಸಾಹಿತ್ಯದಲ್ಲೂ ಆಸಕ್ತಿಯಿದೆ! ಇಲ್ಲಿಯವರೆಗೆ ಈತನ ಎರಡು ಪುಸ್ತಕಗಳು ಪ್ರಕಟವಾಗಿವೆ. ಎರಡೂ ಪುಸ್ತಕಗಳೂ ಸೂಪರ್‌ಹಿಟ್‌. ಈತನ ಒಂದು ಪುಸ್ತಕ ‘ಪ್ರೈವೇಟ ಪಾರ್ಟ್ಸ್‌’ ಚಲನಚಿತ್ರವೂ ಆಗಿ ಯಶಸ್ಸು ಕಂಡಿದೆ. ಇದು ಆತನ ಆತ್ಮ ಕಥನ. ಈತ 1994ರಲ್ಲಿ ನ್ಯೂಯಾರ್ಕ್‌ ಗವರ್ನರ್‌ ಚುನಾವಣೆಗೂ ನಿಂತಿದ್ದ. ‘ದಿನದ ಸಮಯದಲ್ಲಿ ರಸ್ತೆ ನಿರ್ಮಾಣಕ್ಕೆ ನಿಷೇಧ’ ಮತ್ತು ಮರಣ ದಂಡನೆ ಶಿಕ್ಷೆ ವಾಪಸ್ಸು ತರುವುದು ಈತನ ಪ್ರಮುಖ ಪ್ರಣಾಳಿಕೆಗಳಾಗಿದ್ದವು. 1995ರಲ್ಲಿ, ನ್ಯೂಯಾರ್ಕಿನ ಗವರ್ನರ್‌ ಜಾರ್ಜ್‌ ಪಟಾಕಿ ‘ಹೊವರ್ಡ್‌ ಸ್ಟರ್ನ್‌’ ಬಿಲ್‌ ಪಾಸ್‌ ಮಾಡಿದರು. ಕೇವಲ ರಾತ್ರಿ ಹೊತ್ತಿನಲ್ಲಿ ಮಾತ್ರ ರಸ್ತೆ ನಿರ್ಮಾಣ. ಕಳೆದ ಸೋಮವಾರ ರಾತ್ರಿ ನ್ಯೂಯಾರ್ಕಿನ ಗೋಥೆಲ್ಸ್‌ ಸೇತುವೆಯ ರಸ್ತೆ ನಿರ್ಮಾಣದಿಂದ ನಿಂತ ಟ್ರಾಫಿಕ್‌ನಲ್ಲಿ ಎರಡು ಗಂಟೆ ಸಿಕ್ಕಿ ಹಾಕಿಕೊಂಡ ನಾನು, ಹೊವರ್ಡ್‌ ನನ್ನು ನೆನೆಸಿಕೊಂಡೆ.

1999ರಲ್ಲಿ ಫೊರ್ಬ್ಸ್‌ ಪತ್ರಿಕೆಯವರು ನೂರು ಶಕ್ತಿಶಾಲಿ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಈತನ ಹೆಸರೂ ಸೇರಿಸಿದ್ದರು. 6 ಫೀಟು 5 ಇಂಚು ಇರುವ ಈತ ಜಪಾನಿನ ಶೊಟೊಕಾನ್‌ ಕರಾಟೆಯಲ್ಲಿ ಬ್ರೌನ್‌ ಬೆಲ್ಟ್‌. ‘ಮೌಲ್ಯಗಳು ಪಾತಾಳ ಮುಟ್ಟಿವೆ. ಅದನ್ನೇ ಪ್ರತಿನಿಧಿಸಲು ನಾನಿಲ್ಲಿದ್ದೇನೆ’ ಎಂಬುದು ಆತನ ಪಂಚ್‌ ಲೈನ್‌.

ರೇಡಿಯೋದ ಸೆನ್ಸಾರಿಗೆ ಬೇಜಾರಾದ ಈತ ಇತ್ತೀಚಿಗೆ ಸಿರಿಯಸ್‌ ಸೆಟೆಲೈಟ್‌ ರೇಡಿಯಾ ಜೊತೆಯಲ್ಲಿ 5 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾನೆ. ಹೊವರ್ಡ್‌ ಗೆ ಈ 5 ವರ್ಷಗಳ ಒಪ್ಪಂದಕ್ಕೆ ಸಿಗುವ ದುಡ್ಡು ಎಷ್ಟು ಗೊತ್ತೆ? 500 ಮಿಲಿಯನ್‌ ಡಾಲರುಗಳು! ಸೆಟೆಲೈಟ್‌ ರೇಡಿಯೋ ಮತ್ತು ಟಿವಿಗೆ ಸೆನ್ಸಾರ್‌ ಇಲ್ಲ. ಬಹುತೇಕ ಎಲ್ಲ ಹೊಸ ಕಾರುಗಳಲ್ಲಿ ಸೆಟೆಲೈಟ್‌ ರೇಡಿಯೋ ಇದ್ದೇ ಇರುತ್ತೆ. ಆದರೆ ಈ ಸೆಟೆಲೈಟ್‌ ರೇಡಿಯಾ ಉಳಿದ (ಟೆರೆಸ್ಟೆರಿಯಲ್‌) ರೇಡಿಯಾಗಳಂತೆ ಪುಕ್ಕಟ್ಟೆ ಸಿಗುವದಿಲ್ಲ. ಈ ಸಿರಿಯಸ್‌ ರೇಡಿಯಾಗೆ ತಿಂಗಳಿಗೆ 12.95 ಡಾಲರ್‌ ಚಂದಾ ಪಾವತಿ ಮಾಡಬೇಕು. ಇದರ ಪ್ರಮುಖ ಪ್ರತಿಸ್ಪರ್ಧಿ ಎಕ್ಸ.ಎಮ್‌. ರೇಡಿಯಾ ಚಂದಾ ಹಣ ತಿಂಗಳಿಗೆ 9.95 ಡಾಲರ್‌. ಕೇವಲ 600,000 ಚಂದಾದಾರರಿರುವ ಸಿರಿಯಸ್‌ ರೇಡಿಯಾಗೆ ಈ ಹೊಸ ಒಪ್ಪಂದದಿಂದ ಹೆಣಗಲು ಇನ್ನೂ ಒಂದು ಮಿಲಿಯನ್‌ ಚಂದಾದಾರರು ಬೇಕು. ಹೊವರ್ಡ್‌ ನ 15 ಮಿಲಿಯನ್‌ ಫ್ಯಾನ್‌ ಗಳಲ್ಲಿ 2 ಮಿಲಿಯನ್‌ ಜನರಾದರೂ ದುಡ್ಡು ಕೊಟ್ಟು ಕಾರ್ಯಕ್ರಮ ಕೇಳ್ತಾರೆ ಅಂತ ಸಿರಿಯಸ್‌ ನಂಬಿಕೆ.

ಹೊವರ್ಡ್‌.ಕಾಮ್‌ನಲ್ಲಿ ಈತನ ಚಿತ್ರ ವಿಚಿತ್ರ ಭಂಗಿ ನೋಡಿ ನಗು ಬರುತ್ತೆ. ಸೆಟೆಲೈಟ್‌ಈ ದೇಶದಲ್ಲಿ ಬಹಳ ತರಹದ ಸ್ವಾತಂತ್ರ್ಯ ಇದೆ’ ಎನ್ನುವ ಹೊವರ್ಡ್‌ ಸ್ಟರ್ನ್‌ ಅನೇಕ ಕಿತಾಪತಿ ಮಾಡುತ್ತಲೇ ಇರುತ್ತಾನೆ. ಪ್ರಚಾರದ ಬೆಳಕಿನಲ್ಲಿರಲು ಇಂಥ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lewd...crimepopularity and punishment!! Meet Howard Stern of the clear radio and your neighbors favorite Entertainment Channel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more