• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನತದೃಷ್ಟ ಗೆಳೆಯನೊಬ್ಬನ ಕಥೆ

By Staff
|
 • ಮ. ವಿಜಯಾನಂದ್‌
 • ಟುಸಾನ್‌, ಅರಿಜೋನ, ಯು.ಸ್‌.ಎ.

  Vijayanand, Arizona, USತಮ್ಮ ಮಗ ಇಂಜಿನಿಯರೊ ಡಾಕ್ಟರೊ ಆಗುತ್ತಾನೆ, ಹೊರದೇಶಕ್ಕೆ ಹೋಗಿ ದುಡಿದು ಹಣವಂತನಾಗುತ್ತಾನೆ, ದೊಡ್ಡ ವ್ಯಕ್ತಿ ಆಗುತ್ತಾನೆ ಎಂದೆಲ್ಲ ನಮ್ಮ ಭಾರತದ ಹಲವು ತಂದೆ ತಾಯಂದಿರು ಆಸೆ ಪಡುತ್ತಾರೆ. ನಿಜವಾಗಿಯೂ ಈ ಕನಸುಗಳು ನನಸಾಗುವವೆ ? ಹೊರ ದೇಶಕ್ಕೆ ಹೋದವರೆಲ್ಲರೂ ಹಣವಂತರಾಗುವರೆ ?

  ಹಲವು ಅನುಭವಗಳನ್ನು ಹೋಲಿಸಿ ಆಳವಾಗಿ ಯೋಚಿಸಿದರೆ ನೀವು ಗಮನಿಸಬಹುದು, ಯಾವುದೇ ದೇಶಕ್ಕೆ ಹೋದರೂ ಕಷ್ಟ ಸುಖಗಳು ಮನುಷ್ಯನಿಗೆ ತಪ್ಪಿದ್ದಲ್ಲ ಹಾಗೂ ಹಣವಂತರು ಬಡವರು ಎಲ್ಲ ದೇಶದಲ್ಲೂ ಇದ್ದೇ ಇರುತ್ತಾರೆ. ಸಾಧಿಸುವ ಆಸೆ, ಆಕಾಂಕ್ಷೆ ಮತ್ತು ಛಲ ಇದ್ದವರು ಎಲ್ಲಾದರು ಮುಂದೆ ಬರುತ್ತಾರೆ. ಇಲ್ಲಿ ಹೊರದೇಶದ ವ್ಯಾಮೋಹವನ್ನಿಟ್ಟುಕೊಂಡು ಬಂದ ಒಬ್ಬ ಸ್ನೇಹಿತನ ಸಂಕಟದ ಒಂದು ಸನ್ನಿವೇಶದ ಬಗ್ಗೆ ಬರೆಯುತಿದ್ದೇನೆ. ಹಾಗೆಂದ ಮಾತ್ರಕ್ಕೆ ಇಲ್ಲಿ ಬರುವ ಎಲ್ಲರೂ ಸಂಕಟದಲ್ಲಿರುವರು ಎಂದೇನು ಅರ್ಥವಲ್ಲ ; ಮೇಲೆ ಹೇಳಿದ ಹಾಗೆ ಕೆಲವರು ಕಷ್ಟಪಡುತ್ತಾರೆ, ಕೆಲವರು ಸುಖವಾಗಿ ಇರುತ್ತಾರೆ, ಇನ್ನು ಕೆಲವರು ಹೋರದೇಶದಲ್ಲಿರುವ ಒಂದೇ ಕಾರಣಕ್ಕೆ ತಮ್ಮೆಲ್ಲಾ ಕಷ್ಟಗಳನ್ನ ಮುಚ್ಚಿಟ್ಟುಕೊಂಡು ತ್ರಿಶಂಕು ಸ್ಥಿತಿಯನ್ನ ಅನುಭವಿಸುತ್ತಾರೆ.

  ನಾಲ್ಕು ವರ್ಷಗಳ ಹಿಂದೆ ನಾನು ಅಮೇರಿಕಾಗೆ ಹೊಸದಾಗಿ ಬಂದಾಗ, ನನಗೆ ಈ ಮಿಶ್ರಸಂಸ್ಕೃತಿ ಮತ್ತು ಜನರನ್ನ ನೋಡಿದಾಗಲೆಲ್ಲ ಅವರ ರೀತಿ, ನಡವಳಿಕೆ, ಭಾಷೆಗಳನ್ನು ಗಮನಿಸುವುದರಲ್ಲಿ ತುಂಬಾ ಆಸಕ್ತಿಯಿತ್ತು. ನಮ್ಮ ದೇಶದವರನ್ನು ಕಂಡರಂತೂ ಎಲ್ಲಿಲ್ಲದ ಕುತೂಹಲ. ಇವರು ದಕ್ಷಿಣ ಭಾರತದವರಿರಬಹುದೇ ? ಅಥವಾ ಇವರು ಕನ್ನಡದವರೇ ಯಾಕಾಗಿರಬಾರದು, ಹೋಗಿ ಒಂದು ಮಾತು ಕೇಳೇಬಿಡೋಣ ಎಂದನ್ನಿಸುತಿತ್ತು. ಇನ್ನು ಕನ್ನಡ ಮಾತನ್ನ ಕೇಳಿದರಂತೂ ಎಲ್ಲಿಲ್ಲದ ಸಂತೋಷ, ತೀರಾ ಹತ್ತಿರದವರು ಸಿಕ್ಕರೇನೋ ಅನ್ನಿಸುತ್ತಿತ್ತು. ನಮ್ಮ ಅಕ್ಕ ಪಕ್ಕದ ಊರಿನವರಿರಬಹುದೆಂಬ ಕುತೂಹಲದಿಂದ ಅವರನ್ನ ಮಾತನಾಡಿಸಿ ಕೇಳುವವರೆಗೂ ಸಮಾಧಾನವೇ ಇರುತ್ತಿರಲಿಲ್ಲ. ಅಂಗಡಿಗಳಲ್ಲಿ, ಹೋಟೆಲುಗಳಲ್ಲಿ ಇನ್ನೂ ಹಲವಾರು ಕಡೆ ನನ್ನ ಈ ಥರದ ಪ್ರಯತ್ನ ನಡೆದೇ ಇದ್ದವು. ಈ ಪ್ರಯತ್ನಗಳು ಕ್ಷೀಣವಾದದ್ದು- ಹಲವು ಭಾರತೀಯರು ಸಣ್ಣ ನಗುವಷ್ಟರಲ್ಲೇ ಕಣ್ಮರೆಯಾದಾಗ, ಕಂಡರೂ ಕಾಣದಹಾಗೆ, ಅಥವಾ ನೋಡಿದರೂ ನೋಡದ ಹಾಗೆ ವರ್ತಿಸಿದ ಅನುಭವವಾದ ಮೇಲೆಯೆ.

  ನನ್ನ ಮಾತಿಗೆ ಉತ್ತರ ಕೊಟ್ಟ ಹಲವರಲ್ಲಿ ಈ ನನ್ನ ಸ್ನೇಹಿತನೂ ಒಬ್ಬ. ಈತ ನಮ್ಮ ಪಕ್ಕದ ರಾಜ್ಯವಾದ ತಮಿಳುನಾಡಿನವನು, ಹೆಸರು ಮುರುಳೀಧರ. ನಮ್ಮ ಅಪಾರ್ಟಮೆಂಟ್‌ಗೆ ತುಂಬಾ ಹತ್ತಿರ ಇದ್ದದ್ದರಿಂದ ನಮ್ಮ ಸ್ನೇಹ ಚೆನ್ನಾಗಿಯೇ ಬೆಳೆಯಿತು. ಕೆಲವೇ ದಿನಗಳಲ್ಲಿ ಕುಟುಂಬ ಸ್ನೇಹಿತರಾದೆವು, ನಾವು ಅವರ ಮನೆಗೆ ಹೋಗುವುದು ನಮ್ಮ ಮನೆಗೆ ಅವರು ಬರುವುದು ಸಾಮಾನ್ಯವಾಯಿತು. ನಾನು ಮೊದಲ ಸಲ ಅವರ ಮನೆಗೆ ಹೋದಾಗ ನನ್ನ ಮನಸಲ್ಲಿ ಮೂಡಿದ್ದು ಇನ್ನೂ ಹಸಿರಾಗೇ ಇದೆ. ಸುಮಾರು ದೊಡ್ಡ ಮನೆ, ಮನೆಯ ತುಂಬಾ ಚೊಕ್ಕವಾಗಿ ಜೋಡಿಸಿದ ಸಾಮಾನುಗಳು, ಈತ ನನಗಿಂತ ಈ ದೇಶಕ್ಕೆ 2 ವರ್ಷವಷ್ಟೇ ಹಳಬ, ಒಂದೆರಡು ವರ್ಷಗಳಲ್ಲಿ ನಾನೂ ಹೀಗೆ ಇರಬಹುದೇನೋ ಎಂದನಿಸಿದ್ದು ಆಶ್ಚರ್ಯವೇನಲ್ಲ .

  ಈತ ಫೀನಿಕ್ಸ್‌ ಸಿಟಿಯಲ್ಲಿ 2 ವರ್ಷ ಒಂದು ದೊಡ್ಡ ಕಂಪನಿಯಾಂದರಲ್ಲಿ ಕೆಲಸ ಮಾಡಿ ಸ್ವಲ್ಪ ತಿಂಗಳ ಹಿಂದಷ್ಟೇ ಟುಸ್ಸಾನಿಗೆ ಬಂದಿದ್ದ. ಸುಮಾರು ಒಂದೂವರೆ ವರ್ಷದ ನಂತರ ಈತನಿಗೊಂದು ಗ್ರಹಚಾರ ಕಾದಿತ್ತು. ಅಮೆರಿಕನ್‌ ಎಕಾನಮಿ ಕುಸಿತದಿಂದ ಎಲ್ಲ ಕಂಪನಿಯಂತೆ, ಅವನ ಕಂಪನಿಯಲ್ಲಿ ಕೆಲಸದಿಂದ ತೆಗೆದು ಹಾಕಿದ ಹಲವರಲ್ಲಿ ಇವನೂ ಸೇರಿದ್ದ.

  ಕೈತುಂಬಾ ಹಣವಿದ್ದ ಈ ಸಮಯದಲ್ಲಿ ಯಾವ ಕಷ್ಟಗಳು ಕಾಣಲಿಲ್ಲ . ಯಾವುದಾದರು ಕೆಲಸ ಸಿಕ್ಕೇ ಸಿಕ್ಕುತ್ತೆ , ಇಲ್ಲೇ ಚೆನ್ನಾಗಿ ಸಂಪಾದಿಸಬಹುದು, ಎನ್ನುವ ಭರವಸೆಯಿಂದ ಭಾರತಕ್ಕೆ ಮರಳುವ ಮನಸ್ಸೂ ಮಾಡಲಿಲ್ಲ. ಸಿಂಗಪುರಿನಲ್ಲಿ 5 ವರ್ಷ ಕೆಲಸ ಮಾಡಿ, ಅಮೇರಿಕಾದಲ್ಲಿ 3-4 ವರ್ಷ ಅನುಭವ ಇರುವ ಇವನಿಗೆ, ತನ್ನ ಊರಲ್ಲಾಗಲಿ ಅಥವಾ ಸ್ವಂತದವರಿಗಾಗಲಿ ಕೆಲಸ ಕಳಕೊಂಡ ವಿಷಯವನ್ನು ಹೇಳುವ ಧೈರ್ಯ ಕೂಡ ಬರಲಿಲ್ಲ. ಮರ್ಯಾದೆ ಅಂದುಕೊಂಡು ತನ್ನ ವೀಸಾ ಮುಗಿದಾಗ ಬೇರೊಂದು ದೇಶೀಯ ಕಂಪನಿಯ ವೀಸಾ ಗಿಟ್ಟಿಸಿದ್ದೂ ಗುಟ್ಟಾಗೆ ಉಳಿಯಿತು. ಕೆಲಸಕ್ಕಾಗಿ ಪ್ರಯತ್ನಗಳು ನಡದೇ ಇದ್ದವು. ಸಾವಿರಾರು ಜನ ಕೆಲಸ ಕಳೆದುಕೊಳ್ಳುತ್ತಿದ್ದ ಆ ದಿನಗಳಲ್ಲಿ ಈ ಪ್ರಯತ್ನಕ್ಕೆ ಸಾರ್ಥಕತೆಯೇ ಸಿಕ್ಕಲಿಲ್ಲ . ಹಲವು ಕಂಪನಿಗಳು ಗ್ರೀನ್‌ ಕಾರ್ಡ್‌ ಇಲ್ಲದೆ ಕೆಲಸ ಕೊಡಲು ಹಿಂಜರಿದವು.

  ಈಗಾಗಲೇ ಸುಮಾರು ಎರಡೂವರೆ ವರ್ಷಗಳು ಕಳೆದಿವೆ, ಆದರೆ ಈ ಕಣ್ಣುಮುಚ್ಚಾಲೆ ಇನ್ನೂ ಸಾಗಿದೆ. ಭಾರತಕ್ಕೆ ಹೋಗಿ ಯಾಕೆ ಕೆಲಸ ಹುಡುಕಬಾರದು ? ಎನ್ನುವ ಪ್ರಶ್ನೆಗೆ ಆತನ ಉತ್ತರ- ತಾನು ಬಿ.ಸ್‌.ಸಿ ಗ್ರಾಜುವೆಟ್‌ ಅಷ್ಟೇ, ಆಗ ಸಾಫ್ಟ್‌ ವೇರ್‌ ಮೊಳಕೆ ಒಡೆಯುವಾಗ ನುಸುಳಿ ಬಂದೆ, ಈಗ ಭಾರತದಲ್ಲಿ ಕೆಲಸ ಸಿಗಬಹುದು ಅನ್ನೋ ನಂಬಿಕೆಯೇ ಇಲ್ಲ . ಸಿಕ್ಕರೂ ನನ್ನ ಮರ್ಯಾದೆ ಉಳಿಸೋ ಕೆಲಸವಂತೂ ಸಿಕ್ಕೋಲ್ಲ . ನಾನು ಕೆನಡಾ, ಯು.ಕೆ. ಅಥವಾ ಸಿಂಗಾಪುರದಲ್ಲಿ ಪ್ರಯತ್ನಿಸುವೆ.

  ತಿಂಗಳಿಗೆ ಸುಮಾರು 1500- 2000 ಡಾಲರ್‌ ಖರ್ಚು ಮಾಡಿ ಈ ಎರಡೂವರೆ ವರ್ಷದಲ್ಲಿ ಸಂಪಾದಿಸಿದ ಹಣವನ್ನೆಲ್ಲಾ ಮುಗಿಸಿ ಈಗ ಕೈ ಬರಿದು ಮಾಡಿಕೊಂಡಿರುವ ಗೆಳೆಯನಲ್ಲಿ ಅಮೆರಿಕದಲ್ಲಿ ಇರಲು ವೀಸಾ ಕೂಡಾ ಇಲ್ಲ . ಸ್ವದೇಶಕ್ಕೆ ಮರಳಲೇಬೇಕಾದ ಸ್ಥಿತಿ ತಂದುಕೊಂಡಿದ್ದಾನೆ. ಸುಮಾರು ಒಂದು ಕೋಟಿ ರುಪಾಯಿಯನ್ನು ತನ್ನೊಂದಿಗೆ ಒಯ್ಯಬೇಕಾಗಿದ್ದ ಈತ, ಈಗ ಹೆಚ್ಚೂಕಡಿಮೆ ಬರಿಗೈಯಲ್ಲಿ ್ಲ ಮರಳುವ ಸ್ಥಿತಿ ಬಂದಿದೆ. ವಿಪರ್ಯಾಸ ಎಂದರೆ ಇದಲ್ಲವೇ?

  ಎಲ್ಲವೂ ಸರಿ ಹೋದಮೇಲೆ ಮಕ್ಕಳನ್ನು ಮಾಡಿಕೊಂಡರಾಯಿತು ಎಂದು ಕಾದ ಈ ಗೆಳೆಯನಿಗೆ ಮದುವೆಯಾಗಿ 12 ವರ್ಷವಾಗಿದೆ. ತಂದೆ ತಾಯಿ, ಊರಜನ ಹಾಗೂ ಗೆಳೆಯರ ದಾಕ್ಷಿಣ್ಯ-ಪ್ರತಿಷ್ಠೆ-ಮುಜುಗರಗಳ ಹಿಂಜರಿಕೆಯ ಭಯದಲ್ಲಿ ತನ್ನ ಸ್ವಂತ ಬದುಕನ್ನು ಗೋಜಲಿಗೆ ಕೆಡವಿಕೊಂಡ ಈ ಗೆಳೆಯ 20000 ಮೈಲು ಬಂದು ಸಾಧಿಸಿದ್ದಾದರೂ ಏನು?

  11 ವರ್ಷ ಹೊರದೇಶದಲ್ಲಿ ಕಳೆದು ಸ್ವದೇಶಕ್ಕೆ ಮರಳುತ್ತಿರುವ ಈ ದಂಪತಿಗಳಿಗೆ ಭಾರತಮಾತೆ ಆಶ್ರಯ ನೀಡುವಳು ಎಂದು ಆಶಿಸುವೆ. ನಿಮ್ಮ ಆಶಯವೂ ಇದೇ ಆಗಿರಲಿ.

  ಮುಖಪುಟ / ಎನ್‌ಆರ್‌ಐ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more