ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಸಾಂಸಂ’ದ ಚುನಾವಣಾ ಸುದ್ದಿ: ಅಭ್ಯರ್ಥಿಗಳ ಪರಿಚಯ

By Staff
|
Google Oneindia Kannada News
ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘದ ಚುನಾವಣಾ ಬಿಸಿ ಜ್ವರದಂತೆ ಏರುತ್ತಿದೆ. ನಿರ್ದೇಶಕ ಮಂಡಳಿಯ 9 ಸ್ಥಾನಕ್ಕೆ 12 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಏಪ್ರಿಲ್‌ 17, 2004 ರಂದು ಚುನಾವಣೆ ನಡೆಯಲಿದ್ದು , ಆಯ್ಕೆಯಾದ ನಿರ್ದೇಶಕರ ಮಂಡಳಿಯ ಅಧಿಕಾರಾವಧಿ 2 ವರ್ಷ. ಈ ಸಲ ಇಬ್ಬರು ಮಹಿಳಾ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿರುವುದು ವಿಶೇಷ . ಸ್ಪರ್ಧಿಗಳ ಕಿರು ಪರಿಚಯ ಇಲ್ಲಿದೆ.

ಈ ಪರಿಚಯ ಲೇಖನ ಬರೆಯಲು ಎಲ್ಲ ಅಭ್ಯರ್ಥಿಗಳನ್ನು ಇ-ಮೇಲ್‌ ಮೂಲಕ ಸಂಪರ್ಕಿಸಿ, ಅನುಮತಿ ಕೇಳಲಾಗಿತ್ತು. ಕೆಲವರು ತಮ್ಮ ಪರಿಚಯವನ್ನು ಪ್ರಕಟಿಸಲು ಇಷ್ಟಪಡಲಿಲ್ಲ . ಆ ಕಾರಣದಿಂದಾಗಿ ಅವರುಗಳ ಪರಿಚಯ ಈ ಲೇಖನದಲ್ಲಿ ಸೇರಿಲ್ಲ .

ಇವರು ಕೆಸಿಎ ಚುನಾವಣೆಯ ಹುರಿಯಾಳುಗಳು :

  1. ಶ್ರೀಮತಿ ಸುಮಾಭಟ್‌
    Suma Bhat ದಕ್ಷಿಣ ಕ್ಯಾಲಿಫೋರ್ನಿಯ ಕನ್ನಡಿಗರಿಗೆ ಸುಮಾಭಟ್‌ ಚಿರಪರಿಚಿತರು. ಅವರ ಮಧುರ ಕಂಠದಿಂದ ಎಲ್ಲರ ಮನಸೂರೆಗೊಳಿಸಿದ್ದಾರೆ. ಕನ್ನಡ ಸಂಘದ ಕಾರ್ಯವೇ ಆಗಲಿ, ಕನ್ನಡಿಗರ ಯಾವುದೇ ಕಾರ್ಯಕ್ಕಾಗಲಿ ಎತ್ತಿದ ಕೈ. ಎಲೆ ಮರೆಯಾಗೇ ಕೆಲಸ ಮಾಡಲು ಇಚ್ಚಿಸುವ ಇವರು ಈ ಭಾರಿ ಸಂಘದ ಕಾರ್ಯಕಾರಿ ಮಂಡಳಿಯಲ್ಲಿ ಸ್ಥಾನಕ್ಕಾಗಿ ನಿಂತಿದ್ದಾರೆ. ಇವರಿಗೆ ಶುಭವಾಗಲಿ.

  2. ಶ್ರೀಮತಿ ಸುಮಾ ಸುಬ್ಬು
    Suma Subbu ಕನ್ನಡ ಸಂಘದ ಪರದೆಯ ಹಿಂದೆ ಕೆಲಸ ಮಾಡಿ ಯಾವುದೇ ಪ್ರಚಾರವನ್ನು ಒಲ್ಲದ ಇವರ ಮುಖಪರಿಚಯವಿದ್ದರೂ ಬಹಳಷ್ಟು ಸದಸ್ಯರಿಗೆ ನಾಮ ಪರಿಚಯ ಕಮ್ಮಿ. ಇಲ್ಲ ಎನ್ನುವ ಪದ ಇರುವುದೇ ಸುಮಾ ಸುಬ್ಬು ಅವರಿಗೆ ಗೊತ್ತಿಲ್ಲ. ಸಂಘದ ಯಾವುದೇ ಸೇವೆಗೆ ಸದಾ ಸಿದ್ಧ. ಚುರುಕು ಮಾತಿನ ಇವರು ರಂಗ ನಟಿ ಕೂಡ. ಇವರಿಗೂ ಶುಭವಾಗಲಿ.

  3. ಸೋಮಶೇಖರ ಹೊಸ್ಕೆರೆ
    Somashekar Hoskere ಈ ಹುರಿಯಾಳು ಎರಡನೇ ಭಾರಿಗೆ ಚುನಾಯಿತರಾಗಲು ಬಯಸಿದ್ದಾರೆ. ನುರಿತ ಕನ್ನಡದ ಕಾರ್ಯಕರ್ತ ಹಾಗೂ ಕನ್ನಡ ಕೆಲಸಕ್ಕಾಗಿ ಭಾರಿ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಾರೆ. ರಂಗದ ಮೇಲೂ ಮೆರೆದ ವ್ಯಕ್ತಿ. ಕನ್ನಡಕ್ಕಾಗಿ ಬೃಹತ್‌ ಯೋಜನೆಗಳನ್ನೇ ಹೊಂದಿರುವ ಸೋಮಶೇಖರ ಹೊಸ್ಕೆರೆ, ಹೊಸ ಹೊಸ ಯೋಜನೆಗಳನ್ನೇ ಹಾಕಿಕೊಂಡಿದ್ದಾರೆ. ಅವರಿಗೆ ಶುಭವಾಗಲಿ.

  4. ವಿಜಯ ಕೊಟ್ರಪ್ಪ
    Vijay Kotrappa ಮಾತು ಕಡಿಮೆ, ಕನ್ನಡದ ಕೆಲಸವೆಂದರೆ ಅಪಾರ ಪ್ರೀತಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳೆಂಬ ನಂಬಿಕೆಯುಳ್ಳ ವಿಜಯ ಕೊಟ್ರಪ್ಪ ಕಾಲೇಜಿಗೆ ಹೋಗುವ ಮಕ್ಕಳಿಗಾಗಿ ಕಳೆದ ಎರಡು ವರ್ಷದಿಂದ ಕಾಲೇಜಿಗೆ ನೊಂದಾಯಿಸುವ ಕಾರ್ಯಾಗಾರ ನಡೆಸಿಕೊಂಡು ಬಂದಿದ್ದಾರೆ. ರಂಗದಮೇಲೂ ಇವರ ಆಸಕ್ತಿ ಬಹಳ. ಇವರ ಸಂಗ್ಯಾಬಾಳ್ಯ ನಾಟಕದ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತ್ತು. ಇವರೂ ಎರಡನೇ ಭಾರಿ ಚುನಾಯಿತರಾಗಲು ಬಯಸಿದ್ದಾರೆ. ಶುಭವಾಗಲಿ.

  5. ನಾಗನ ಗೌಡ
    Nagana Gowda ಮಹಾದಾನಿ ನಾಗನ ಗೌಡರ ಪರಿಚಯ ಸದಸ್ಯರಿಗೆ ಅವಶ್ಯಕತೆಯೇ ಇಲ್ಲ. ಹಿರಿಯ ಅಭ್ಯರ್ಥಿ. ಕಳೆದ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿ ಹಾಗೂ ದಕ್ಷ ಖಜಾಂಚಿಯಾಗಿ ಕೆಲಸ ಮಾಡಿ ಮೆಚ್ಚುಗೆ ಪಡೆದವರು. ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ಬಹುಶಃ ಪ್ರಥಮ ಹಾಜರಿ ಹಾಕುವ ಬಲು ಹುಮ್ಮಸ್ಸಿನ ವ್ಯಕ್ತಿ. ಇನ್ನೂ ಒಮ್ಮೆ ಆಯ್ಕೆಯಾಗಿ ಬರಲಿ ಎಂದು ಹರಸೋಣ.

  6. ಪಾರ್ಥ ರಾಮಶಾಸ್ತ್ರಿ
    Partha Ramashastri ಈ ವ್ಯಾಲಿಯ ನಾಯಕ ಕಳೆದ ವರ್ಷ ಮಂಡಳಿಯ ಕಾರ್ಯಕರ್ತರೊಬ್ಬರ ರಾಜಿನಾಮೆಯಿಂದ ತೆರವಾಗಿದ್ದ ಜಾಗಕ್ಕೆ ನಾಮಕರಣವಾಗಿ ತಮ್ಮ ಕನ್ನಡ ನಿಸ್ವಾರ್ಥ ಸೇವೆಯಿಂದ ಎಲ್ಲ ಕನ್ನಡಿಗರ ಮನ ಗೆದ್ದಿದ್ದಾರೆ. ರೋಟರಿ ಕ್ಲಬ್‌, ಲಿಯೋ ಮತ್ತು ಇನ್ನಿತರ ಸಂಘಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಇವರಿಗೂ ಶುಭವಾಗಲಿ.

  7. ಮಧು ಹೆಬ್ಬಾರ್‌
    ಸಂಘದ ಯಾವುದೇ ಕಾರ್ಯಕ್ರಮವಾಗಲಿ ಯಾವುದೇ ಕೆಲಸಕ್ಕಾಗಲಿ ನೆನಪಿಗೆ ಬರುವ ಮೊದಲ ಕಾರ್ಯಕರ್ತರೆಂದರೆ ಹೆಬ್ಬಾರ್‌. ಸುಶ್ರಾವ್ಯವಾಗಿ ಹಾಡುವ ಪತ್ನಿ ಹಾಗೂ ಸುಲಲಿತವಾಗಿ ಕನ್ನಡ ಮಾತನಾಡುವ ಮಗನೊಂದಿಗೆ ಕನ್ನಡ ಸಂಘವೊಂದೇ ಅಲ್ಲ , ಇನ್ನೂ ಅನೇಕ ಸಂಘಗಳಲ್ಲಿ ಕಾರ್ಯನಿರತರು. ಪ್ರಥಮ ಭಾರಿಗೆ ಸಂಘದ ಮಂಡಳಿಯ ಸದಸ್ಯರಾಗಲು ದಾಪುಗಾಲು ಇಟ್ಟಿದ್ದಾರೆ. ಅವರಿಗೂ ಶುಭವಾಗಲಿ.

  8. ಜಗನ್ನಾಥ್‌ ಶಂಕಂ
    Jagannath ಹುಮ್ಮಸ್ಸಿನ ಕಾರ್ಯಕರ್ತ ಜಗನ್ನಾಥ್‌ ಶಂಕಂರಿಗೆ ಈ ಸಂಘದಲ್ಲಿ ಅಪಾರ ಭಕ್ತಿ. ಕಳೆದ 4 ವರ್ಷಗಳಿಂದ ಸಂಘದ ಮಡಳಿಯ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಸಂಘದ ಆಗು ಹೋಗುಗಳ ಬಗ್ಗೆ ಬಹಳ ಕಾಳಜಿ ವಹಿಸುವ ವ್ಯಕ್ತಿ. ರಂಗದ ಮೇಲಿನ ಅಭಿನಯದಿಂದಲೂ ಜನರ ಗಮನ ಸೆಳೆದಿದ್ದಾರೆ. ನಿಷ್ಠಾವಂತ ಕನ್ನಡದ ಕಾರ್ಯಕರ್ತ. ಮೂರನೇ ಭಾರಿಗೆ ಚುನಾಯಿತರಾಗಲು ಬಯಸಿರುವ ಈ ಅಭ್ಯರ್ಥಿಗೆ ಶುಭವಾಗಲಿ.

  9. ವಲ್ಲೀಶ ಶಾಸ್ತ್ರಿ
    Vallisha Shastri ಮವಾಸು ಲೇಖನ ನಾಮದಿಂದ ಈ ಅಭ್ಯರ್ಥಿಗಳ ಪರಿಚಯ ಬರೆಯುತ್ತಿರುವ ವ್ಯಕ್ತಿಯೇ ನಾನು. ನನ್ನ ಬಗ್ಗೆ ನಾನೆ ಏನು ಬರೆದುಕೊಳ್ಳಲಿ ಹೇಳಿ. ನನ್ನ ಕೈಲಾದ ಅಳಿಲು ಸೇವೆಯನ್ನು ಮಾಡಲು ಮುಂದಾಗಿದ್ದೇನೆ. ನನಗೂ ಶುಭವಾಗಲಿ ; ನಿಮ್ಮೆಲ್ಲರ ಹರಕೆ ನನ್ನ ಮೇಲಿರಲಿ.
*

ಚುನಾವಣೆ ಎಂದ ಮೇಲೆ ಸೋಲು-ಗೆಲುವು ಮುಖ್ಯವಲ್ಲ . ಕನ್ನಡದ ಕೆಲಸಕ್ಕಾಗಿ ಮುಂದಾಗುವು ಹುಮ್ಮಸ್ಸು ಮುಖ್ಯ. ಈ ಹುಮ್ಮಸ್ಸಿನಿಂದ ಕನ್ನಡದ ಕೆಲಸಕ್ಕೆ ಮುಂದಾಗಿರುವ ಎಲ್ಲಾ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ, ಅವರ ಕನ್ನಡ ಸೇವೆ ಮುಂದುವರಿಯಲಿ, ಹಾಗೂ ಈ ಕಾರ್ಯ ತತ್ಪರತೆ ಮಿಕ್ಕೆಲ್ಲ ಕನ್ನಡಿಗರಿಗೆ ಉತ್ತೇಜನಕಾರಿಯಾಗಲಿ ಎಂದು ಆಶಿಸುವೆ.


ಕೆಸಿಎ: ಪ್ರಜಾಪ್ರಭುತ್ವದ ಇನ್ನೊಂದು ಅಧ್ಯಾಯ


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X