ಸಮಕಾಲೀನ ಗಾದೆಗಳು
| ಕುಂಭಾಸಿ ಶ್ರೀನಿವಾಸ ಭಟ್, ಟ್ರಾಯ್, ಮಿಶಿಗನ್ [email protected] |
1. ಕಸ್ಟಮ್ಸ್ ಅಫೀಸಿನವರ ಮುಂದೆ ಕಷ್ಟ ಸುಖ ಹೇಳಿಕೊಂಡರಂತೆ
2. ಸತ್ಯನಾರಾಯಣ ಪೂಜೆಗೆ ಕರೆದರೆ ಸ್ಕಾಚ್ ಸರ್ವ್ ಮಾಡುತ್ತೀರ ಎಂದು ಕೇಳಿದರಂತೆ
3. ಊರಿಗೆ ಬಂದವರು ಕನ್ನಡ ಕೂಟಕ್ಕೆ ಬರದೆ ಇರುತ್ತಾರೆಯೇ
4. ಹೇಳೋದು ವೇದ, ತಿನ್ನೋದು ಹ್ಯಾಂಬರ್ಗರ್
5. ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು, ಕನ್ನಡ ಕೂಟದ ಕಮಿಟಿಯಲ್ಲಿ ಕೆಲಸ ಮಾಡಿ ನೋಡು
6. ರೂಮು ಕ್ಲೀನ್ ಮಾಡಿಕೊಳ್ಳೊ ಮಗು ಎಂದರೆ ಡಾಲರ್ ಎಷ್ಟು ಕೊಡುತ್ತೀಯಾ ಎಂದನಂತೆ
7. ಜಾಗ್ ಮಾಡೋಕೆ ಮನಸ್ಸಿಲ್ಲದ್ದಕ್ಕೆ ರಸ್ತೆ ಅನ್ಸೇಫ್ ಎಂದನಂತೆ
8. ಗಂಡ ಹೆಂಡಿರ ಜಗಳದಲ್ಲಿ ಲಾಯರ್ ಮಿಲಿನಿಯರ್ ಆದ
9 ರೆಫ್ರಿಜಿರೇಟರು ಇಟ್ಟುಕೊಂಡು ತಂಗಳು ತಿನ್ನೋದಿಲ್ಲ ಎನ್ನೋಕೆ ಆಗುತ್ಯೇ
10. ಕೆಲಸ ಜಾಸ್ತಿ ಮಾಡು ಎಂದರೆ ಸೂ ಮಾಡುತ್ತೀನಿ ಎಂದನಂತೆ
11. ಅತ್ತೂ ಕರೆದು ಔತಣಕ್ಕೆ ಹೇಳಿಸಿಕೊಂಡು ಡಯಟ್ನಲ್ಲಿ ಇದ್ದೀನಿ ಎಂದನಂತೆ
12. ಮೂಗು ಚುಚ್ಚಿಸಿಕೊಳ್ಳೋಕೆ ಮನಸ್ಸಿಲ್ಲದವಳು ನಾಲಿಗೆ, ತುಟಿ ಎಲ್ಲ ಚುಚ್ಚಿಸಿಕೊಂಡಳಂತೆ
13. ಕಿವಿಗಿಂತ ಕಿವಿ ರಿಂಗುಗಳೆ ಭಾರ
14. ಮ್ಯಾಕ್‌ಡಾನಲ್ಡಿಗೆ ಹೋಗಿ ಮಸಾಲೆ ದೋಸೆ ಕೇಳಿದರಂತೆ
15. ಕಂಪ್ಯುಟರ್‌ನಲ್ಲಿ ಕೆಲಸ ಮಾಡುವವರು ‘ಬಗ್ಸಿಗೆ’ ಹೆದರಿದರೆ ಆಗುತ್ತದೆಯೇ?
16. ಶರ್ಲೀ ಮೆಕ್ಲೇನ್‌ಗೂ ಶಿವರಾತ್ರಿಗೂ ಏನು ಸಂಬಂಧ ?
17. ಗ್ರೀನ್ ಕಾರ್ಡಿದೆ ಅಂತ ಹೆಣ್ಣು ಕೊಟ್ಟರೆ ಹೆಚ್-1 ವೀಸಾ ಎಂತ ಮೋಸ ಮಾಡೊದೆ?
18. ‘ಬಗ್ಸ್’ಗೆ ಚೆಲ್ಲಾಟ, ‘ಮೌಸ್’ಗೆ ಪ್ರಾಣ ಸಂಕಟ
19. ಇಂಟರ್ನೆಟ್ ಮೇಲೆ ಆಸೆ, ಮಕ್ಕಳ ಮೇಲೆ ಪ್ರೀತಿ
20. ಬೇಸಿಗೆಯಲ್ಲಿ ಲಾನ್ ಮೋವೆರ್ ಕಾಟ, ಚಳಿಗಾಲದಲ್ಲಿ ಸ್ನೋ ಬ್ಲೋಯರ್ ಕಾಟ
21. ಪೂಜೆಗೆ ಬಾರೊ ಎಂದರೆ ಅಡಿಗೆ ಏನು ಎಂದು ಕೇಳಿದನಂತೆ
22. ಕ್ರಿಯೆ ಮಾಡೋಕೆ ಬಂದವರಿಗೂ ಕ್ಯಾಪ್ಯುಚಿನೋ ಕಾಫಿ ಆಗಬೇಕಂತೆ
23. ದೊಡ್ಡ ಮನೆ ತೆಗೆದುಕೊಂಡು ಪ್ರಾಪರ್ಟಿ ಟ್ಯಾಕ್ಸಿಗೆ ಹೆದರಿದರೆ ಆಗುತ್ತದೆಯೇ?
24. ಬೆಳಿಗ್ಗೆ ಭರತ ನಾಟ್ಯ; ಸಂಜೆ ಬೆಲ್ಲಿ ಡ್ಯಾನ್ಸು
25. ಓಪನ್ ಹೌಸಿಗೆ ಬಂದವರೊಡನೆ ಕೋಪ ಮಾಡಿ ಕೊಂಡರಂತೆ!
26. ಸಂಸಾರ ರಥ ಎಳಿಯೇ ಎಂದರೆ ಸಂಗೀತ ಕಲಿಯೋಕೆ ಹೋಗಬೇಕು ಎಂದಳಂತೆ
27. ಗರಾಜ್ ಸೇಲ್ ಎಂತ ಗುಜರಿ ಸಾಮಾನು ಇಟ್ರೆ ಮಾರಾಟವಾಗುತ್ಯೆ ?
28. ಲೇಟೆಸ್ಟ್ ಮಾಡೆಲ್ ಡಿಶ್‌ವಾಶರ್ ಇಟ್ಕೊಂಡು ದಿನವೆಲ್ಲಾ ಪಾತ್ರ ತೊಳೆದರಂತೆ!
29. ಟೋಲ್ ರೋಡಿನಲ್ಲಿ ಡ್ರೈವ್ ಮಾಡಿದರೂ ಟಿಕೆಟ್ ಕೊಡೋದು ತಪ್ಪಲಿಲ್ಲ
30. ಸ್ಪೀಡ್ ಹೋಗೋದೂ ಸಾಕು, ಟಿಕೆಟ್ ಕಟ್ಟೋದೂ ಸಾಕು
31. ಫ್ರೀ ಸೆಲ್ ಫೋನ್ ಟೈಂ ಇದೆ ಅಂತ ಸಿಕ್ಕಾಪಟ್ಟೆ ಮಾತಾಡೋದೆ?
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications