ಫ್ಲಾರಿಡಾಕ್ಕೆ ಸಿಂಹ, ಕಸ್ತೂರಿಶಂಕರ್‌, ಶೀಲಾ

ಜಾಗತಿಕ ಕನ್ನಡಿಗರ ಬಹುದೊಡ್ಡ ಸ್ನೇಹಮಿಲನ ಹಾಗೂ ಸಾಂಸ್ಕೃತಿಕ ಮೇಳ ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ-2004’ರ ದಿನಗಣನೆ ಆರಂಭವಾಗಿರುವಂತೆಯೇ, ರಾಜ್ಯದಿಂದ ಸಮ್ಮೇಳನಕ್ಕೆ ತೆರಳುವ ಕಲಾವಿದರು-ಗಣ್ಯರ ತಂಡವನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ.

ವಿವಿಧ ಕ್ಷೇತ್ರಗಳಿಗೆ ಸೇರಿದ ಕಲಾವಿದರು- ಗಣ್ಯರು ಅಮೆರಿಕಾದ ಫ್ಲಾರಿಡಾದಲ್ಲಿ ಸೆಪ್ಟಂಬರ್‌ 3ರಿಂದ 5ರವರೆಗೆ ನಡೆಯುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ರಾಜ್ಯವನ್ನು ಪ್ರತಿನಿಧಿಸುವರು. ಸಮ್ಮೇಳನದಲ್ಲಿ ಭಾಗವಹಿಸಲು ಸರ್ಕಾರ ಆಯ್ಕೆ ಮಾಡಿರುವ ರಾಜ್ಯದ ಪ್ರತಿನಿಧಿಗಳ ಪಟ್ಟಿ ಇಂತಿದೆ :

ಕಸ್ತೂರಿ ಶಂಕರ್‌ ಮತ್ತು ಅವರ ತಂಡ (ಸಂಗೀತ)
ಸಿ.ಆರ್‌. ಸಿಂಹ (ರಂಗಭೂಮಿ)
ನಿರುಪಮ ಮತ್ತು ರಾಜೇಂದ್ರ (ಕಥಕ್‌ ನೃತ್ಯ)
ಎಂ.ಎಸ್‌. ಶೀಲಾ (ಕರ್ನಾಟಕ ಸಂಗೀತ)
ಬರಗೂರು ರಾಮಚಂದ್ರಪ್ಪ ಹಾಗೂ ದೊಡ್ಡರಂಗೇಗೌಡ (ಸಾಹಿತ್ಯ)
ಡಾ.ವಸುಂಧರಾ ದೊರೆಸ್ವಾಮಿ (ಭರತನಾಟ್ಯ ಮತ್ತು ಯೋಗ) ಮತ್ತು
ಮುದ್ದು ಮೋಹನ್‌ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ).

ಇವರೊಂದಿಗೆ ಯಕ್ಷಗಾನ ತಂಡ ಹಾಗೂ ಸಂಗೀತ ಕಲಾವಿದರ ಬಳಗವೂ ಫ್ಲಾರಿಡಾ ಸಮ್ಮೇಳನಕ್ಕೆ ತೆರಳಲಿದೆ.

ಹಾರಲಿ ಏರಲಿ ಕನ್ನಡದ ಬಾವುಟ.

(ಇನ್ಫೋ ವಾರ್ತೆ)

ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+