ಮಲಪ್ರಭಾ ಗ್ರಾಮೀಣ ಬ್ಯಾಂಕ್‌ನಿಂದ ಎನ್‌ಆರ್‌ಐ ಠೇವಣಿ ಸಂಗ್ರಹ ಯೋಜನೆ

ಧಾರವಾಡ: ಮಲಪ್ರಭಾ ಗ್ರಾಮೀಣ ಬ್ಯಾಂಕ್‌ ಅನಿವಾಸಿ ಭಾರತೀಯರಿಂದ ಠೇವಣಿ ಸಂಗ್ರಹಿಸುವ ಯೋಜನೆಯನ್ನು ಆರಂಭಿಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅನುಮತಿಯಾಂದಿಗೆ ಆರಂಭವಾಗಿರುವ ಈ ಯೋಜನೆಯನ್ನು ಸಿಂಡಿಕೇಟ್‌ ಬ್ಯಾಂಕ್‌ನ ಮಹಾ ಪ್ರಬಂಧಕ ದಿನಕರ್‌ರಾವ್‌ಅವರು ಭಾನುವಾರ ಉದ್ಘಾಟಿಸಿದರು. ಈ ಯೋಜನೆ ಮೂಲಕ ಮಲಪ್ರಭಾ ಗ್ರಾಮೀಣ ಬ್ಯಾಂಕ್‌ ರಾಷ್ಟ್ರಮಟ್ಟದಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿದಂತಾಗಿದೆ. ಹೊಸ ಯೋಜನೆಯ ಯಶಸ್ಸಿಗಾಗಿ ಸಿಂಡಿಕೇಟ್‌ ಬ್ಯಾಂಕ್‌ ಎಲ್ಲ ರೀತಿಯಲ್ಲಿಯೂ ಮಲಪ್ರಭಾ ಗ್ರಾಮೀಣ ಬ್ಯಾಂಕ್‌ಗೆ ಸಹಕರಿಸಲು ಸಿದ್ಧವಿದೆ ಎಂದು ದಿನಕರ್‌ರಾವ್‌ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಲಪ್ರಭಾ ಬ್ಯಾಂಕಿನ ಅಧ್ಯಕ್ಷ ಆರ್‌.ಎಸ್‌. ಕಾಮತ್‌ ಅನಿವಾಸಿ ಭಾರತೀಯರು ಠೇವಣಿಗಳನ್ನು ತೆರೆಯುವ ಮೂಲಕ ಈ ಹೊಸ ಯೋಜನೆಯನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+