ಸನ್ನಿವೇಲ್‌ನಲ್ಲಿ ಬೆಂಗಳೂರು ವಿವಿ ಉಪಕುಲಪತಿ
ಸನ್ನಿವೇಲ್ : ಬೆಂಗಳೂರು ವಿಶ್ವ ವಿದ್ಯಾಲಯ ಉಪಕುಲಪತಿ ಡಾ. ಸಿದ್ಧಪ್ಪನವರೊಂದಿಗೆ ಒಂದಿಷ್ಟು ಹೊತ್ತು ಕಳೆಯುವ ಅವಕಾಶವನ್ನು ಬಿ.ವಿ. ಜಗದೀಶ್ ಅವರು ಒದಗಿಸಿದ್ದಾರೆ. ಉಪಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡನಂತರ ವಿವಿಯಲ್ಲಿ ಹಲವು ಬದಲಾವಣೆಗಳನ್ನು ತಂದ ಸಿದ್ಧಪ್ಪನವರು ಕಾರ್ಯದಕ್ಷತೆಗೆ ಮತ್ತೊಂದು ಹೆಸರು.
ಶನಿವಾರ , ಮೇ 19ರಂದು ಸಂಜೆ ಐದು ಗಂಟೆ ಹೊತ್ತಿಗೆ ನೀವು ಸ್ವಲ್ಪ ಪುರುಸೊತ್ತು ಮಾಡಿಕೊಂಡರೆ ಸನ್ನಿವೇಲ್ ದೇವಸ್ಥಾನ(420450 Persian Drive Sunnyvale CA 94086 )ದಲ್ಲಿ ಸಿದ್ಧಪ್ಪ ಅವರು ನಿಮ್ಮೊಡನೆ ಮಾತುಗಾಗಿ ಸಿದ್ಧರಾಗಿರುತ್ತಾರೆ.
ಬೆಂಗಳೂರುವ ವಿಶ್ವ ವಿದ್ಯಾಲಯದಲ್ಲಿ ಓದಿ ವಿದೇಶಕ್ಕೆ ತೆರಳಿದವರನ್ನು ಭೆಟ್ಟಿಯಾಗಬೇಕು ಎಂಬ ಆಕಾಂಕ್ಷೆ ಸಿದ್ಧಪ್ಪರದು. ನಿಮ್ಮೂರಿನವರೊಂದಿಗೆ ಚರ್ಚಿಸುವ, ನೀವು ಕಲಿತ ವಿದ್ಯಾಲಯದ ಸ್ಥಿತಿಗತಿ ಬಗ್ಗೆ ವಿಚಾರಿಸಿಕೊಳ್ಳುವ ತವಕದೊಂದಿಗೆ ಬರುವ ನಿಮ್ಮನ್ನು ಎದುರುಗೊಳ್ಳಲು ಉಪಕುಲಪತಿಗಳೊಂದಿಗೆ ಬಿ.ವಿ. ಜಗದೀಶ್ ಇರುತ್ತಾರೆ.
ಈ ಬಗ್ಗೆ ಏನೇ ಮಾಹಿತಿ ಬೇಕಿದ್ದರೂ (408) 734-4554 ಅಥವಾ (408) 734- 0775 ಫೋನ್ ನಂಬರಿಗೆ ಡಯಲ್ ಮಾಡಬಹುದು . ಜಗದೀಶರ ಈ ಮೇಯ್ಲ್ ವಿಳಾಸ - : [email protected]
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications