ಇರ್ವಿನ್‌ನಲ್ಲಿ ಕರ್ನಾಟಕ ಶಾಸ್ತ್ರೀಯ ಹಾಗೂ ಭಕ್ತಿ ಸಂಗೀತದ ಗಮಲು

ಇದೊಂದು ರಸಸಂಜೆ. ಅನಿವಾಸಿಗಳಾಗಿದ್ದೂ ಎದೆಯಾಳಗೆ ದೇಶೀಸಂಗೀತದ ಗಮಲಗನ್ನು ಉಳಿಸಿಕೊಂಡಿರುವವರ ಪಾಲಿಗೆ ಹಾಡುಹಬ್ಬ . ಎದೆಯ ಹಸಿವಿಗೆ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಸಂಗೀತದ ಸಮೃದ್ಧ ಅಡುಗೆಯಿದೆ.

ಚಲನ್‌ ಸಂಗೀತ ಶಾಲೆ, ಕರ್ನಾಟಕ ಕಲ್ಚರಲ್‌ ಅಸೋಸಿಯೇಶನ್‌ (ಕೆಸಿಎ) ಹಾಗೂ ರಂಗೋಲಿ ಫೌಂಡೇಶನ್‌ ಈ ಕಾರ್ಯಕ್ರಮವನ್ನು ಒಟ್ಟಾಗಿ ಏರ್ಪಡಿಸಿವೆ. ಅಕ್ಟೋಬರ್‌ 27 ರ ಶನಿವಾರ ಸಂಜೆ 7 ಕ್ಕೆ ಹಾಡುಹಬ್ಬ ಶುರು. ದಾರಿ ತಪ್ಪಬೇಡಿ, ಗುರುತಿಟ್ಟುಕೊಳ್ಳಿ- 52 MINERS TRAIL, IRVINE CA 92620 7146658812.

ಹಾಡುಹಬ್ಬದಲ್ಲಿನ ವಿಶೇಷ ಅಡುಗೆಯ ಐಟಂಗಳು

ಮೈಸೂರು ಚಂದನ್‌ ಕುಮಾರ್‌ ಅವರಿಂದ ಕೊಳಲು ಕಚೇರಿಯಿದೆ. ನಿಮಗೆ ಮೈಸೂರು ಟಿ.ಚೌಡಯ್ಯ ಅವರ ನೆನಪಿದೆಯಲ್ಲ , ಹೇಗೆ ಮರೆತೀರಿ, ಕನ್ನಡಿಗರು ಮರೆಯಲಾಗದ ಮಹಾನುಭಾವರವರು. ಅಂಥ ಚೌಡಯ್ಯನವರ ಮರಿಮಗ ಚಂದನ್‌ಕುಮಾರ್‌. ಗುರು ಎಂ.ಗೋಪಾಲ್‌ ಕೃಷ್ಣ ಅವರಲ್ಲಿ ಸಂಗೀತಾಭ್ಯಾಸ ಮಾಡಿದ್ದಾರೆ.

ತುಂಬು ಕಂಠಸಿರಿಯಿಂದ ಗಂಧರ್ವ ಲೋಕ ಸೃಷ್ಟಿಸಲು ಸಜ್ಜಾಗಿರುವವರು- ಮೈಸೂರು ಎನ್‌.ಶ್ರೀನಾಥ್‌ ಅವರು. ಡಾ.ಎಸ್‌.ರಾಮನಾಥನ್‌ ಹಾಗೂ ಆರ್‌.ತ್ಯಾಗರಾಜನ್‌ ಅವರಲ್ಲಿ ಸಂಗೀತ ಕಲಿತ ಅಗ್ಗಳಿಕೆ ಶ್ರೀನಾಥ್‌ ಅವರದು. ಕರಾಯ್‌ಕುಡಿ ಆರ್‌ ಮಣಿ ಶಾಲೆಗೆ ಸೇರಿದ ಆರ್‌. ಸುಬ್ಬಾಶಾಸ್ತ್ರಿ ಅವರಲ್ಲಿ ಕಲಿತ ಗುರುಮೂರ್ತಿ ಮೃದಂಗ ನುಡಿಸಲಿದ್ದಾರೆ.

ಎದೆಗೆ ಮಳೆಬಿಲ್ಲು ಮುಡಿಸುವ ಸಂಗೀತ ಕಾರ್ಯಕ್ರಮಕ್ಕೆ ತಲಾ 10 ಡಾಲರ್‌ ಪ್ರವೇಶ ಧನವಿದೆ. ಕೆಸಿಎ ಸದಸ್ಯರಿಗಾದರೆ 2 ಡಾಲರ್‌ ರಿಯಾಯಿತಿ, ಅಂದರೆ 8 ಡಾಲರ್‌. ರಾತ್ರಿ ಭೋಜನ ವ್ಯವಸ್ಥೆಯಿದೆ. ಅಕ್ಟೋಬರ್‌ 24 ರೊಳಗೆ ಪ್ರವೇಶ ಕಾದಿರಿಸಬೇಕು.

ಹೆಚ್ಚಿನ ವಿವರಗಳಿಗೆ-
Maruthi Prasad 9098602835 Vish Dixit 5629478752 Chakrapani 5629262348
ಅಥವಾ
Sudarshan Chalan 7146658812 Malathi Iyengar 8187886860
ಇವರನ್ನು ಸಂಪರ್ಕಿಸಿ.

ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮಾರ್ಗ-
I5 Heading South. Lt Culver exit Rt Bryan Lt Yale Rt Northwood Rt Gold Rush Rt Miners Trail.
I405 Heading South. Lt Jeffrey/University exit Lt Bryan Rt Yale SEE ABOVE

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+