For Daily Alerts
ಮೇರಿಲ್ಯಾಂಡ್ : ಮಾ. 24 ರಂದು ಸಂಗೀತ ಕಚೇರಿ
ಮೇರಿ-ಲ್ಯಾಂ-ಡ್ : ತಿಂಗಳ ಎರಡನೇ ಭಾನುವಾರದಂದು ಸಾಹಿತ್ಯಿಕ ಸಂವಾದಗಳನ್ನು ಏರ್ಪಡಿಸುವ ಮೂಲಕ ತಾಯ್ನಾಡಿನ ಸೊಗಡನ್ನು ಕರ್ಮಭೂಮಿಯಲ್ಲೂ ಬಿತ್ತರಿಸುತ್ತಿರುವ ಭೂಮಿಕಾ ಕಲಾ ಸಂಸ್ಥೆಯವರು ಹಮ್ಮಿಕೊಂಡಿರುವ ಹೊಸ ಕಾರ್ಯಕ್ರಮ ಲಘು ಸಂಗೀತ ಕಚೇರಿ.
ಮಾರ್ಚ್ 24 ರ ಶನಿವಾರ ನಡೆಯುವ ಈ ಕಚೇರಿಯ ಉದ್ದೇಶ ಗುಜರಾತ್ ಭೂಕಂಪ ಸಂತ್ರಸ್ತರ ಪರಿಹಾರ ನಿಧಿಗೆ ಹಣ ಸಂಗ್ರಹಿಸುವುದು. ಸಂಗೀತ ಕಚೇರಿಯಿಂದ ನಿಮಗೆ ಇಮ್ಮಡಿ ಲಾಭ. ಕಚೇರಿಯಿಂದ ಮನಸ್ಸು ತುಂಬಿಕೊಂಡರೆ, ಪ್ರವೇಶಕ್ಕಾಗಿ ನೀವು ತೆರುವ ಡಾಲರ್ ಗುಜರಾತಿನ ಮೂಲೆಯಾಂದರ ಮರಕ್ಕೆ ತೂಗುವ ಜೋಲಿಯಲ್ಲಿನ ಮಗುವಿನ ಅಳುವಿಗೆ ಉತ್ತರವಾದೀತು.
ಅಂದಹಾಗೆ, ಕಚೇರಿ ನಡೆಸಿಕೊಡುವವರು ಸಂಗೀತ ಕಲಾವಿದರಾದ ಶಾಮ ಬಿ.ಪೈ ಮತ್ತು ಮುರಳೀಧರ್ ಬಿ. ಪೈ . ಸಂಜೆ ಆರಕ್ಕೆ ಪ್ರಾರಂಭವಾಗುವ ಸಂಗೀತ ರಸಧಾರೆ ರಾತ್ರಿ ಒಂಭತ್ತರವರೆಗೂ ಹರಿಯುತ್ತದೆ. ಸ್ಥಳ : ಬಾವರ್ ಕಮ್ಯೂನಿಟಿ ಸೆಂಟರ್, 14625, ಬ್ರಾವರ್ ಡ್ರೆೃವ್, ರಾಕ್ ವಿಲ್, ಮೇರಿಲ್ಯಾಂಡ್- 208553. ನಿಮ್ಮ ಆತ್ಮಕ್ಕೆ ಸಂತೋಷವಾಗಲಿ.
(ಇನ್ಫೋ ವಾರ್ತೆ)