‘ಸೀಳ್ಗವನಗಳು’-ಒಂದು ಅಪೂರ್ವ ಕವನ ಸಂಕಲನ :ಭಾಗ-2

ಬಹಳ ಕಷ್ಟಪಟ್ಟು ದಡಬಡನೆ ಹತ್ತಿರಬೇಕು ಬೆಟ್ಟವನ್ನ, ಏಕೆಂದರೆ ಅವರುಗಳು ಅಲ್ಲಿಂದಲೇ-

‘ಸಾರಿಯೇ ಸಾರಿದರು, ಮೇಲುಸಿರು ಸೂಸಿದರು
ಸಾರಿದಾ ಸಂದೇಶ ಸಂದೇಹವಾಗೆ ! ’

(ಪದ್ಯ : ‘ಸಂದೇಶ ಸಂದೇಹವಾಗೆ’)

‘ಕುರಿತು ಏನನ್ನೂ ಓದದೆಯುಂ ಆಗಿರುವ ಪರಿಣತ-ಮತಿಗಳೇ’

ಕುಕವಿ ನಿಂದೆಗೆ ಆಹಾರವಾಗುವ ಕವನಗಳು ತುಂಬಿರುವ ಈ ಸಂಕಲನದಲ್ಲಿ ಹೆಜ್ಜೆಹೆಜ್ಜೆಗೂ ‘ನಿಮಗೆ ಎಟುಕದ ಹಣ್ಣಿನತ್ತ ಕೈಯೆತ್ತಿ ಹಾರುತ್ತ ಅಪಹಾಸ್ಯಕ್ಕೀಡಾಗುವ ಕುಬ್ಜರಾಗಬೇಡಿ’ ಎಂಬ ಹಿತವಚನ ಹಿನ್ನೆಲೆಯಲ್ಲಿದೆ. ಶ್ರೀವಿಜಯನ ಪ್ರಕಾರ ‘ಕುರಿತೋದದೆಯುಂ ಪರಿಣತ ಮತಿಗಳೇ’ ತುಂಬಿರುವ ನಮ್ಮ ನಾಡಿನ ಕಬ್ಬಿಗ ಗಬ್ಬಿಲರ ಪಾಡಿಗೆ ಇನ್ನೊಂದು ಉದಾಹರಣೆ ನೋಡಿ:

‘ಕನ್ನಾಡ ಧೂಳಿನಲಿ ಹೊರಳಿದವರೆಲ್ಲರೂ
ಕವಿಗಳೇ ಇರಬೇಕು ಎಂದ ನೃಪತುಂಗ.
ಅವನ ನುಡಿಗೆ ಎಂದೆಂದೂ ಬರಲಾರದೈ ಭಂಗ !

ಅಂದಿನಿಂ ನೆಲದ ಗುಣ ಮೆರಸಲಿಕೆಂದು
ತೊದಲಿದರು ನೋಡದೆಯೆ ಹಿಂದುಮುಂದು.

ತಿಕ್ಕಿ ತೀಡುತ ಭಾವ, ನುಡಿಗಳನು ಉಗುಳಿದರು;
ಸರಸತಿಯ ಕಗ್ಗಾಡ ಕಸಕಡ್ಡಿಗಳ ಹೆಕ್ಕಿ
ಬಿಕ್ಕಿದರು ನಾಲ್ದೆಸೆಗೆ, ಕಾವ್ಯದಾ ರೆಕ್ಕೆ.

ಬಿಡಲಿಲ್ಲ ಅಷ್ಟಕ್ಕೆ - ಲೆಕ್ಕಣಿಕೆಯ ಪಿಡಿದು
ಗುಡುಗುಡಿಸಿ ನುಡಿಗಳನು ಗೀಚಿಯೇ ಗೀಚಿದರು;

ಬಾಚಿದೆಲ್ಲವೂ ಶಬುದ,
ಗೀಚಿದೆಲ್ಲವೂ ಕವನ!
ತುಂಬಿಸಿಡಲವನ್ನೆಲ್ಲ ಕಟ್ಟಿದರು ಭವನ!

ಅದು ಹಡೆಯಿತೊಂದು ದಿನ
ಕಿರಿಕಿರಿಯ ಕೂಸು ಮರಿ; ಮರಿಕೂಸು !

ಕಾವ್ಯ ಮಂದಿರ ಕಂಡು ಬೆರಗಾಯ್ತು, ಬಲು ಬೆರಗು
‘ಮಾತಿನಿಂದಲೇ ಆಯ್ತು -
ಈ ಭವ್ಯಾನುಭವ್ಯ ವಾಸ್ತು !
ನಿಬ್ಬೆರಗಿನಿಂ ನಾನು ಬಿದ್ದಿಹೆನು ಬೇಸ್ತು!
ಇರುವ+ಒಂದು ಜಿಹ್ವೆಯನು ಅರ್ಪಿಸುವೆ ಅಸ್ತು !’

(ಕನ್ನಾಡ ಕೂಸು ಮರಿ ...)

ಹಾಗಾದರೆ, ಕೇಳುತ್ತೀರಾ ? ‘‘ ಯಾಕೆ ನೀ ಆಗಿಲ್ಲ ಕವಿ ? ’’ ಉತ್ತರಿಸುತ್ತಾರೆ, ಅದೇ ಶೀರ್ಷಿಕೆಯ ಕವನದಲ್ಲಿ. ‘ನಾನೃಷಿ : ಕುರುತೇ ಕಾವ್ಯಮ್‌’ ಎಂಬುದರ ಅರ್ಥವನ್ನ ತಮಗೆ ತೋಚಿದಂತೆ ಹಿಗ್ಗಿಸಿಕೊಂಡು ‘‘ ತಾನು ಕವಿ, ತಾನು ಕವಿ ’’ ಎನ್ನುತ್ತ ಕಿವಿಗಡಚಿಕ್ಕುವಾ ತೆರದಿ ಸಾರಿ ಕೊಬ್ಬಿದ ಜನರೂ ’ ಇದ್ದಾರೆ, ಕೆಲವರು. ಅವರಿಗೆ ವಿಭಿನ್ನವಾಗಿ, ನೂರಾ ಹದಿನೆಂಟು ಡಿಗ್ರಿ ವಿಮುಖರಾಗಿ ಇನ್ನು ಕೆಲವರು ‘ಬಾಳಿನಲಿ ಬೆಳಕು ಮಿಂಚುತ ಸರಿದ ಹಿರಿಯರು ಇದ್ದೆ ಇಹರು’. ಅವರನ್ನು ನೆನೆಯುತ್ತ, ಹೇಳುತ್ತಾರೆ :

‘ ಎಳೆತನದಿ ಆ ಗುಂಗು ನನಗಂಟಿಕೊಳಲಿಲ್ಲ ;
ಲೋಕ ಕಾಣದ ಸತ್ಯ
ನನಗೆ ಸಿಕ್ಕೀತೆಂದು ಎಣಿಸಲಿಲ್ಲ.
ಮಾತನಾಡಲು ಕಲಿತೆ- ನನ್ನ ಮನವನು ತಿಳಿಸೆ,
ಮಾತನಾಡಲು ಕಲಿತೆ- ಪರರ ಇಂಗಿತ ಅರಿಯೆ,
ಅವರ ಎಡೆ ಬಾಳ ಸವೆ ಅದು ಬೇಕೇ ಬೇಕು;
ಅದಕಿಂತ ಹೆಚ್ಚೇನು ಬಯಸಲಿಲ್ಲ.
ಮಾತೆ ಆಯಿತು ನನ್ನ ತಾಯಿ ತಂದೆ !’

(ಯಾಕೆ ನೀ ಆಗಿಲ್ಲ ಕವಿ )

- ಎಂದು ವಿನಯದಿಂದ ಹೇಳಿಕೊಳ್ಳುತ್ತಾರೆ. ಮುಂದುವರಿದು ‘ತಮಗೆ ಅರಿವು ಹೊಳೆಯದೆಯು । ಸಾರಿ ಸರಿದರು ತಮ್ಮ ತತ್ವಗಳ ಮಿಂಚಿ....’ ‘ ತಮ್ಮ ಪಾಲಿನ ತಿಳಿವ ಬೀರಿ ಹೋದರು ಕೆಲರು ’ ‘ ಅಂಥ ಹಿರಿಮೆಯು ನನಗೆ ಬಂದಿತಾದರೆ ಕೇಳು । ಆ ಅರಿವು ಆ ಮಾತು ಮೊದಲು ನಡೆಸಲಿ ಬಾಳು !’ ಎನ್ನುತ್ತಾರೆ. ಎತ್ತರಕ್ಕೆ ಬೆಳೆದ ಉದ್ದನೆಯ ಈ ಮರ ಎಷ್ಟೊಂದು ಬಗ್ಗಿದೆ (‘ವಿನಮ್ರ’ವಾಗಿದೆ)!

ಆದರೆ, ಅರ್ಥ ಶೂನ್ಯತೆ, ಅರ್ಥರಾಹಿತ್ಯ ಮತ್ತು ಅರ್ಥ ವೈಪರೀತ್ಯಗಳನ್ನು ಕೆಣಕಿ ಕುಟುಕುವುದರಲ್ಲಿ ಎತ್ತಿದ ಕೈ. ಇಲ್ಲಿ ನೋಡಿ :

‘.....ಮುಂಗಾಲದಲಿ ಜನತೆ ಹೇಗೆ ಬಾಳಲು ಬೇಕು
ಎಂಬ ಹೊಣೆ ಹೊತ್ತಿರುವ ಕವಿ ಪುಂಗವರು, ನಾವು.
ಈಗಿನವರು, ತಿತ್ತೀರ ಈಚಿನವರು, ಈಚೀಚಿನವರು
ಹಳಸಿರುವ ಶಬ್ದಗಳ ಬಳಸಿರುವ ಅರ್ಥಗಳ
ಈ ಅರ್ಥಗಳಿಗೇ ಬಂದಿಹ ವಾಗಂಶಗಳ
ಬಿಗಿದ ನಿರ್ಬಂಧಗಳ ಹರಿದು ಒಗೆದು...’

ತನ್ಮೂಲಕ ಹೊಸ ಹೊಸ ಅರ್ಥ ವೈಶಾಲ್ಯವನ್ನ ಬಾಹುಳ್ಯವನ್ನ ವಿಸ್ತಾರವನ್ನ ಸೃಜಿಸುವ

‘ನಮ್ಮ ಕವನಗಳೋದಿ ಅರ್ಥವಾಗದೆ ಹೋಗೆ,
ನಾವು ಹೊಣೆಗಾರರಲ್ಲ !....’

(ಎಚ್ಚರಿಕೆ ನೋಡು)

ಎನ್ನುವ ‘ ತೊದಲು ಭಾಷೆಗೆ ಹಿಗ್ಗಿ ಕಿಗ್ಗವಿಗಳಾದವರನ್ನ ’ಕಂಡು ಭರ್ತ್ಸನೆ ಮಾಡುತ್ತಾರೆ.


ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+