• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಯೋಗಕ್ಷೇಮಂ ವಹಾಮ್ಯಹಂ’: ಐಡಿಆರ್‌ಎಫ್‌ ತಂದಿದೆ ಯೋಗಭಾರತಿ

By Staff
|
  • ಇನ್ಫೋ ಇನ್‌ಸೈಟ್‌

Yogaನಿಮಿಷಕ್ಕೊಮ್ಮೆ ಹದಗೆಡುವ ಆರೋಗ್ಯಕ್ಕೆ ಉಪಶಮನ ಹೇಳುವುದು ಹೇಗೆ? ಮಾತ್ರೆ , ಟಾನಿಕ್‌ ಸಿರಪ್‌ಗಳ ಸಹವಾಸ ಕಿರಿಕಿರಿ ಎನಿಸಿಬಿಟ್ಟಾಗಲಂತೂ ಈ ಪ್ರಶ್ನೆ ಮತ್ತಷ್ಟು ಗಾಢವಾಗುತ್ತದೆ. ಈ ನಿಟ್ಟಿನಲ್ಲಿ ಪರಿಹಾರ ರೂಪವಾಗಿ ಎದುರು ನಿಲ್ಲುವುದು- ಯೋಗ!

ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಯೋಗ ರಾಮಬಾಣ ಎನ್ನುವ ನಂಬಿಕೆ ಜನಮನದಲ್ಲಿ ಬಲವಾಗುತ್ತಿದೆ. ಆ ಕಾರಣದಿಂದಲೇ ಯೋಗ ಕ್ಯಾಂಪ್‌ಗಳು- ಕ್ಲಾಸ್‌ಗಳು ಹೆಚ್ಚಾಗುತ್ತಿವೆ. ಜನ ಯೋಗ ಮಾಡಿ ಆರೋಗ್ಯವಂತರಾಗಬೇಕು : ಅದಕ್ಕೂ ಮುನ್ನ ಯೋಗ ಕಲಿಯಬೇಕು, ಆಸಕ್ತಿ ಬೆಳೆಸಿಕೊಳ್ಳಬೇಕು. ಇಂಥ ಒಂದು ಉದ್ದೇಶದಿಂದ ಐಡಿಆರ್‌ಎಫ್‌ (India Development & Relief Fund) ಯೋಗಭಾರತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಬೇ ಏರಿಯಾದ (SF Bay Area) ಐಡಿಆರ್‌ಎಫ್‌ ನ ಯೋಗ ಭಾರತಿ ಕೇಂದ್ರವು ಮಾರ್ಚ್‌ ತಿಂಗಳಿನಲ್ಲಿ ಯೋಗ ಕಾರ್ಯಾಗಾರಗಳ ಹಾಗೂ ವಾರಾಂತ್ಯದ ಕಾರ್ಯಕ್ರಮಗಳ ರೂಪು ರೇಷೆಗಳನ್ನು ಸಿದ್ಧಪಡಿಸಿದೆ. ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಅಂತರರಾಷ್ಟ್ರೀಯ ಸಂಯೋಜಕ ಎನ್‌. ವಿ. ರಘುರಾಮ್‌ ಕಾರ್ಯಕ್ರಮಗಳಿಗೆ ಹೆಗಲು ನೀಡಿದ್ದಾರೆ.

ಯೋಗ ಚಟುವಟಿಕೆಗಳ ಪಟ್ಟಿ :

1. ಫ್ರೀಮಾಂಟ್‌ನ ಹಿಂದೂ ದೇವಸ್ಥಾನದಲ್ಲಿ ಮಾರ್ಚ್‌ 16, 17ರಂದು ಬೆಳಗ್ಗೆ 8ರಿಂದ 11-30ರವರೆಗೆ.
2. ಸಾನ್‌ ರಾಮನ್‌ನ ಕಮ್ಯೂನಿಟಿ ಸೆಂಟರ್‌ನಲ್ಲಿ ಮಾರ್ಚ್‌ 18, 19, 20ರಂದು ಬೆಳಗ್ಗೆ 7ರಿಂದ 9ರವರೆಗೆ

3. ಕುಪರ್ಟಿನೋದಲ್ಲಿ ಮಾರ್ಚ್‌ 2ರಿಂದ 3 ದಿನಗಳ ಕಾಲ ಬೆಳಗ್ಗೆ 7ರಿಂದ 9ರವರೆಗೆ (ಸ್ಥಳ ನಿಗದಿಯಾಗಿಲ್ಲ)

4. ಸನಿವೇಲ್‌ನ ಹಿಂದೂ ದೇವಳದಲ್ಲಿ ಮಾರ್ಚ್‌ 21, 22 ಹಾಗೂ 25 ರಿಂದ 4 ದಿನಗಳ ಕಾಲ ಯೋಗ ತರಬೇತಿ ಕಾರ್ಯಾಗಾರ ನಡೆಯಲಿದೆ.

ಯೋಗ ವಸತಿ ಶಿಬಿರಗಳು : ಲಾ ಹೊಂಡಾದಲ್ಲಿ ಮಾರ್ಚ್‌ 22ರಂದು ಏಳು ಗಂಟೆಗೆ ಆರಂಭ. ಮಾರ್ಚ್‌ 24ರಂದು ಮಧ್ಯಾಹ್ನ ಕ್ಕೆ ಮುಕ್ತಾಯ. ವಿವರಗಳಿಗೆ www.campjonesgulch.org ಗೆ ಭೇಟಿ ಕೊಡಿ.

ಯೋಗ, ಪ್ರಾಣಾಯಾಮ, ಸ ್ವಚಿಕಿತ್ಸೆಗೆ ಸಹಕರಿಸಬಲ್ಲ ಥೆರಪಿಗಳು, ಮತ್ತು ಮನೋ ಬೇನೆ ಚಿಕಿತ್ಸೆಗಳ ಬಗ್ಗೆ ಈ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಗುವುದು. ಗಣೇಶ ಆಯುರ್ವೇದ ಹಾಗೂ ವೇದಿಕ್‌ ಅಧ್ಯಯನ ಸಂಸ್ಥೆಯ ಪ್ರತಿಚಿ ಮಥೂರ್‌,( www.healingmission.com) ಸೆಲ್ಫ್‌ ಕಾರ್ಪ್‌ (www.selfcorp.com) ನ ಸಿಇಓ ಪ್ರಸಾದ್‌ ಕೈಪಾ, ಆಯುರ್ವೇದ ಸಂಸ್ಥೆ (www.herbalcare.com) ಯ ಡಾ. ಆಪ್ಟೆ ಮತ್ತಿತರರು ಈ ಶಿಬಿರದಲ್ಲಿ ಉಪನ್ಯಾಸ, ಮಾರ್ಗದರ್ಶನ ನೀಡಲಿದ್ದಾರೆ.

ಶುಲ್ಕ ವಿವರ : ಯೋಗ ಕಾರ್ಯಾಗಾರಗಳಿಗೆ 25 ಡಾಲರ್‌
ಯೋಗ ತರಬೇತಿ ಶಿಬಿರಗಳಿಗೆ 50 ಡಾಲರ್‌
ಲಾ ಹೊಂಡಾದಲ್ಲಿ ನಡೆಯುವ ವಸತಿ ಶಿಬಿರಗಳಿಗೆ 100 ಡಾಲರ್‌.

ತಮ್ಮ ಹೆಸರು ನೋಂದಾಯಿಸ ಬಯಸುವವರು yoga_rsvp@yahoo.com ವಿಳಾಸಕ್ಕೆ ಮೇಯ್ಲ್‌ ಮಾಡಬಹುದು. ಯೋಗ ಶಿಬಿರ ಅಥವಾ ಕಾರ್ಯಾಗಾರಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
Jagadeesh Maiya jmaiya@cisco.com 4087334657
Sampath Krishnabhat samk@cisco.com 4082449119
P Sathyanarayana s_p_kumar@hotmail.com 4087385694
Nagaraj Patil patil_nagaraj@yahoo.com 5109676306
Chanderprakash Malik 5106901130
ಯೋಗ ಶಿಕ್ಷಕ ಎನ್‌. ವಿ. ರಘುರಾಮ್‌ ನಿಮಗೆ ಗೊತ್ತೇ?

ರಘುರಾಮ್‌ ಅವರು, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಅಂತರರಾಷ್ಟ್ರೀಯ ಸಂಯೋಜಕ. ಯೋಗ ತರಬೇತಿ ಶಿಬಿರಗಳಲ್ಲಿ ಶಿಕ್ಷಕ. ಪ್ರಾಣಾಯಾಮ, ಯೋಗಾಸನ , ಧ್ಯಾನದ ಬಗ್ಗೆ ಉಪನ್ಯಾಸ, ತರಬೇತಿ ನೀಡುತ್ತಾರೆ. ವಿವಿಧ ರೋಗಗಳಿಗೆ ಚಿಕಿತ್ಸೆಗಳ ಬಗೆಗೂ ರಘುರಾಮ್‌ ತಿಳಿಸಿಕೊಡಬಲ್ಲರು.

ಕಳೆದ 20 ವರ್ಷಗಳಿಂದ ಯೋಗ ಕ್ಷೇತ್ರದಲ್ಲಿ ಅಧ್ಯಯನ ನಡೆಸಿದವರು. ಜರ್ಮನಿ, ಆಸ್ಟ್ರೇಲಿಯಾ, ಜಪಾನ್‌, ಶ್ರೀಲಂಕಾ, ಅಮೆರಿಕಾ, ಸ್ವಿಟ್ಜರ್‌ಲ್ಯಾಂಡ್‌, ಸಿಂಗಪುರಗಳಲ್ಲಿ ಸಂಚರಿಸಿ, ಯೋಗ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಉಪನ್ಯಾಸಗಳನ್ನು ನೀಡಿದ ಅನುಭವ ಉಳ್ಳವರು. ಪ್ರಸ್ತುತ ಬೆಂಗಳೂರಿನಲ್ಲಿ ಯೋಗ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ನಡೆಸುತ್ತಿದ್ದಾರೆ. ಯೋಗದ ವಿವಿಧ ಆಯಾಮಗಳನ್ನಾಧರಿಸಿ ಪಿಎಚ್‌.ಡಿ ಮಾಡುತ್ತಿರುವವರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಮಾನಸಿಕ ತೊಂದರೆಗಳಿದ್ದಾಗ ಸಮಾಲೋಚನೆ, ಭಗವದ್ಗೀತೆ, ಭಕ್ತಿ, ಜ್ಞಾನ, ರಜ ಮತ್ತು ಕರ್ಮ ಯೋಗಗಳು ನಮ್ಮನ್ನು ಮುಂದುವರೆಸಬಲ್ಲವು ಎಂಬ ಬಗ್ಗೆ ಮಾರ್ಗದರ್ಶನ, ಪತಂಜಲಿಯ ಯೋಗ ಸೂತ್ರ, ಯೋಗ ಥೆರಪಿ , ಹಿಂದೂ ಧರ್ಮ, ಉಪನಿಷತ್ತುಗಳು... ಹೀಗೆ ಯೋಗ ಮತ್ತು ಆಧ್ಯಾತ್ಮದ ಬಗ್ಗೆ ರಘುರಾಮ್‌ ಅವರನ್ನು ಮಾಹಿತಿ ಭಂಡಾರ ಎಂದು ಕರೆದರೆ ತಪ್ಪಿಲ್ಲ . ಪ್ರಸ್ತುತ ಸ್ಕಿಜೋಫ್ರೀನಿಯಾ ಮತ್ತು ಮಾನಸಿಕ ರೋಗಿಗಳಿಗೆ ಯೋಗ ಥೆರಪಿ ಹೇಗೆ ಸಾಧ್ಯ ಎಂಬ ಬಗೆಗಿನ ಯೋಜನೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಐಡಿಆರ್‌ಎಫ್‌ ಪ್ರಾಥಮಿಕ ಉದ್ದೇಶ- ಅಮೆರಿಕಾದ ದೇಣಿಗೆದಾರರಿಗೆ ಹಾಗೂ ಭಾರತದಲ್ಲಿ ಆ ದೇಣಿಗೆಯಿಂದ ಪ್ರಯೋಜನ ಪಡೆಯುತ್ತಿರುವವರಿಗೆ ಸಹಕರಿಸುವುದು. ದೇಣಿಗೆಯ ಹಣ ಮಧ್ಯವರ್ತಿಗಳ ನಡುವೆ ಎಲ್ಲಿಯೂ ಪೋಲಾಗದಂತೆ ನೋಡಿಕೊಂಡು, ನಿಧಿ ನೇರವಾಗಿ ಎನ್‌ಜಿಒಗಳಿಗೆ ತಲುಪುವಂತೆ ಐಡಿಆರ್‌ಎಫ್‌ ಕೆಲಸ ಮಾಡುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಐಡಿಆರ್‌ಎಫ್‌ ವೆಬ್‌ ಸೈಟ್‌ ನೋಡಿ- www.idrf.org.

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more