ಜ.5ರಂದು ಸ್ಯಾನ್‌ಡಿಗೋದಲ್ಲಿ ಹಿಂದೂಸ್ತಾನಿ ಸಂಗೀತ ಕಚೇರಿ
ಜನವರಿ ಐದರ ಸಂಜೆ ನೀವು ಖಂಡಿತಾ ಪುರುಸೊತ್ತು ಮಾಡಿಕೊಳ್ಳಬೇಕು. ಒಂದು ತಣ್ಣನೆಯ ಸಂಜೆ ನಿಮಗೋಸ್ಕರ ಕಾಯುತ್ತಿದೆ. ಅದು ವಿಭಾ ಕಿನ್ಹಾಲ್ ಅವರ ಹಿಂದೂಸ್ತಾನೀ ಸಂಗೀತ ಗಾಯನ ಸಂಜೆ. ಪಂಡಿತ್ ವಿನಾಯಕ ತೋರ್ವಿ ಅವರ ಶಿಷ್ಯೆ, ಭೀಮ್‌ಸೇನ್ ಜೋಶಿ ಮತ್ತು ಗಂಗೂಬಾಯಿ ಹಾನಗಲ್ ಅವರ ಅನುಯಾಯಿ, ವಿಭಾ ಕಿನ್ಹಾಲ್ ಸಂಗೀತ ಸಂಜೆ ಪ್ರಸ್ತುತ ಪಡಿಸುತ್ತಾರೆ.
ಕಾರ್ಯಕ್ರಮ ನಡೆಯುವುದು ಶಿವ ವಿಷ್ಣು ದೇವಸ್ಥಾನದಲ್ಲಿ. (Shiva Vishnu Temple of San Diego, 7930 Arjons Drive, Suite B, San Diego, CA 92126). ಶನಿವಾರ ಸಂಜೆ ಶಾರ್ಪ್ ಐದು ಗಂಟೆಗೆ ಕಾರ್ಯಕ್ರಮ ಆರಂಭ. ಒಬ್ಬರೇ ಬಂದರೆ 10 ಡಾಲರ್ ಕೊಡಬೇಕು. ಮನೆಯವರೊಂದಿಗೆ ಬಂದರೆ 15 ಡಾಲರು ಕೊಟ್ಟರಾಯ್ತು.
ಕಿನ್ಹಾಲ್ ಅವರ ಸಂಗೀತ ಕಚೇರಿಗೆ ಹೇಮಂತ್ ಏಕಬೋಟೆ ತಬಲಾ ಸಾಥ್ ನೀಡುತ್ತಾರೆ. ಚಂದ್ರ ಐತಾಳ್ ಹಾರ್ಮೋನಿಯಂ ನುಡಿಸುತ್ತಾರೆ. ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಏನಾದರೂ ಬೇಕಿದ್ದಲ್ಲಿ, ಶಿವ ವಿಷ್ಣು ದೇವಳ (858) 549-3940) ಅಥವಾ ಕಿನ್ಹಾಲ್ಸ್ (858) 538-4312)ಫೋನಾಯಿಸಬಹುದು.
ವಿಭಾ ಕಿನ್ಹಾಲ್ ಸಾಧನೆ:
-1998ರಲ್ಲಿ ಆರ್ಯಭಟ ಪ್ರಶಸ್ತಿ
-ಗುರುರಾವ್ ಸಂಗೀತ ಸಭಾ ಮತ್ತು ವಾಣಿ ವಿದ್ಯಾ ಕೇಂದ್ರಗಳಲ್ಲಿ ಸಂಗೀತ ಕಚೇರಿ
-1998ರಲ್ಲಿ ಚೆನ್ನೈಯಲ್ಲಿ ನಡೆದ ರಾಷ್ಟ್ರ ಮಟ್ಟದ ಶಾಸ್ತ್ರೀಯ ಮತ್ತು ಸುಗಮ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ
-ಬೆಂಗಳೂರು ಆಕಾಶವಾಣಿಯಲ್ಲಿ ಖಾಯಂ ಸುಗಮ ಸಂಗೀತ ಹಾಡುಗಾರಿಕೆ
-1993ರಲ್ಲಿ ಅಖಿಲ ಭಾರತ ಆಕಾಶವಾಣಿ ಸಂಗೀತ ಸ್ಪರ್ಧೆಯಲ್ಲಿ ಬಹುಮಾನ ವಿಜೇತೆ
-ಏಷ್ಯನ್ ಸಂಗೀತೋತ್ಸವದಲ್ಲಿ, ಅಮೆರಿಕಾದಲ್ಲಿ ಕಚೇರಿ ನೀಡಿದ ಹೆಗ್ಗಳಿಕೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications