ಕ್ಯಾಲಿಫೋರ್ನಿಯಾದಲ್ಲಿ ಸಹೃದಯರ ಗೋಷ್ಠಿ
ಕ್ಯಾಲಿಫೋರ್ನಿಯಾ : ಫೆಬ್ರವರಿ 25 ರ ಭಾನುವಾರದ ಪ್ರೋಗ್ರಾಂ ಆಗಲೇ ಫಿಕ್ಸ್ ಮಾಡಿಕೊಂಡಿಲ್ಲ ತಾನೇ ? ಕ್ಯಾಲಿಫೋರ್ನಿಯಾದ ಸರಟೋಗದ ಮಿಲ್ಲರ್ಸ್ ಅವೆನ್ಯೂನಲ್ಲಿರುವ ಮನೆಯಾಂದರಲ್ಲಿ ಸಾಹಿತ್ಯ ಮಿಲನವಿದೆ. ಖಂಡಿತ ಬನ್ನಿ ಅಂತ ಆಯೋಜಕರು ಕರೆಯೋಲೆ ಕಳಿಸಿದ್ದಾರೆ.
ಅಲಮೇಲು ಮತ್ತು ತಿರು ಎನ್. ಅಯ್ಯಂಗಾರ್ ಅವರ ಮನೆಯಲ್ಲಿ ‘ಸಹೃದಯ ಗೋಷ್ಠಿ ’ ಭಾನುವಾರ ಮಧ್ಯಾಹ್ನ ಶಾರ್ಪ್ ಎರಡು ಗಂಟೆಗೆ ಆರಂಭವಾಗುತ್ತದೆ. ನ್ಯೂ ಜೆರ್ಸಿಯ ಡಾ. ಹೆಮ್ಮಿಗೆ ವಿ. ರಂಗಾಚಾರ್ ಸಹೃದಯರ ಗೋಷ್ಠಿಯಲ್ಲಿ ನಿಮ್ಮೊಡನಿರುತ್ತಾರೆ.
ಹೆಮ್ಮಿಗೆ ರಂಗಾಚಾರ್ ಗೊತ್ತಲ್ಲ ! ಅನೇಕ ಕನ್ನಡ ಸಾಹಿತ್ಯ ಸಂಬಂಧಿ ಪುಸ್ತಕಗಳನ್ನು ಬರೆದಿದ್ದಾರೆ. ಕಳೆದ ವರ್ಷ ಮಾರ್ಚ್ ನಲ್ಲಿ ಅವರ ಹೇರೋದತ್ತನ ಸಮರ ಕತೆಗಳು ಎಂಬ ಪುಸ್ತಕವನ್ನು ಬೆಂಗಳೂರಿನ ಅಂಕಿತ ಪ್ರಕಾಶನದವರು ಪ್ರಕಟಿಸಿದ್ದರು.
ಲೇಟಾಗಿ ಬರಬೇಡಿ ಮತ್ತೆ. ಕಾರ್ಯಕ್ರಮ ನಾಲ್ಕು ಗಂಟೆಗೆಲ್ಲಾ ಮುಗಿದು ಹೋಗುತ್ತದೆ. ಯಾವುದೇ ಫೀಸು, ರೆಜಿಸ್ಟ್ರೇಷನ್‌ನ ಗೋಜಿಗೆ ಹೋಗಬೇಕೆಂದಿಲ್ಲ. ಮನೆಯವರ ಆತಿಥ್ಯ, ಲಘು ಉಪಾಹಾರ ಜೊತೆಗೆ ಸಾಹಿತ್ಯಿಕ ಹರಟೆ... ಭಾನುವಾರ ಸಂಜೆಯನ್ನು ಸುಂದರವಾಗಿ ಕಳೆಯಲು ಇನ್ನೇನು ಬೇಕು ಹೇಳಿ.
ಈ ಸಾಹಿತ್ಯ ಮಿಲನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಿದ್ದರೆ ಅಲಮೇಲು ಅವರ ಮನೆಗೆ ಫೋನ್ ಮಾಡಬಹುದು. ಫೋನ್ ನಂಬರ್ - 408-252-2699 ([email protected])
ಅಥವಾ ಅಲ್ಲಿನ ನಾಗಲಕ್ಷ್ಮಿ ಮತ್ತು ಹರಿಹರೇಶ್ವರ ದಂಪತಿಗಳನ್ನು ಸಂಪರ್ಕಿಸಬಹುದು - 209-957-6825, ([email protected]). ಕಾರ್ಯಕ್ರಮ ನಡೆಯುವ ಮನೆಯ ವಿಳಾಸ - 12781, ಮಿಲ್ಲರ್ ಅವೆನ್ಯಾ, ಸರಟೋಗ, ಸಿಎ 95070
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications