ಭಾರತೀಯ ಸಂಜಾತ ಉದ್ದಿಮೆದಾರರೇ... ನಿಮಗೊಂದು ಸಮ್ಮೇಳನ
ಲಾಭ ಮಾಡದೆ, ಸರ್ಕಾರದ ನೆರವೂ ಇಲ್ಲದೆ ಜಗತ್ತಿನಾದ್ಯಂತ ಹರಡಿಕೊಂಡಿರುವ ಭಾರತೀಯ ಹಿತಾಸಕ್ತಿಗಳ ಕಾಪಿಡಲು ಶ್ರಮಿಸುತ್ತಿದೆ ಭಾರತೀಯ ಸಂಜಾತರ ಜಾಗತಿಕ ಸಂಸ್ಥೆ (ಜಿಓಪಿಐಓ). 1989ರಲ್ಲಿ ನ್ಯೂಯಾರ್ಕ್‌ನಲ್ಲಿ ಸ್ಥಾಪಿತವಾದ ಈ ಸಂಸ್ಥೆ ಭಾರತೀಯ ಕೈಗಾರಿಕೋದ್ಯಮಿಗಳ 3ನೆಯ ಸಮ್ಮೇಳನವನ್ನು ಆಯೋಜಿಸಿ, ನಿರ್ವಹಿಸುವ ಹೊಸ ಜವಾಬ್ದಾರಿಯನ್ನು ಈಗ ಹೊತ್ತಿದೆ.
ನ್ಯೂಯಾರ್ಕ್ ನಗರಿಯ ಕ್ರೌನ್ ಪ್ಲಾಜಾ ಹೊಟೇಲಿನಲ್ಲಿ ಸೆಪ್ಟೆಂಬರ್ 23ರಿಂದ 26ರವರೆಗೆ ಸಮ್ಮೇಳನ ನಡೆಯಲಿದೆ. 1996ರಲ್ಲಿ ನಡೆದ ಮೊದಲ ಜಾಗತಿಕ ಮಟ್ಟದ ಭಾರತೀಯ ಕೈಗಾರಿಕೋದ್ಯಮಿಗಳ ಸಮ್ಮೇಳನವನ್ನು ಸಿಂಗಪೂರ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಯೋಜಿಸಿತ್ತು. 1998ರಲ್ಲಿ ನಡೆದ ಎರಡನೇ ಸಮ್ಮೇಳನದ ಜವಾಬ್ದಾರಿಯನ್ನು ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ಹೊತ್ತಿತ್ತು.
ಸಮ್ಮೇಳನ ಯಾಕೆ ? : ಭಾರತದಲ್ಲಿ ಹುಟ್ಟಿರುವ 20 ದಶಲಕ್ಷ ಮಂದಿ ಈ ಹೊತ್ತು ಜಗತ್ತಿನಾದ್ಯಂತ ತಾಂತ್ರಿಕ ಹಾಗೂ ವಿತ್ತ ಕ್ಷೇತ್ರದ ಬೆನ್ನೆಲುಬಾಗಿದ್ದಾರೆ. ಸಮ್ಮೇಳನದ ಉದ್ದಿಶ್ಯ : ಲಕ್ಷ್ಮಿ- ಸರಸ್ವತಿ ಒಲಿದಿರುವ, ಭಾರತದಲ್ಲಿ ಹುಟ್ಟಿರುವವರು ಜಗತ್ತಿನ ಯಾವುದೇ ದೇಶದಲ್ಲಿರಬಹುದು. ಅಂಥವರನ್ನು ಒಂದೇ ಸೂರಡಿ ಕರೆತಂದು, ಭಾರತ ಹಾಗೂ ತಮ್ಮ ತಮ್ಮ ದೇಶಗಳಲ್ಲಿ ಹೂಡಿಕೆಗೆ ಯಾವ್ಯಾವ ಅವಕಾಶಗಳಿವೆ ಎಂದು ಚರ್ಚಿಸುವುದು. ನಂತರ ಕೈಜೋಡಿಸಿ, ಬಂಡವಾಳ ಹೂಡುವುದು.
ಅದೇ ಸಮಯದಲ್ಲಿ ನ್ಯೂಯಾರ್ಕ್‌ನಲ್ಲಿಯೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಚರ್ಚೆ ನಡೆಸಲಿದೆ. ಹೀಗಾಗಿ ಹೆಚ್ಚು ಹೆಚ್ಚು ಭಾರತೀಯ ಸಂಜಾತ ಉದ್ಯಮಿಗಳು, ಹೂಡಿಕೆದಾರರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 25 ರಾಷ್ಟ್ರಗಳ ಭಾರತೀಯ ಸಂಜಾತರು ಹಾಗೂ ಅನಿವಾಸಿ ಭಾರತೀಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂಬುದು ಆಯೋಜಕರ ಲೆಕ್ಕಾಚಾರ.
ವ್ಯಾಪಾರ ವಹಿವಾಟಿನ ವಿಚಾರ ವಿನಿಮಯ, ಪ್ರಸಕ್ತ ಹೂಡಿಕೆಗೆ ಎಲ್ಲೆಲ್ಲಿ ಅವಕಾಶಗಳಿವೆ, ಸಮ್ಮೇಳನದ ರೂಪು-ರೇಷೆಗಳೇನು... ಮೊದಲಾದ ವಿಷಯಗಳಿಗೆ
ಮುಖಪುಟ / ಸಾಹಿತ್ಯ ಸೊಗಡು