ಕೆಸಿಎಯಲ್ಲಿ ಕನ್ನಡ ರಂಗಭೂಮಿಯ ರಥವೆಳೆದು ಖುಷಿ ಪಟ್ಟ ಕನ್ನಡಿಗರು
ಕಡಲಾಚೆಗೆ ಕನ್ನಡ ರಂಗ ಭೂಮಿಯ ಲಯವನ್ನು ಅನುರಣನಗೊಳಿಸಿದ ಕರ್ನಾಟಕ ಸಾಂಸ್ಕೃತಿಕ ಸಂಘದಲ್ಲಿ ಈಗ ಕೃತಜ್ಞತೆಯ ನಗೆ ಮುಗುಳು. ಫೆಬ್ರವರಿ 16ರಂದು ಸಂಭ್ರಮದ ನಾಟಕೋತ್ಸವ ಆಯೋಜಿಸಿದ ತೃಪ್ತಿ ಸಂಘದ್ದು.
ರಂಗ ಪರದೆ ಬಿದ್ದಿದೆ. ಈಗ ನಾಟಕ ಎಂಬ ಮಾಧ್ಯಮ ಬಂಡಿಯನ್ನು ವೇದಿಕೆಯ ಮೇಲೆ ಎಳೆದು ತಂದು ನಿಲ್ಲಿಸಲು ಸಹಕರಿಸಿದ ಕನ್ನಡಿಗರನ್ನು ನೆನಪಿಸಿಕೊಳ್ಳುವ ಸರದಿ. ನಾಟಕೋತ್ಸವ ಚಂದಾಗಲೂ ಕಾರಣರಾದ ಎಲ್ಲರನ್ನೂ ಕೆಸಿಎ ನೆನಪಿಸಿಕೊಳ್ಳುತ್ತದೆ.
ಜನರ ಎದೆಯಾಳವನ್ನು ತಲುಪಿ ಅವರ ಭಾವನೆಗಳಿಗೆ ಸ್ಪಂದಿಸಬಲ್ಲ ರಂಗಭೂಮಿಯ ಹಿರಿಮೆ ದೊಡ್ಡದು. ಒಂದು ಚಿತ್ರಕ್ಕೆ ಸಾವಿರ ಮಾತುಗಳನ್ನು ಹೇಳುವ ತಾಕತ್ತು ಇದ್ದರೆ, ಅಭಿವ್ಯಕ್ತಿಯನ್ನು ಒಳಗೊಂಡ ನಾಟಕವೊಂದು ಮಿಲಿಯಗಟ್ಟಲೆ ಸಂದೇಶಗಳನ್ನು ಸಾರಬಲ್ಲು ದು.
ಕೆಸಿಎಯ ನಾಟಕಾವಳಿಗೋಸ್ಕರ ದುಡಿದವರು ಹಲವರು. ಈ ಕಾಯಕದಲ್ಲಿ ನಾಯಕತ್ವ ವಹಿಸಿದವರ, ಪ್ರದರ್ಶಿತ ನಾಟಕಗಳ ಜವಾಬ್ದಾರಿ ಹೊತ್ತವರ ಪಟ್ಟಿಯೂ ಉದ್ದವಿದೆ. ಅವರಲ್ಲಿ ಕೆಲವರನ್ನು ಹೆಸರಿಸುವುದಾದರೆ :
-ಶರಣ ವೈಭವ ನಾಟಕದ ಡಾ. ಚಂದ್ರಶೇಖರ್ ಐತಾಳ್ ಮತ್ತು ಅವರ ತಂಡ. ಅಮೆರಿಕನ್ ಕನ್ನಡಿಗರಾದ ಭವಾನಿ ರಾವ್ ಮತ್ತು ಅವರ ಸ್ನೇಹಿತರು.
-ಹಾಲಿವುಡ್‌ನಲ್ಲಿ ಯಮ ನಾಟಕದ ವಲ್ಲೀಶ ಶಾಸ್ತ್ರಿ ಮತ್ತವರ ಗೆಳೆಯರು
-ಗಂಡ್ಸಲ್ವೇ ಗಂಡು ನಾಟಕದ ವಾಣಿ ಮಂಜುನಾಥ್ ಮತ್ತು ಅವರ ತಂಡ
- ಸಂಗ್ಯಾ ಬಾಳ್ಯಾದ ಡಾ. ಚಂದ್ರಶೇಖರ್ ಐತಾಳ್ ಮತ್ತು ಅವರ ಉತ್ಸಾಹೀ ಕಲಾವಿದ ಬಳಗ,
ಯಶಸ್ವಿ ಕಾರ್ಯಕ್ರಮ ನಿರ್ವಹಣೆ ನಡೆಸಿದ, ಜ್ಯೋತಿ ಐಯ್ಯಂಗಾರ್ ಮತ್ತು ರಸಪ್ರಶ್ನೆ ನಿರ್ವಹಿಸಿದ ಮಧು ಹೆಬ್ಬಾರ್, ವೇದಿಕೆಯಲ್ಲಿ ಉಲಿದವರ ದನಿಯನ್ನು ಸಭಿಕರಿಗೆ ತಲುಪಿಸಲು ಧ್ವನಿ ವರ್ಧಕ ವ್ಯವಸ್ಥೆ ಮಾಡಿದ ವಿಜಯ ರಾಘವನ್ ಮತ್ತು ಬಿಲ್ ಬೆರ್ಕುಟಾ ಅವರ ದುಡಿಮೆಯನ್ನು ಕೆಸಿಎ ನೆನೆಸಿಕೊಳ್ಳುತ್ತದೆ.
ಆಹಾರ ವ್ಯವಸ್ಥೆ ನೋಡಿಕೊಂಡ ವರು - ಪ್ರೇಮಾ ನಾಗರಾಜ್, ಅಮೃತಾ ಬಸವಪಟ್ನ, ವಸಂತ ರಾಜೇಶ್ವರಿ, ಹೇಮಾ, ಗಿರಿಜಾ ಸುಲೂರು, ಕೀರ್ತಿ ಐಯ್ಯಂಗಾರ್, ಜಯಂತಿ ರವಿಕುಮಾರ್, ಶಶಿ ನಂದಿ, ವಾಣಿ ಮಂಜುನಾಥ್, ರಾಮ ಸೂರ್ಯ ಪ್ರಕಾಶ್, ಮಾಲತಿ ರವೀಂದ್ರ.
ಕಾರ್ಯಕ್ರಮದ ಬೆನ್ನೆಲುಬಾಗಿ ನಿಂತ ಪ್ರಾಯೋಜಕರು- ಮೈಕ್ ಮಲ್ಲಪ್ಪ, ವಾಣಿ ಮಂಜುನಾಥ್, ಬಿ.ಎನ್. ನಾಗರಾಜ್, ಭವಾನಿ ರಾವ್, ವಸಂತ ಜಗನ್ನಾಥ್, ಪಿ.ಬಿ. ನಿರಸಿಂಹನ್, ರಾಜು ಬೆಂಗಳೂರು ಹಾಗೂ ನಾಟಕೋತ್ಸವದ ಸಂಯೋಜಕರಾದ ರಮೇಶ್ ಬಸವಪಟ್ನ . ಜೊತೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೆಲಸ ಮಾಡಿದ ಎಲ್ಲರಿಗೂ ಕೆಸಿಎ ಧನ್ಯವಾದಗಳನ್ನು ಅರ್ಪಿಸಿದೆ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications