ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬಿಎಂಎಸ್‌’ ಎನ್ನುವ ಪ್ರತಿಭೆಯ ಕಾರ್ಖಾನೆ!

By Staff
|
Google Oneindia Kannada News

*ಗುರುರಾಜ

ಧಾರವಾಡದ ಯಾವ ಭಾಗದಲ್ಲಿ ನಿಂತು ಕಲ್ಲೆಸೆದರೂ, ಆ ಕಲ್ಲು ಕವಿಯಾಬ್ಬನ ಮನೆಯ ಮೇಲೇ ಬೀಳುತ್ತದೆನ್ನುವ ಮಾತೀಗ ಹಳೆಯದು. ಅದೇ ರೀತಿ - ‘ಅಮೇರಿಕಾದಲ್ಲಿರುವ ಕನ್ನಡಿಗ ಇಂಜಿನಿಯರ್‌ಗಳಲ್ಲಿ ಯಾರನ್ನು ಗುರ್ತಿಸಿದರೂ ಅವರು ಬಿಎಂಎಸ್‌ ಕಾಲೇಜಿನವರಾಗಿರುತ್ತಾರೆ’ ಎಂದು ಹಳೆಯ ಮಾತನ್ನು ವರ್ತಮಾನಕ್ಕೆ ಬದಲಾಯಿಸಬಹುದು. ಅಮೇರಿಕದಲ್ಲಿರುವ ಕನ್ನಡಿಗ ಇಂಜಿನಿಯರ್‌ಗಳಲ್ಲಿ ಬಹು ಮಂದಿ ಬಿಎಂಎಸ್‌ ಕಾಲೇಜಿನ ಉತ್ಪನ್ನಗಳಾಗಿರುವುದರಿಂದ ಈ ಮಾತು ಹೆಚ್ಚು ಮೌಲಿಕವೂ ಹೌದು.

ಈ ಹೊತ್ತು ನಮ್ಮ ನಡುವಿರುವ ಹತ್ತಾರು ಪ್ರತಿಭಾವಂತರು ಬಿಎಂಎಸ್‌ ಕಾಲೇಜಿನ ಹೆಸರು ಹೇಳುವಾಗ ಅದರ ದೊಡ್ಡತನ, ಇತರ ಕಾಲೇಜುಗಳಿಗಿಂತ ಬೇರೆ ನಿಲ್ಲುವ ಅನನ್ಯತೆ ಅರ್ಥವಾಗುತ್ತದೆ. ದೇಶದ ಹೆಸರಾಂತ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾದ ಪ್ರೊ. ಎಚ್‌.ಆರ್‌.ವಿಶ್ವನಾಥ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಕೆ. ಎನ್‌. ಮೂರ್ತಿ, ವಿ. ಎಂ. ಕುಮಾರಸ್ವಾಮಿ ಬಿ.ಎನ್‌. ನಾಗರಾಜ್‌, ಬಿ. ಎ. ನಂಜಪ್ಪ , ಸಿ. ಎಂ. ಭೀಮ್‌ಸಿಂಹ, ವಿಜಯ್‌ಚಂದ್ರ ಮುಂತಾದವರೆಲ್ಲ ಬಿಎಂಎಸ್‌ನಲ್ಲಿ ಪಾಠ ಕಲಿತವರೇ.

ಬೆಂಗಳೂರಿನ ಬುಲ್‌ ಟೆಂಪಲ್‌ ರಸ್ತೆಯಲ್ಲಿರುವ ಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜು, ಕರ್ನಾಟಕದ ಅತ್ಯಂತ ಹಳೆಯ ಇಂಜಿನಿಯರಿಂಗ್‌ ಕಾಲೇಜುಗಳಲ್ಲೊಂದು. ಇತ್ತೀಚೆಗಷ್ಟೇ(1997) ಕಾಲೇಜು ಸ್ವರ್ಣ ಜಯಂತಿಯನ್ನು ಆಚರಿಸಿಕೊಂಡಿದೆ. ಬೆಂಗಳೂರು ವಿಶ್ವ ವಿದ್ಯಾಲಯದ ಮನ್ನಣೆ ಹೊಂದಿರುವ ಬಿಎಂಎಸ್‌ ಖಾಸಗಿ ಕಾಲೇಜಿಗೆ ಸರ್ಕಾರದ ಅನುದಾನವೂ ಉಂಟು.

‘ಬಿಎಂಎಸ್‌ಸಿಇಎಎ’ ಎಂಬ ಚದುರಿದವರ ಬೆಸೆಯುವ ಕೊಂಡಿ

ಬಿಎಂಎಸ್‌ ಕಾಲೇಜಿನಲ್ಲಿ ಓದಿ ಅಮೇರಿಕಾದಲ್ಲಿರುವ ಮಂದಿ ಅಲ್ಲೊಂದು ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ. 1996 ರಲ್ಲಿ ಅಸ್ತಿತ್ವಕ್ಕೆ ಬಂದ ಲಾಭರಹಿತ ‘ಬಿಎಂಎಸ್‌ ಕಾಲೇಜ್‌ ಆಫ್‌ ಅಲ್ಯೂಮ್ನಿ ಅಸೋಸಿಯೇಶನ್‌ (ಬಿಎಂಎಸ್‌ಸಿಇಎಎ)’ ಪ್ರಸ್ತುತ 1653 ಸದಸ್ಯರನ್ನು ಹೊಂದಿದೆ. ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು ಎಂ . ಕೃಷ್ಣಮೂರ್ತಿ. ಅವರ ಉತ್ಸಾಹ, ಶ್ರಮ ಮತ್ತು ಬಿಎಂಎಸ್‌ ಬಗೆಗಿನ ನಿಷ್ಕಲ್ಮಷ ಪ್ರೇಮ ಉಳಿದೆಲ್ಲ ಶಾಲೆ, ಕಾಲೇಜುಗಳ ಹಳೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಬೇಕು.

ಸಂಘದ ಪದಾಧಿಕಾರಿಗಳು :

ಕೆ. ಎನ್‌. ಮೂರ್ತಿ ( 818) 366 7683 ಅಧ್ಯಕ್ಷರು

ವಿ. ಎಂ. ಕುಮಾರಸ್ವಾಮಿ (949) 8578044 ಕಾರ್ಯದರ್ಶಿ ಮತ್ತು ಅಕ್ಕ ಟ್ರಸ್ಟಿ , ನಿರ್ದೇಶಕ

ಎಂ. ಕೃಷ್ಣಮೂರ್ತಿ (909) 899 4273 ಖಚಾಂಜಿ, ಅಕ್ಕದ ಖಚಾಂಜಿ


ಪರಸ್ಪರ ಸಂಪರ್ಕ ಬೆಳೆಸಿಕೊಳ್ಳುವುದು, ಚದುರಿಹೋದ ಗೆಳೆತನವನ್ನು ಬೆಸೆಯುವುದು ಸಂಘಟನೆಯ ಉದ್ದೇಶ. ಇಷ್ಟು ಮಾತ್ರವಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ (ಕನಿಷ್ಠ 15 ಮಂದಿಗೆ) ವಿದ್ಯಾರ್ಥಿ ವೇತನ ನೀಡುವಂಥಾ ಸಮಾಜಮುಖಿ ಕಾರ್ಯಕ್ರಮಗಳನ್ನೂ ಸಂಘಟನೆ ಹಮ್ಮಿಕೊಂಡಿದೆ. ಸದಸ್ಯತ್ವ ಬಯಸುವವರು ಸಂಪೂರ್ಣ ವಿವರಗಳೊಂದಿಗೆ ಗೌರಿಶಂಕರ್‌ ಅವರನ್ನು [email protected] ವಿಳಾಸದಲ್ಲಿ ಸಂಪರ್ಕಿಸಬಹುದು.

ಅಧ್ಯಯನಕ್ಕೆ ಎಷ್ಟೊಂದು ಅವಕಾಶಗಳು ! ಅವುಗಳೆಲ್ಲಾ ‘ಬಿಎಂಎಸ್‌’ ನಲ್ಲಿವೆ

ಹನ್ನೊಂದು ಇಂಜಿನಿಯರಿಂಗ್‌ ವಿಷಯಗಳಲ್ಲಿ ಸ್ನಾತಕ ಪದವಿಗೆ ಕಾಲೇಜು ಪ್ರವೇಶಾವಾಕಾಶ ಕಲ್ಪಿಸುತ್ತಿದೆ. ಆರ್ಕಿಟೆಕ್ಚರ್‌, ಸಿವಿಲ್‌, ಕಂಪ್ಯೂಟರ್‌ ಸೈನ್ಸ್‌ , ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌ , ಇಂಡಸ್ಟ್ರಿಯಲ್‌ ಅಂಡ್‌ ಪ್ರೊಡಕ್ಷನ್‌, ಇನ್‌ಫಾರ್ಮೇಶನ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ, ಇನ್‌ಸ್ಟ್ರುಮೆಂಟೇಶನ್‌, ಮೆಕ್ಯಾನಿಕಲ್‌, ಟೆಲಿ ಕಮ್ಯುನಿಕೇಷನ್‌ ಹಾಗೂ ಟ್ರಾನ್ಸ್‌ಪೋರ್ಟೇಶನ್‌ ಇಂಜಿನಿಯರಿಂಗ್‌ ವಿಷಯಗಳು ಬಿಎಂಎಸ್‌ನಲ್ಲಿ ಅಧ್ಯಯನಕ್ಕೆ ಲಭ್ಯ. ಅತ್ಯುತ್ತಮ ಗ್ರಂಥಾಲಯ, ಕಂಪ್ಯೂಟರ್‌ ಕೇಂದ್ರ ಹಾಗೂ ಹಾಸ್ಟೆಲ್‌ ಸೌಲಭ್ಯ ಇಲ್ಲುಂಟು.

ಎಂಸಿಎ, ಎಂಬಿಎ ಗಳ ಅಧ್ಯಯನಕ್ಕೂ ಅವಕಾಶ ಕಲ್ಪಿಸಿರುವ ಬಿಎಂಎಸ್‌, ಒಂದೂವರೆ ವರ್ಷಗಳ ಅವಧಿಯ ಪಿಜಿ ಪ್ರೋಗ್ರಾಂಗಳನ್ನೂ ವಿವಿಧ ವಿಷಯಗಳಲ್ಲಿ ಹಮ್ಮಿಕೊಂಡಿದೆ. ಹೆಚ್ಚಿನ ವಿಷಯಗಳನ್ನು ಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜು, ಪೋಸ್ಟ್‌ಬಾಕ್ಸ್‌ ನಂ 1908, ಬೆಂಗಳೂರು- 560019 ವಿಳಾಸವನ್ನು ಸಂಪರ್ಕಿಸಬಹುದು. ದೂರವಾಣಿ - (91)80-620-530, ಟೆಲೆಕ್ಸ್‌ - (91)80-845-2177.

ವಾರ್ತಾ ಸಂಚಯ
ಬಿಎಂಎಸ್‌ ಕಾಲೇಜಿನ ವಿಶ್ವನಾಥ್‌ ಮೇಷ್ಟ್ರು

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X