ತಿಂಗಳ ಮೇವಾಗಿ ಸಂಗೀತವನ್ನು ತಂದ ಭೂಮಿಕಾ
ಮೇರಿಲ್ಯಾಂಡ್ : ಪ್ರತಿ ತಿಂಗಳೂ ನಿಯಮಿತವಾಗಿ ಸಾಹಿತ್ಯ ಕಾರ್ಯಕ್ರಮ ನಡೆಸುವ ‘ಭೂಮಿಕಾ’ದ ಸಂಪ್ರದಾಯ ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ . ಸಹೃದಯರಿಗೆ ತಿಂಗಳ ಮೇವನ್ನು ಒದಗಿಸುವಲ್ಲಿ ಭೂಮಿಕಾ ಯಾವತ್ತು ಹಿಂದೆ ಬಿದ್ದಿದೆ ಹೇಳಿ?
ಈ ಬಾರಿ, ಜೂನ್ 10 ರ ಭಾನುವಾರ ಅಪರಾಹ್ನ 2 ಗಂಟೆಗೆ Bauer Community Center ನಲ್ಲಿ ತನ್ನ ತಿಂಗಳ ಸಾಹಿತ್ಯ ಕಾರ್ಯಕ್ರಮವನ್ನು ಭೂಮಿಕಾ ಹಮ್ಮಿಕೊಂಡಿದೆ. ವಿಷಯ - ‘ಸಂಗೀತ ಶಾಸ್ತ್ರದ ಸ್ಥೂಲ ಪರಿಚಯ’. ಬಿ. ನಾಗೇಂದ್ರ ಅವರು ವಿಷಯದ ಬಗ್ಗೆ ಮಾತನಾಡಲಿದ್ದಾರೆ.
‘ಸಂಗೀತ ಜಾಗತಿಕ ಸಂಪರ್ಕ ಭಾಷೆ’ ಎನ್ನುವ ವಿಷಯ ಸರ್ವ ವಿದಿತವಾದದ್ದು . ಸಂಗೀತದ ವಿಶಾಲ ಜಗತ್ತನ್ನು ಪರಿಚಯಿಸುವುದು ಹಾಗೂ ನಿಮಗಲ್ಲಿಗೆ ಪ್ರವೇಶವನ್ನು ದೊರಕಿಸುವುದು ನಾಗೇಂದ್ರರ ಉದ್ದೇಶ. ನೀವುಗಳೂ ಕೂಡ ಈ ರಸಯಾತ್ರೆಯಲ್ಲಿ ನಿಮ್ಮ ಹೊಳಹುಗಳನ್ನು ಹರಿಯಬಿಡಬಹುದು, ಹಂಚಿಕೊಳ್ಳಬಹುದು. ಒಟ್ಟಿನಲ್ಲಿ ಸಂಗೀತವೆಂಬ ವಿಜ್ಞಾನ- ಸಂಪರ್ಕ ಮಾಧ್ಯಮದ ಬಗ್ಗೆ ಆ ಹೊತ್ತು ಒಂದಷ್ಟು ಜ್ಞಾನ ಸಿಗುವಂತಾದರೆ ಕಾರ್ಯಕ್ರಮದ ಉದ್ದೇಶ ಸಾರ್ಥಕ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications