ಆಸ್ಟಿನ್‌ ಅಂಗಳದಲ್ಲಿ ಹೊಸ ವರ್ಷದ ಭಾವ ಲಹರಿ

ಆಸ್ಟಿನ್‌ : ಮಾವಿನ ಚಿಗುರೆಲೆಗಳ ಕಿತ್ತು ತರಲು ಅಣ್ಣ ತಂಗಿಯರ ನಡುವೆ ಭರದ ಸ್ಪರ್ಧೆ, ಮನೆ ಮುಂದೆ ಬಣ್ಣದ ರಂಗೋಲಿ ಬರೆಲು ಹುಡಿಗಳ ಜೋಡಣೆ. ಹೊಳೆಯುವ ಹಿತ್ತಾಳೆ ಹರಿವಾಣದ ಮೇಲೆ ಅರಿಶಿಣ ಕುಂಕುಮಗಳ ಭರಣಿಯ ಪಕ್ಕ ಬೇವು ಬೆಲ್ಲದ ಪುಟ್ಟ ರಾಶಿ . ಯುಗಾದಿ ತರುವ ಉಲ್ಲಾಸಕ್ಕೆ ನೂರೆಂಟು ಮುಖ.

ತವರಿನಲ್ಲಿ ಹೊಸಿಲಿಗಿಂತ ಎರಡೇ ಅಡಿ ಅಂತರದಲ್ಲಿ ಪುಟ್ಟದಾಗಿ ಬಿಡಿಸುತ್ತಿದ್ದ ರಂಗೋಲಿಯ ನೆನಪಿದೆಯೇ? ಬೆಳ್ಳಿ ಚುಕ್ಕೆಗಳ ಜೋಡಿಸುವ ಕೌಶಲ್ಯದಲ್ಲಿ ಅವಿತಿರುವ ಸಂಭ್ರಮವ ಮತ್ತೆ ಅನುಭವಿಸಲು ನಿಮಗೊಂದು ಅವಕಾಶ ಇಲ್ಲಿದೆ.

ಆಸ್ಟಿನ್‌ ಕನ್ನಡ ಸಂಘದವರು ಏಪ್ರಿಲ್‌ ಏಳರಂದು ಬರ್‌ಸಾನಾ ಧಾಮ್‌ನಲ್ಲಿ ಯುಗಾದಿ ಆಚರಿಸಲು ನಿರ್ಧರಿಸಿದ್ದಾರೆ. ರಂಗೋಲಿ ಸ್ಪರ್ಧೆ, ಮನರಂಜನಾ ಕಾರ್ಯಕ್ರಮಗಳು, ಸೋಷಿಯಲ್‌ ಅವರ್‌, ಮತ್ತೆ ರಾತ್ರಿ ಸಹ ಭೋಜನದ ಆತಿಥ್ಯವೂ ಇದೆ. ಹೊಸ ಸೀರೆ, ದಿರಿಸು ತೊಟ್ಟು ಜೊತೆಯಾಗುತ್ತೀರಲ್ಲ !

ಸಾಲು ರಂಗೋಲಿಗಳ ಬಣ್ಣ ಬಣ್ಣದ ಚಿತ್ತಾರ

ನೀವೂ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುತ್ತೀರಾ ? ಬರೇ ಹುಡಿ, ಚುಕ್ಕಿಗಳಲ್ಲಿ ರಂಗೋಲಿ ಹಾಕುವುದು ಕಷ್ಟವೆನಿಸಿದರೆ ಚಾಕ್‌ಪೀಸ್‌ನಲ್ಲಿ ಬಿಡಿಸಬಹುದು. ರಂಗೋಲಿಗೆ ಬೇಕಾದ ಸಾಮಾಗ್ರಿಗಳೆಲ್ಲವನ್ನೂ ನೀವೇ ತರಬೇಕು. ಮೂರುಗಂಟೆಗೆ ಸ್ಪರ್ಧೆ ಆರಂಭವಾಗುತ್ತದೆ. ಹತ್ತು ನಿಮಿಷ ಮುಂಚೆ ಬಂದು ರಿಲ್ಯಾಕ್ಸ್‌ ಮಾಡಿಕೊಳ್ಳಿ. ಬಹುಮಾನ ಪಕ್ಕಕ್ಕಿರಲಿ. ತುಂಬಿದ ಸಾಲು ರಂಗೋಲಿಗಳ ಬಣ್ಣ ಬಣ್ಣದ ಚಿತ್ತಾರದಲ್ಲಿ ನಿಮ್ಮ ಕೌಶಲ್ಯವಿದ್ದರೆ ಎಷ್ಟು ಚೆನ್ನ ಅಲ್ವೇ? ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದಾದರೆ ನೀವು ನಾಲ್ಕೂವರೆಗೆ ಬಂದರೆ ಸಾಕು.

ಸ್ಪರ್ಧೆಯ ಬಗ್ಗೆಯಾಗಲೀ, ಕಾರ್ಯಕ್ರಮದ ಬಗ್ಗೆಯಾಗಲೀ ಇನ್ನಷ್ಟು ತಿಳಿದುಕೊಳ್ಳಬೇಕಿದ್ದರೆ ಕನ್ನಡ ಸಂಘಕ್ಕೆ ಇ- ಮೇಯ್ಲ್‌ ಮಾಡಬಹುದು. ಕನ್ನಡ ಸಂಘದ ಸದಸ್ಯರಾಗಿದ್ದರೆ ಕಾರ್ಯಕ್ರಮಕ್ಕೆ ಹೋಗುವಾಗ ನಿಮ್ಮ ಅಪ್ಪ , ಅಮ್ಮ ಮತ್ತು ಕುಟುಂಬ ಸಮೇತ ಆರು ಡಾಲರ್‌ನ ಟಿಕೇಟಿನೊಂದಿಗೆ ಒಳಗೆ ಅಡಿಯಿಡಬಹುದು. ಇಲ್ಲವಾದಲ್ಲಿ ಒಬ್ಬರಿಗೆ 9 ಡಾಲರ್‌ ಟಿಕೇಟು. ಐದರಿಂದ ಹನ್ನೆರಡು ವರ್ಷದೊಳಗಿನ ಮಕ್ಕಳಿಗೆ 3 ಡಾಲರ್‌ನ ಟಿಕೇಟು. ಯುಗಾದಿ ಉಲ್ಲಾಸ ಹಂಚಿಕೊಳ್ಳಲು ಸ್ನೇಹಿತರು ನಿಮಗಾಗಿ ಬರ್‌ಸಾನಾ ಧಾಮದಲ್ಲಿ ಕಾಯುತ್ತಿದ್ದಾರೆ. ದಾರಿ ಹೀಗಿದೆ.

Directions:
From I-35 South
Take the Slaughter Lane exit (Exit 227) and go right (west). After 8 miles, Slaughter Lane will end in a "T" intersection at FM 1826 (also called Camp Ben McCulloch Rd). Turn left (south) on FM 1826. After 6 miles you will see a large sign for Barsana Dham. The main entrance is 1/4 mile further ahead on the left. Turn left through the gates and follow signs to the Temple.

From Mopac/Loop 1 South
Follow Mopac/Loop 1 South until it turns into 45 West. Continue on 45 West until it ends at a flashing red light on FM 1826. Turn left onto FM 1826 and drive 4 miles until you see a large sign for Barsana Dham on the left. The main entrance is 1/4 mile further ahead. Turn left through the gates and follow signs to the temple.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು / ಯುಗಾದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+