Yelburga Elections: ಯಲಬುರ್ಗಾದಲ್ಲಿ ಬಸವರಾಜ ರಾಯರೆಡ್ಡಿ ವರ್ಸಸ್ ಹಾಲಪ್ಪ ಆಚಾರ್! ಮತ್ತೊಮ್ಮೆ ಉಲ್ಟಾ ಆಗುತ್ತಾ ಫಲಿತಾಂಶ?
ಯಲಬುರ್ಗಾ ವಿಧಾನಸಭಾ ಕ್ಷೇತ್ರ, ಕೊಪ್ಪಳ ಜಿಲ್ಲೆಯ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಯಲಬುರ್ಗಾ ತಾಲೂಕು ಹಾಗೂ ನೂತನವಾಗಿ ರಚನೆಯಾಗಿರುವ ಕುಕನೂರು ತಾಲೂಕುಗಳನ್ನು ಹೊಂದಿದೆ. ಮಳೆಯಾಧಾರಿತ ಕೃಷಿ ಭೂಮಿಯೇ ಈ ಕ್ಷೇತ್ರದಲ್ಲಿ ಹೆಚ್ಚು, ಆದ್ದರಿಂದಲೇ ಪ್ರತಿ ಚುನಾವಣೆ ಬಂದಾಗಲೂ ಯಲಬುರ್ಗಾ ಕ್ಷೇತ್ರದಲ್ಲಿ ನೀರಾವರಿ ಯೋಜನೆಯೇ ಪ್ರಮುಖ ವಿಷಯವಾಗಿ ಕಾಣಿಸಿಕೊಳ್ಳುತ್ತದೆ.
ಕೃಷ್ಣಾ ಬಿ ಸ್ಕೀಂ ಮೂಲಕ ಕ್ಷೇತ್ರಕ್ಕೆ ಕೃಷ್ಣಾ ನದಿಯ ನೀರನ್ನು ತರುತ್ತೇವೆ ಎಂದು ಇಲ್ಲಿನ ಜನಪ್ರತಿನಿಧಿಗಳು ಆಶ್ವಾಸನೆ ನೀಡುತ್ತಲೇ ಬಂದಿದ್ದಾರೆ. ಆದರೆ, ಇದುವರೆಗೂ ಕೃಷ್ಣೆಯ ಒಂದು ಹನಿ ನೀರು ಕೂಡ ಯಲಬುರ್ಗಾ ಕ್ಷೇತ್ರದ ನೆಲದ ಮೇಲೆ ಬಿದ್ದಿಲ್ಲ. ಕೊಪ್ಪಳ ಏತ ನೀರಾವರಿ ಯೋಜನೆ ಕೂಡ ಇಲ್ಲಿಯ ಜನರಿಗೆ ಪ್ರಮುಖವಾಗಿದ್ದು, ಕಾಮಗಾರಿ ಕುಂಠುತ್ತಾ ಸಾಗಿದೆ. ಮಳೆಯಾಶ್ರಿತ ಕೃಷಿಯನ್ನು ಅವಲಂಬಿಸಿರುವ ಇಲ್ಲಿನ ಜನ ಜೋಳ, ಮೆಕ್ಕೆಜೋಳ, ಶೇಂಗಾ, ಕಡಲೆ, ಹೆಸರು, ಉದ್ದು, ಈರುಳ್ಳಿಯನ್ನು ಪ್ರಮುಖವಾಗಿ ಬೆಳೆಯುತ್ತಾರೆ.

ದೇವಾಲಯಗಳ ಚಕ್ರವರ್ತಿ ಇಟಗಿಯ ಮಹಾದೇವ ದೇವಾಲಯ, ಕುಕನೂರಿನಲ್ಲಿರುವ ಮಹಾಮಾಯ ದೇವಾಲಯ, ಐತಿಹಾಸಿಕ ಕಲ್ಲೂರಿನ ಕಲ್ಲಿನಾಥೇಶ್ವರ ದೇಗುಲಗಳು ಯಲಬುರ್ಗಾ ಕ್ಷೇತ್ರದಲ್ಲಿವೆ. ಲಿಂಗಾಯತ ಗಾಣಿಗ, ಪಂಚಮಸಾಲಿ ಸಮುದಾಯದ ಮತದಾರರೇ ಹೆಚ್ಚಿರುವ ಕ್ಷೇತ್ರ ಇದು. ಆದರೆ, ಕುರುಬ ಸಮುದಾಯದ ಮತಗಳೇ ಇಲ್ಲಿ ಗೆಲುವಿಗೆ ನಿರ್ಣಾಯಕವಾಗಿದ್ದು, ಇಲ್ಲಿ ಇದುವರೆಗೂ ಗೆಲುವು ಕಂಡವರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ಇಲ್ಲಿ ಪೈಪೋಟಿ ಇದೆ.
ಕ್ಷೇತ್ರದ ರಾಜಕೀಯ ಹಿನ್ನೆಲೆ!
ಯಲಬುರ್ಗಾ ಕ್ಷೇತ್ರದಲ್ಲಿ ಸದ್ಯ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ಸಚಿವ ಹಾಲಪ್ಪ ಆಚಾರ್ ನಡುವೆಯೇ ಫೈಟ್ ಇದೆ. ಈ ಮೊದಲು ಬಸವರಾಜ ರಾಯರೆಡ್ಡಿ ಮತ್ತು ಹಾಲಪ್ಪ ಆಚಾರ್ ಕಾಂಗ್ರೆಸ್‌ನಲ್ಲಿಯೇ ಇದ್ದರು. ಆದರೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಹಾಲಪ್ಪ ಆಚಾರ್ ವಿಧಾನ ಪರಿಷತ್ ಸದಸ್ಯರಾಗಿ, 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ. 1999ರಲ್ಲಿ ಹಾಲಪ್ಪ ಆಚಾರ್ ಜೆಡಿಯುನಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಶಿವಶರಣಪ್ಪ ಗೌಡ ಪಾಟೀಲ್ ಎದುರು ಸೋಲು ಅನುಭವಿಸಿದ್ದರು. 2004ರಲ್ಲಿ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಅವರು ಬಿಜೆಪಿಯ ಈಶಣ್ಣ ಗುಳಗಣ್ಣವರ್ ಎದುರು ಗೆದ್ದು ಬೀಗಿದರೆ, 2008ರಲ್ಲಿ ಫಲಿತಾಂಶ ವ್ಯತಿರಿಕ್ತವಾಗಿ ಬಿಜೆಪಿಯ ಈಶಣ್ಣ ಗುಳಗಣ್ಣವರ್ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಎದುರು ಗೆದ್ದರು.

2013ರಲ್ಲಿ ಬಿಜೆಪಿಯಿಂದ ಹಾಲಪ್ಪ ಆಚಾರ್ ಸ್ಪರ್ಧಿಸಿ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ವಿರುದ್ಧ ಸೋಲು ಅನುಭವಿಸಿದರು. ಆದರೆ, 2018ರಲ್ಲಿ ಮತ್ತೆ ಫಲಿತಾಂಶ ಉಲ್ಟಾ ಆಗಿ 5 ಬಾರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಹಾಲಪ್ಪ ಆಚಾರ್ ಸೋಲಿಸಿದರು. ಈ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಹಾಲಪ್ಪ ಆಚಾರ್ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಹಾಲಪ್ಪ ಆಚಾರ್ 79,072 ಮತ ಪಡೆದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಸವರಾಜ ರಾಯರೆಡ್ಡಿ 65,754 ಮತಗಳನ್ನು ಪಡೆಯುತ್ತಾರೆ. ಈ ಮೂಲಕ 14 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಹಾಲಪ್ಪ ಆಚಾರ್ ಇಲ್ಲಿ ಗೆಲ್ಲುತ್ತಾರೆ.
YelburgaKarnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018td> | ಹಾಲಪ್ಪ ಬಸಪ್ಪ ಆಚಾರ್ (ಬಿಜೆಪಿ) | 79,072 | ಬಸವರಾಜ ರಾಯರೆಡ್ಡಿ (ಕಾಂಗ್ರೆಸ್) | 65,754 |
| 2013 | ಬಸವರಾಜ್ ರಾಯರೆಡ್ಡಿ (ಕಾಂಗ್ರೆಸ್) | 52,388 | ಹಾಲಪ್ಪ ಬಸಪ್ಪ ಆಚಾರ್(ಬಿಜೆಪಿ ) | 35,488 |
| 2008 | ಈಶಣ್ಣ ಗುಲಗಣ್ಣವರ್ (ಬಿಜೆಪಿ ) | 59,562 | ಬಸವರಾಜ್ ರಾಯರೆಡ್ಡಿ ( ಕಾಂಗ್ರೆಸ್ ) | 29,781 |
ಆಕಾಂಕ್ಷಿಗಳು ಯಾರಾರು?
ಯಲಬುರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಸವರಾಜ ರಾಯರೆಡ್ಡಿ ಅವರಿಗೆ ಟಿಕೆಟ್ ಸಿಕ್ಕಿದ್ದು, ಬಿಜೆಪಿಯಿಂದ ಹಾಲಿ ಶಾಸಕ ಹಾಲಪ್ಪ ಆಚಾರ್ ಮತ್ತೊಮ್ಮೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಹಾಲಿ ಸಚಿವರು ಕೂಡ ಆಗಿರುವ ಹಾಲಪ್ಪ ಆಚಾರ್‌ಗೆ ಬಿಜೆಪಿ ಟಿಕೆಟ್ ಬಹುತೇಕ ಫೈನಲ್ ಎನ್ನಲಾಗಿದೆ. ಆದರೂ ಮಾಜಿ ಶಾಸಕ ಈಶಣ್ಣ ಗುಳಗಣ್ಣನವರ ಪುತ್ರ ನವೀನ್ ಗುಳಗಣ್ಣನವರ ಹಾಗೂ ಚಿದಾನಂದ ಸವದಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಜಾತಿ ಲೆಕ್ಕಾಚಾರ!
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಗಾಣಿಗ, ಪಂಚಮಸಾಲಿ ಸಮುದಾಯದ ಮತದಾರರೇ ಅಧಿಕ. ಆದರೆ, ಕುರುಬ ಸಮುದಾಯದ ಮತಗಳೇ ಇಲ್ಲಿ ಗೆಲುವಿಗೆ ನಿರ್ಣಾಯಕವಾಗಿವೆ. ಇಲ್ಲಿಯವರೆಗೂ ಇಲ್ಲಿ ಆಯ್ಕೆಯಾದವರೆಲ್ಲಾ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸದ್ಯ ಹಣಾಹಣಿ ಇರುವ ಬಸವರಾಜ ರಾಯರೆಡ್ಡಿ ಹಾಗೂ ಹಾಲಪ್ಪ ಆಚಾರ್ ಇಬ್ಬರೂ ಕೂಡ ರೆಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಲಿಂಗಾಯತರು 80,000ದಷ್ಟು ಮತಗಳನ್ನು ಹೊಂದಿದ್ದರೆ, ಕುರುಬರು 35,000 ಮತಗಳನ್ನು ಹೊಂದಿದ್ದಾರೆ. ಎಸ್‌ಸಿ 30,000, ಮುಸ್ಲಿಂ 18,000, ಎಸ್‌ಟಿ 15,000 ಹಾಗೂ ಇತರೆ ಸಮುದಾಯಗಳು 40,000 ಮತದಾರರನ್ನು ಹೊಂದಿವೆ.
-
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Vijay Thalapathi: ಟಿವಿಕೆ ಸಂಸ್ಥಾಪಕ, ನಟ ವಿಜಯ್ ದಳಪತಿ ವಿರುದ್ಧ ಪ್ರಕರಣ ದಾಖಲು -
Thalapathy Vijay Assets: ನಾಮಪತ್ರ ಸಲ್ಲಿಸಿದ ವಿಜಯ್, ಇವರ ಒಟ್ಟು ಆಸ್ತಿ ಎಷ್ಟು? ಇಲ್ಲಿದೆ ಮಾಹಿತಿ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ












Click it and Unblock the Notifications