Get Updates
Get notified of breaking news, exclusive insights, and must-see stories!

Yadgir: ಯಾದಗಿರಿಯಲ್ಲಿ ಪ್ರೀತ್ಸೆ ಎಂದು ಹಿಂದೆ ಬಿದ್ದು ಆಸ್ತಿ ಮಾರಿ ಅಂಕಲ್ ಎಸ್ಕೇಪ್

ಯಾದಗಿರಿ ಮಾರ್ಚ್ 21: ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದು ಒಂಟಿ ಆಂಟಿಯ ಆಸ್ತಿ ಮಾರಿ ತಿಂದು ಅಂಕಲ್‌ ಒಬ್ಬ ಪರಾರಿಯಾದ ಘಟನೆ ಯಾದಗಿರಿಯ ಬಸವಂತಪುರದಲ್ಲಿ ನಡೆದಿದೆ. ಘಟನೆ ಬಳಿಕ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ನ್ಯಾಯಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ.

ಹೌದು... ಇತ್ತೀಚಿಗೆ ಒಂಟಿಯಾಗಿರುವ ಮಹಿಳೆಯರಿಗೆ ಮೋಸ ಮಾಡುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಒಂಟಿ ಮಹಿಳೆಯರಿಗೆ ಮೋಸ ಮಾಡಿ ಹಣ ಪಡೆದು, ಮದುವೆಯಾಗುವ ಭರವಸೆ ನೀಡಿ ಎಸ್ಕೇಪ್ ಆಗುವ ಮೋಸಗಾರರ ಸಂಖ್ಯೆ ಹೆಚ್ಚಾಗುತ್ತಿದೆ.

Womans property sold and cheated in Yadgir

ಗಂಡನನ್ನು ಕಳೆದುಕೊಂಡು ಒಂಟಿಯಾಗಿದ್ದ ಮಹಿಳೆಗೆ ಲವ್ ಆಸೆ ಹುಟ್ಟಿಸಿ ಆಕೆಯೊಂದಿಗೆ ಸಂಬಂಧ ಬೇಳಸಿದ ವ್ಯಕ್ತಿಯೊಬ್ಬ ಹಣದ ವಂಚನೆ ಮಾಡಿ ಪರಾರಿಯಾಗಿದ್ದಾನೆ. ಇದರಿಂದಾಗಿ ಮಹಿಳೆಯ ಬದುಕು ಬೀದಿಗೆ ಬಿದ್ದಿದೆ. ಗಂಡನಾಗಿ ಇರ್ತೀನಿ ಎಂದು ಹೇಳಿ ನಂಬಿಸಿ ಎಲ್ಲವನ್ನೂ ದೋಚಿಕೊಂಡು ಹೋಗಿದ್ದಾನೆ ಎಂದು ನೊಂದ ಮಹಿಳೆ ದೂರಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಬಸವಂತಪುರದ ಸುವರ್ಣ ಗಂಡನನ್ನು ಕಳೆದುಕೊಂಡು ಒಂಟಿ ಜೀವನ ನಡೆಸುತ್ತಿದ್ದಳು. ತಾನಾಯ್ತು ತನ್ನ ಪಾಡಾಯ್ತು ಅಂತಿದ್ದವಳು ತಮ್ಮೂರಿನ ಸಮೀಪದ ಮಠಕ್ಕೆ ಬಂದು ಹೋಗುತ್ತಿದ್ದಳು. ಅಲ್ಲಿಯ ಸ್ವಾಮೀಜಿ ಬಳಿ ತನ್ನೆಲ್ಲಾ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಳು. ಸುವರ್ಣಳ ಕಷ್ಟಗಳೆಲ್ಲವೂ ಅದೇಗೋ ಮಾಳಪ್ಪ ಎಂಬ ವ್ಯಕ್ತಿಯ ಕಿವಿಗೆ ಬಿದ್ದಿದೆ.

ಹೀಗೆ ಮಾಳಪ್ಪ ಸುವರ್ಣ ಕಷ್ಟ ಕೇಳಿ ಆಕೆಯ ನಂಬರ್ ತೆಗೆದುಕೊಂಡು ಸಾಂತ್ವಾನ ಹೇಳಲು ಶುರು ಮಾಡಿದ್ದನು. ದಿನಗಳು ಉರುಳುತ್ತಿದ್ದಂತೆ ಇಬ್ಬರ ನಡುವೆ ಅನ್ಯೂನ್ಯತೆ ಬೆಳೆದುಕೊಂಡಿದೆ. ಮಾಳಪ್ಪ ಆಗಾಗ ಸುವರ್ಣ ಮನೆಗೂ ಬಂದು ಹೋಗುತ್ತಿದ್ದನು. ಯಾವಾಗ ಅಂಕಲ್ ಆಂಟಿ ಓಡಾಟ ಜೋರಾಯ್ತೋ ನಿನ್ನನ್ನೇ ಮದುವೆ ಆಗುತ್ತೇನೆ ಎಂದು ಪುಸಲಾಯಿಸಿದ್ದನು. ಈತನ ಪ್ರೇಮದ ಬಲೆಗೆ ಬಿದ್ದಿದ್ದ ಸುವರ್ಣ ಎಲ್ಲದಕ್ಕೂ ತಲೆ ಅಲ್ಲಾಡಿಸಲು ಶುರು ಮಾಡಿದ್ದಳು.

ಹೀಗಾಗಿ ಸುವರ್ಣ ಹೆಸರಿನಲ್ಲಿ ಇದ್ದ್ ಆಸ್ತಿಯನ್ನೆಲ್ಲಾ ಮಾರಾಟ ಮಾಡಿ ಶಾಹಪುರದಲ್ಲಿ ಬಾಡಿಗೆ ಮನೆ ಮಾಡಿದ್ದನು. ಸ್ವಲ್ಪ ದಿನ ಇಲ್ಲೇ ಇರು ಯಾದಗಿರಿಯಲ್ಲಿ ಜಮೀನು ತೆಗೆದುಕೊಂಡು ಹೊಸ ಮನೆ ಕಟ್ಟಿಸೋಣ ಎಂದಿದ್ದನಂತೆ. ಯಾವಾಗ ಹಣ ಕೈಗೆ ಬಂತೋ ಆಂಟಿಗೆ ಕೈಕೊಟ್ಟು ಮಾಳಪ್ಪ ಪರಾರಿಯಾಗಿದ್ದಾನೆ.

ಇನ್ನೂ ಈ ಬಗ್ಗೆ ಪೊಲಿಸ್ ಠಾಣೆಗೆ ದೂರು ನೀಡಿದರೂ ಕೂಡ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ನೊಂದ ಮಹಿಳೆ ಸುವರ್ಣ ದೂರಿದ್ದಾಳೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಇಲ್ಲ ಸಾಯಲು ಬಿಡಿ ಎಂದು ಎಸ್‌ಪಿ ಕಚೇರಿ ಮುಂದೆ ಸುವರ್ಣ ಕಣ್ಣೀರು ಇಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ನೊಂದ ಮಹಿಳೆ ಸುವರ್ಣ, 'ಮಾಳಪ್ಪನಿಗೆ ತುಂಬಾ ಜನ ಮಹಿಳೆಯರು ಇದ್ದಾರೆ. ನಾನು ನಂಬಿ ಮೋಸ ಹೋದೆ. ಮುಂದೆ ಯಾರೂ ಕೂಡ ನಂಬಿ ಮೋಸ ಹೋಗಬಾರದು. ಆತ ಮಹಿಳೆಯರ ಹಿಂದೆ ಬಿದ್ದ ಕಾಮುಕ. ಆತನಿಗೆ ಇನ್ನೆಷ್ಟು ಮಹಿಳೆಯರು ಮೋಸ ಹೋಗ್ತಾರೋ ಗೊತ್ತಿಲ್ಲ. ಆತನಿಗೆ ಕಠಿಣ ಶಿಕ್ಷೆ ಆಗಬೇಕು. ನನಗೆ ನ್ಯಾಯ ಸಿಗಬೇಕು' ಎಂದು ಸುವರ್ಣ ಪೊಲೀಸ್ ಠಾಣೆ ಮುಂದೆ ಕಣ್ಣೀರು ಹಾಕಿದ್ದಾರೆ.

ಒಟ್ಟಿನಲ್ಲಿ ಪ್ರೀತಿಯ ನಾಟಕ ಆಡಿದವ ವಿಧವೆ ಬದುಕಿಗೆ ಬೆಂಕಿ ಇಟ್ಟು ಹೋಗಿದ್ದಾನೆ. ಆಸ್ತಿ ಮನೆಯನ್ನೆಲ್ಲಾ ನುಂಗಿ ನೀರು ಕುಡಿದು ಅರ್ಧ ದಾರಿಯಲ್ಲಿ ಕೈ ಬಿಟ್ಟು ಹೋಗಿದ್ದಾನೆ. ಇಂತವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+