ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾದಗಿರಿ; ಕಾಡಿನ ನಡುವೆ ಗವಿಸಿದ್ದಲಿಂಗೇಶ್ವರನಿಗೆ ರಥೋತ್ಸವದ ರಂಗು

By ಯಾದಗಿರಿ ಪ್ರತಿನಿಧಿ
|
Google Oneindia Kannada News

ಯಾದಗಿರಿ, ಫೆಬ್ರವರಿ 11: ಜಿಲ್ಲೆಯ ಚಿಂತನಹಳ್ಳಿ, ಹಿಮಾಲಪುರ ತಾಂಡಾಗಳ ನಡುವೆ ಕಾಡಿನ ಮಧ್ಯದಲ್ಲಿ ಇರುವ ಗವಿಸಿದ್ದಲಿಂಗೇಶ್ವರ ರಥೋತ್ಸವವು ಭಾನುವಾರ ರಾತ್ರಿ ಸಂಭ್ರಮದಿಂದ ನೆರವೇರಿತು. ದೇವಸ್ಥಾನ ಭಾನುವಾರ ಬೆಳಗ್ಗೆಯಿಂದಲೇ ಭಕ್ತರಿಂದ ತುಂಬಿ ತುಳುಕುತ್ತಿದ್ದು, ರಾತ್ರಿಯ ರಥೋತ್ಸವದವರೆಗೂ ಜನಜಂಗುಳಿ ತುಂಬಿಕೊಂಡಿತ್ತು.

ಜಾತ್ರೆಯ ಅಂಗವಾಗಿ ಬೆಳಿಗ್ಗೆ ಶಿವಶರಣ ಸಿದ್ದಲಿಂಗೇಶ್ವರರು ನೆಲೆಸಿದ್ದರೆಂದು ನಂಬಲಾದ ಗುಹೆಯಲ್ಲಿ ಸಿದ್ದಲಿಂಗೇಶ್ವರ ಪುತ್ಥಳಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಆರತಿಯನ್ನು ನೆರವೇರಿಸಲಾಯಿತು. ಚಿಂತನಹಳ್ಳಿಯಿಂದ ಪಲ್ಲಕ್ಕಿ ಹಾಗೂ ನಂದಿಕೋಲದ ಮೆರವಣಿಗೆಯ ಮೂಲಕ ಪುತ್ಥಳಿಯನ್ನು ದೇವಸ್ಥಾನಕ್ಕೆ ತಂದ ನಂತರ ಜಾತ್ರೆ ಆರಂಭವಾಯಿತು.

 ಬೆಟ್ಟದಪುರದಲ್ಲಿ ಸಂಭ್ರಮದಿಂದ ಜರುಗಿದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ ಬೆಟ್ಟದಪುರದಲ್ಲಿ ಸಂಭ್ರಮದಿಂದ ಜರುಗಿದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ

Gavi Siddalingeshwara Rathotsava At Chintanahalli

ಜಾತ್ರೆಯ ಸಂಭ್ರಮಕ್ಕೆ ಭಜನೆ, ಕೀರ್ತನೆ, ಪ್ರಸಾದ ವಿತರಣೆ, ವಿಶೇಷ ಪೂಜೆಗಳು, ರಥದ ಅಲಂಕಾರವೂ ಜೊತೆಯಾದವು. ಭಕ್ತರಿಗೆ ಸಿದ್ದಲಿಂಗೇಶ್ವರರ ದರ್ಶನಕ್ಕೆ ಅನುಕೂಲವಾಗುವಂತೆ ದೇವಸ್ಥಾನ ಮಂಡಳಿ ವ್ಯವಸ್ಥೆ ಕಲ್ಪಿಸಿತ್ತು.

English summary
Gavisiddalingeshwara rathotsava celebrated in the middle of the forest between the Chintanahalli and Himalapur tandas of yadagiri,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X