ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್‌ ಸುಪ್ರೀಂಕೋರ್ಟ್‌ನಿಂದ ಭಾರತೀಯ ಪ್ರಜೆ ಗಡಿಪಾರು ತಡೆ ಮನವಿ ತಿರಸ್ಕಾರ

|
Google Oneindia Kannada News

ವಾಷಿಂಗ್ಟನ್, ಮೇ 17: ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಲ್ಲಿಸಿದ್ದ ಅರ್ಜಿಯ ನಮೂನೆಯಲ್ಲಿ ಯುಎಸ್‌ ಪ್ರಜೆ ಎಂದು ನಮೂದಿಸಿದ ಬಾಕ್ಸ್ ಅನ್ನು ಭರ್ತಿ ಮಾಡಿದ್ದಕ್ಕಾಗಿ ಗಡಿಪಾರು ಶಿಕ್ಷೆಯನ್ನು ಎದುರಿಸುತ್ತಿರುವ ಭಾರತೀಯ ನಾಗರಿಕನ ವಿರುದ್ಧ ಕೆಳ ಹಂತದ ನ್ಯಾಯಾಲಯಗಳು ನೀಡಿದ್ದ ತೀರ್ಪನ್ನು ಯುಎಸ್‌ ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದ್ದು, ಗಡಿಪಾರು ತಡೆಗೆ ನಿರಾಕರಿಸಿದೆ.

ನ್ಯಾಯಾಲದ ದಾಖಲಾತಿಗಳ ಪ್ರಕಾರ ಪಂಕಜ್‌ ಕುಮಾರ್‌ ಪಟೇಲ್ ಎಂಬ ಭಾರತೀಯ ಮೂಲದ ವ್ಯಕ್ತಿ ತಮ್ಮ ಪತ್ನಿ ಜ್ಯೋತ್ಸ್ನಾಬೆನ್‌ ಜೊತೆ ಯುನೈಟೆಡ್‌ ಸ್ಟೇಟ್ಸ್‌ಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಅವರು 2007ರಲ್ಲಿ ಯುಎಸ್‌ ಪೌರತ್ವ ಮತ್ತು ವಲಸೆ ಸೇವೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ್ದರು.

ಆದರೆ ಯುಎಸ್‌ಸಿಐಎಸ್‌ (USCIS) ಪಟೇಲ್ ಶಾಶ್ವತ ನಿವಾಸಕ್ಕಾಗಿ (ಗ್ರೀನ್‌ ಕಾರ್ಡ್) ಸಲ್ಲಿಸಿದ್ದ ಹೊಂದಾಣಿಕೆಯ ಅರ್ಜಿಯನ್ನು ನಿರಾಕರಿಸಿತ್ತು. ಏಕೆಂದರೆ ಪಟೇಲ್ ಅವರು ಜಾರ್ಜಿಯಾ ರಾಜ್ಯದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಲ್ಲಿಸಿದ್ದ ಅರ್ಜಿಯಲ್ಲಿ ತಾನು ಯುಎಸ್ ಪ್ರಜೆ ಎಂದು ತಪ್ಪಾಗಿ ನಮೂದಿಸಿದ್ದರು.

US Supreme Court declines to stop deportation of Indian citizen

ಯುಎಸ್‌ಸಿಐಎಸ್‌ ಪೌರತ್ವ ನಿರಾಕರಿಸಿದ ನಂತರ ಯುಎಸ್‌ ಸರ್ಕಾರವು ಪಟೇಲ್ ಅವರನ್ನು ವರ್ಷಗಳ ನಂತರ ದೇಶದಿಂದ ಹೊರಹಾಕುವ ಪ್ರಕ್ರಿಯೆಗಳನ್ನು ಪ್ರಾರಂಭಿಸಿತು. ಆದರೆ ಪಟೇಲ್ ತಾವೂ ಫಾರ್ಮ್‌ ತುಂಬುವಾಗ ತಪ್ಪಾಗಿ ಯುಎಸ್‌ ನಾಗರಿಕ ಎನ್ನುವ ಬಾಕ್ಸ್‌ನ್ನು ಭರ್ತಿ ಮಾಡಿದ್ದೇನೆ . ಆದರೆ ನಾನು ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಇಮಿಗ್ರೇಷನ್‌ ನ್ಯಾಯಾಧೀಶರ ಮುಂದೆ ವಾದಿಸಿದ್ದರು.

ಆದರೆ ಅವರ ವಾದವನ್ನು ನ್ಯಾಯಾಧೀಶರು ಒಪ್ಪಲಿಲ್ಲ. ಇಲ್ಲಿ ಸೋಲು ಕಂಡ ಬಳಿಕ ಪಟೇಲ್ ಫೆಡರಲ್ ಅಪೀಲ್ಸ್‌ ಕೋರ್ಟ್‌ ಮೊರೆ ಹೋದರು. ಆದರೆ ಫೆಡರಲ್‌ ಕೋರ್ಟ್‌ ಈ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ, ಹೊಂದಿಲ್ಲ ಮತ್ತು ವಿವೇಚನಾ-ಪರಿಹಾರ ಪ್ರಕ್ರಿಯೆಯಲ್ಲಿ ಪತ್ತೆಯಾದ ಸತ್ಯಗಳನ್ನು ಪರಿಶೀಲಿಸಲು ಫೆಡರಲ್ ನ್ಯಾಯಾಲಯಗಳಿಗೆ ಕಾನೂನು ಅನುಮತಿಸುವುದಿಲ್ಲ ಎಂದು ತಿಳಿಸಿತ್ತು.

US Supreme Court declines to stop deportation of Indian citizen

ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ; ಇಮಿಗ್ರೇಷನ್‌ ಮತ್ತು ಫೆಡರಲ್‌ ಕೋರ್ಟ್‌ನಲ್ಲಿ ಸೋಲು ಕಂಡ ನಂತರ ಪಟೇಲ್ ಕಳೆದ ವರ್ಷ ಜನವರಿಯಲ್ಲಿ ಯುಎಸ್‌ ಸುಪ್ರೀಂ ಕೋರ್ಟ್‌ನಲ್ಲಿ ಗಡಿಪಾರು ತಡೆಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್‌ ಡಿಸೆಂಬರ್‌ನಲ್ಲಿ ಅರ್ಜಿ ವಿಚಾರಣೆ ನಡೆಸಿತ್ತು. ಇದೀಗ ಸೋಮವಾರ ತೀರ್ಪು ನೀಡಿದ್ದು, ಕೆಳ ನ್ಯಾಯಾಲಯಗಳ ತೀರ್ಪನ್ನು ಎತ್ತಿ ಹಿಡಿದಿದೆ.

ಟ್ರಂಪ್‌ ಕಾಲದಲ್ಲಿ ನೇಮಿತವಾಗಿರುವ ಹೊಸ ಜಡ್ಜ್‌ ಆಮಿ ಬ್ಯಾರೆಟ್‌, ಪೌರತ್ವ ನಿರಾಕರಣೆ ಮತ್ತು ದೇಶದಿಂದ ಹೊರ ಹಾಕುವ ಪ್ರಕ್ರಿಯೆಯಲ್ಲಿ ಫೆಡರಲ್ ನ್ಯಾಯಾಲಯಗಳು ಬಹಳ ಸೀಮಿತ ಪಾತ್ರವನ್ನು ಹೊಂದಿವೆ. ಕಾನೂನು ಮತ್ತು ಸಾಂವಿಧಾನಿಕ ಪ್ರಶ್ನೆಗಳನ್ನು ಹೊರತುಪಡಿಸಿ, ದೇಶದಿಂದ ಹೊರಹಾಕುವ ಅಟಾರ್ನಿ ಜನರಲ್ ನಿರ್ಧಾರಗಳ ತೀರ್ಪನ್ನು ಪರಿಶೀಲನೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ಆದರೆ ಗಡಿಪಾರು ಮಾಡುವಿಕೆಯಿಂದ ಪರಿಹಾರವನ್ನು ನೀಡುವ ಅಧಿಕಾರವನ್ನು ಅಟಾರ್ನಿ ಜನರಲ್‌ಗೆ ನೀಡಿದೆ ಎಂದು ತಿಳಿಸಿದ್ದಾರೆ.

ಸೋಮವಾರ ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಕರಣವನ್ನು ತರಲಾಗಿತ್ತು. ಹೊಸ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್‌ ಗೆ ಬಿಡೆನ್ ಆಡಳಿತವು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲಿದೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ಇದು ನ್ಯಾಯಾಂಗ ಇಲಾಖೆಯು ನಿರ್ಧರಿಸುವ ವಿಷಯವಾಗಿದೆ ಎಂದಷ್ಟೇ ಹೇಳಿದ್ದಾರೆ.

ನ್ಯಾಯಾಲಯದ ದಾಖಲಾತಿ ಪ್ರಕಾರ ಪಟೇಲ್ 3 ಗಂಡು ಮಕ್ಕಳನ್ನು ಹೊಂದಿದ್ದಾರೆ. ಅವರಲ್ಲಿ ಒಬ್ಬರು ಯುಎಸ್‌ ಪೌರತ್ವವನ್ನು ಪಡೆದುಕೊಂಡಿದ್ದಾರೆ. ಮತ್ತಿಬ್ಬರು ಯುಎಸ್‌ ಪ್ರೆಜೆಗಳನ್ನು ವಿವಾಹವಾಗಿರುವುದರಿಂದ ಕಾನೂನುಬದ್ದ ನಿವಾಸಿಗಳಾಗಿದ್ದಾರೆ.

English summary
The United States supreme court on Monday ruled 5-4 against an Indian citizen who faces deportation from the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X