ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲಾ ಹ್ಯಾರಿಸ್‌ಗಿಂತಲೂ ಹೆಚ್ಚು ಭಾರತೀಯರು ನನ್ನ ಬೆಂಬಲಕ್ಕಿದ್ದಾರೆ: ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 15: ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಜೋ ಬಿಡೆನ್ ಮತ್ತು ಅವರ ಉಪಾಧ್ಯಕ್ಷ ಸ್ಥಾನದ ನಾಮನಿರ್ದೇಶಿತ ಅಭ್ಯರ್ಥಿ ಕಮಲಾ ಹ್ಯಾರಿಸ್ ವಿರುದ್ಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಡೆನ್ ಅಧ್ಯಕ್ಷರಾದರೆ ಅಮೆರಿಕದಲ್ಲಿ ಯಾರೊಬ್ಬರೂ ಸುರಕ್ಷಿತರಾಗಿರಲು ಸಾಧ್ಯವಾಗುವುದಿಲ್ಲ. ಹಾಗೆಯೇ ಕ್ಯಾಲಿಫೋರ್ನಿಯಾದ ಸೆನೆಟರ್ ಆಗಿರುವ ಕಮಲಾ ಹ್ಯಾರಿಸ್ ಅವರ ಆಡಳಿತವಂತೂ ತೀರಾ ಕಳಪೆಯಾಗಿರಲಿದೆ ಎಂದು ಟೀಕಿಸಿದ್ದಾರೆ.

'ಒಂದು ವೇಳೆ ಬಿಡೆನ್ ಅಧ್ಯಕ್ಷರಾದರೆ ತಕ್ಷಣವೇ ಅಮೆರಿಕದಲ್ಲಿನ ಪ್ರತಿ ಪೊಲೀಸ್ ಇಲಾಖೆಯನ್ನೂ ದುರ್ಬಲಗೊಳಿಸುವ ಕಾನೂನನ್ನು ಜಾರಿಗೆ ತರುತ್ತಾರೆ. ಬಹುಶಃ ಕಮಲಾ ಹ್ಯಾರಿಸ್ ಇನ್ನೂ ಕಳಪೆ ಕೆಲಸಗಳನ್ನು ಮಾಡಬಹುದು. ಅವರಿಗೆ ಭಾರತದ ಪರಂಪರೆಯಿದೆ. ಆದರೆ ಆಕೆಗಿಂತಲೂ ಹೆಚ್ಚಿನ ಭಾರತೀಯ ಬೆಂಬಲ ನನಗಿದೆ' ಎಂದು ನ್ಯೂಯಾರ್ಕ್ ಪೊಲೀಸ್ ಬೆನೆವೊಲೆಂಟ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಹೇಳಿದರು.

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ನಾಮನಿರ್ದೇಶನ ಭಾರತಕ್ಕೆ ಎಷ್ಟು ಪ್ರಸ್ತುತ?ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ನಾಮನಿರ್ದೇಶನ ಭಾರತಕ್ಕೆ ಎಷ್ಟು ಪ್ರಸ್ತುತ?

ಕಮಲಾ ಹ್ಯಾರಿಸ್ ಪೊಲೀಸರೆಡೆಗೆ ಹಗೆತನದ ಭಾವ ಹೊಂದಿದ್ದಾರೆ ಎಂದು ಕಿಡಿಕಾರಿದ ಟ್ರಂಪ್, ಪೊಲೀಸರ ವಿರುದ್ಧದ ಎಡಪಂಥೀಯ ಸಮರದಲ್ಲಿ ಕಮಲಾ ಮತ್ತು ಜೋ ಬಿಡೆನ್ ನಡುವಿನಲ್ಲಿ ನಿಂತಿದ್ದಾರೆ ಎಂದು ಹೇಳಿದರು.

US Presidential Election: Donald Trump Said I Have More Indians Than Kamala Harris

'ನಿಮ್ಮ ಗೌರವ ಮತ್ತು ಘನತೆಯನ್ನು ಈ ವ್ಯಕ್ತಿ ಕಸಿದುಕೊಳ್ಳುತ್ತಿದ್ದಾನೆ. ಬಿಡೆನ್‌ರ ಅಮೆರಿಕದಲ್ಲಿ ಯಾರೊಬ್ಬರೂ ಸುರಕ್ಷಿತರಾಗಿರಲು ಸಾಧ್ಯವೇ ಇಲ್ಲ' ಎಂದು ಮಾಜಿ ಉಪಾಧ್ಯಕ್ಷ ಬಿಡೆನ್ ಅವರನ್ನು ಟೀಕಿಸಿದರು. 'ಜತೆಗೆ ನಾನು ನಿಮಗೆ ಹೇಳುತ್ತಿದ್ದೇನೆ, ನವೆಂಬರ್ 3 ನೀವು ಅದನ್ನು ಮರಳಿ ಪಡೆದುಕೊಳ್ಳುತ್ತೀರಿ' ಎಂದರು.

English summary
US President Donald Trump said, i have more Indians than Kamala Harris and no one will be safe in Joe Biden's america.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X