ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ಕೊರೊನಾ ಸೋಂಕು

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 02: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಖುದ್ದಾಗಿ ಡೊನಾಲ್ಡ್ ಟ್ರಂಪ್ ಅವರೇ ಟ್ವಿಟ್ಟರ್ ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮಿಬ್ಬರಿಗೂ ಕೊರೊನಾ ಸೋಂಕು ತಗುಲಿದೆ, ಇಬ್ಬರೂ ಒಟ್ಟಾಗಿ ರೋಗವನ್ನು ಎದುರಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಶುಕ್ರವಾರ ಸೋಂಕು ದೃಢಪಟ್ಟಿದೆ. ಅವರ ಆಪ್ತ ಸಹಾಯಕರಿಗೆ ಕೊರೊನಾ ಸೋಂಖು ತಗುಲಿದ್ದ ಕಾರಣ ಟ್ರಂಪ್ ಹಾಗೂ ಮೆನಾಲಿಯಾ ಟ್ರಂಪ್ ಕ್ವಾರಂಟೈನ್‌ಗೆ ಒಳಗಾಗುವುದಾಗಿ ತಿಳಿಸಿದ್ದರು. ಬಳಿಕ ಅವರನ್ನು ಪರೀಕ್ಷೆ ಮಾಡಲಾಗಿದ್ದು, ಇಬ್ಬರಿಗೂ ಪಾಸಿಟಿವ್ ಬಂದಿದೆ.

US President Trump, First Lady Melania Test Positive For Covid-19

ಟ್ರಂಪ್ ಆಪ್ತ ಸಹಾಯಕರು ಟ್ರಂಪ್ ಪರವಾಗಿ ಸಾಕಷ್ಟು ಚುನಾವಣಾ ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದರು, ಹಾಗೆಯೇ ಟ್ರಂಪ್ ಕೂಡ ಹಲವು ಕಡೆ ಪ್ರಚಾರಕ್ಕೆ ತೆರಳಿದ್ದರು.

ಹೆಲಿಕಾಪ್ಟರ್‌ನಲ್ಲಿ ಕೂಡ ಹಲವೆಡೆ ಪ್ರಯಾಣ ಬೆಳೆಸಿದ್ದರು. ಶ್ವೇತಭವನದ ಹಲವು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮೊದಲು ಕೊರೊನಾ ಲಸಿಕೆ ಸಿಗುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದರು, ಅಷ್ಟೇ ಅಲ್ಲದೆ ಲಸಿಕೆ ಕೊಳ್ಳಲು ಹಣವನ್ನೂ ಮೀಸಲಿಟ್ಟಿದ್ದರು.

https://kannada.oneindia.com/news/washington/moderna-s-coronavirus-vaccine-won-t-be-ready-before-us-elections-203369.html

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಒಳಗೆ ಮಾಡೆರ್ನಾ ಕೊರೊನಾ ಲಸಿಕೆ ಸಿದ್ಧವಾಗುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಮೆರಿಕ ಚುನಾವಣೆಗೂ ಮುನ್ನ ಮಾಡೆರ್ನಾ ಕೊರೊನಾ ಲಸಿಕೆ ಸಿದ್ಧವಾಗದುಅಮೆರಿಕ ಚುನಾವಣೆಗೂ ಮುನ್ನ ಮಾಡೆರ್ನಾ ಕೊರೊನಾ ಲಸಿಕೆ ಸಿದ್ಧವಾಗದು

ನವೆಂಬರ್ 25ರೊಳಗೆ ಮಾರ್ಡೆನಾ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಯುಎಸ್ ಬಯೋಟೆಕ್ ಫರ್ಮ್ ಮಾಡೆರ್ನಾ ತಿಳಿಸಿದೆ.

ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ಕೊರೊನಾ ಲಸಿಕೆ ದೊರೆತರೆ ತಮ್ಮ ಪ್ರಚಾರಕ್ಕೂ ಸಹಾಯವಾಗುತ್ತಿತ್ತು ಎಂದು ಡೊನಾಲ್ಡ್ ಟ್ರಂಪ್ ಬಯಸಿದ್ದರು. ಆದರೆ ಚುನಾವಣೆಗೂ ಮುನ್ನ ಲಸಿಕೆ ಸಿಗುವುದು ಕಷ್ಟ ಎಂದು ಮಾಡೆರ್ನಾ ಹೇಳಿದೆ.

Recommended Video

Gandhi Jayanthi ರಾಜ್ ಘಾಟ್‌ಗೆ ತೆರಳಿ ನಮಸ್ಕರಿಸಿದ ಪ್ರಧಾನಿ Modi | Oneindia Kannada

English summary
US President Donald Trump and first lady Melania Trump tested positive for coronavirus (Covid-19) disease on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X