MI Vs LSG: ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ಬೌಲರ್‌ಗಳ ಬೆಂಡೆತ್ತಿದ್ದ ನಿಕೋಲಸ್ ಪೂರನ್: ಎಂಐಗೆ 229 ರನ್‌ಗಳ ಗುರಿ
MI Vs LSG IPL 2026: ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ (ಮೇ 04) ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬರೋಬ್ಬರಿ 228 ರನ್‌ಗಳನ್ನು ಪೇರಿಸಿತು. ಈ ಮೂಲಕ ಎಂಐಗೆ 229 ರನ್‌ಗಳ ಗುರಿ ನೀಡಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಬೀಸಿದ ಲಕ್ನೋ ಸೂಪರ್ ಜೈಂಟ್ಸ್ ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 288 ರನ್‌ಗಳನ್ನು ಕಲೆಹಾಕಿತು.

ಚೊಚ್ಚಲ ಅರ್ಧಶತಕ ಸಿಡಿಸಿದ ಪೂರನ್
ನಿಕೋಲಸ್ ಪೂರನ್ ಈ ಸೀಸನ್‌ನ ತಮ್ಮ ಮೊದಲ ಅರ್ಧಶತಕವನ್ನು ಪೂರೈಸಿದ್ದಾರೆ. ಅವರು ಕೇವಲ 21 ಎಸೆತಗಳಲ್ಲಿ 1 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 63 ರನ್ ಚಚ್ಚುವ ಮೂಲಕ ಸಂಭ್ರಮಿಸಿದರು. ಇವರಿಗೆ ಸಾಥ್ ನೀಡಿದ ಮಿಚೆಲ್ ಮಾರ್ಷ್ 25 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸ್‌ಗಳೊಂದಿಗೆ 44 ರನ್ ಗಳಿಸಿದರು. ಇವರಿಬ್ಬರ ಜೋಡಿ ಲಕ್ನೋ ತಂಡಕ್ಕೆ 94 ರನ್‌ಗಳ ಮಹತ್ವದ ಜೊತೆಯಾಟವನ್ನು ಒದಗಿಸಿತು.
ಮಾರಕ ಬೌಲಿಂಗ್ ದಾಳಿ ಮಾಡಿದ ಕಾರ್ಬಿನ್ ಬಾಷ್
ಲಕ್ನೋ ತಂಡವು ಅತಿ ವೇಗವಾಗಿ ರನ್ ಕಲೆಹಾಕುತ್ತಿದ್ದ ಸಂದರ್ಭದಲ್ಲಿ ಮುಂಬೈ ಪರ ಬೌಲಿಂಗ್ ಮಾಡಿದ ಕಾರ್ಬಿನ್ ಬಾಷ್, ಕೇವಲ ಐದು ಎಸೆತಗಳ ಅಂತರದಲ್ಲಿ ನಿಕೋಲಸ್ ಪೂರನ್ ಮತ್ತು ಮಿಚೆಲ್ ಮಾರ್ಷ್ ಇಬ್ಬರನ್ನೂ ಔಟ್ ಮಾಡುವ ಮೂಲಕ ಮಿಂಚಿದರು. ಉಳಿದಂತೆ ಅಲ್ಲ ಘಜನ್ಫರ್, ವಿಲ್ ಜಾಕ್ಸ್ ಹಾಗೂ ರಘು ಶರ್ಮಾ ಒಂದು ವಿಕೆಟ್ ಪಡೆದರು.
ಎಲ್‌ಎಸ್‌ಜಿ ಪರ ಯಾರು ಎಷ್ಟು ರನ್ ಕಲೆಹಾಕಿದರು?
ಎಲ್‌ಎಸ್‌ಜಿ ಪರ ಬ್ಯಾಟ್ ಬೀಸಿದ ನಾಯಕ ರಿಷಬ್ ಪಂತ್ 15(10) ಏಡನ್ ಮಾರ್ಕ್ರಾಮ್ ಅಜೇಯ 31(25), ಹಿಮ್ಮತ್ ಸಿಂಗ್ ಅಜೇಯ 40(31) ರನ್‌ಗಳ ಕೊಡುಗೆ ನೀಡಿದರು. ಲಕ್ನೋ ಸೂಪರ್ ಜೈಂಟ್ಸ್ ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 228/5 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಈ ಮೂಲಕ ಮುಂಬೈ ಇಂಡಿಯನ್ಸ್‌ಗೆ ಗೆಲ್ಲಲು 229 ರನ್‌ಗಳ ಬೃಹತ್ ಗುರಿ ನೀಡಲಾಗಿದೆ. ವಾಂಖೆಡೆ ಮೈದಾನದಲ್ಲಿ ಈಗ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತು ರಿಯಾನ್ ರಿಕೆಲ್ಟನ್ ಮುಂಬೈ ಪರ ಇನ್ನಿಂಗ್ಸ್ ಆರಂಭಿಸಿದ್ದಾರೆ.












Click it and Unblock the Notifications