ಮೆಟ್ಟಿಲೇರುವಾಗ ಮೂರು ಬಾರಿ ಎಡವಿದ ಜೋ ಬೈಡನ್: ವಿಡಿಯೋ

ವಾಷಿಂಗ್ಟನ್, ಮಾರ್ಚ್ 20: ಅಟ್ಲಾಂಟಾಕ್ಕೆ ತೆರಳಲು ಏರ್ ಫೋರ್ಸ್ ಒನ್ ವಿಮಾನ ಏರುವ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮೆಟ್ಟಿಲಿನಲ್ಲಿ ಮೂರು ಬಾರಿ ಎಡವಿದ ಘಟನೆ ಶುಕ್ರವಾರ ನಡೆದಿದೆ. ಈ ವಾರದ ಆರಂಭದಲ್ಲಿ ಪಾರ್ಲರ್‌ವೊಂದರಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯ ಬಳಿಕ ಏಷ್ಯನ್-ಅಮೆರಿಕನ್ ಸಮುದಾಯವನ್ನು ಭೇಟಿ ಮಾಡುವುದು ಅವರ ಪ್ರವಾಸದ ಯೋಜನೆಯಲ್ಲಿತ್ತು.

ವಿಮಾನದ ಮೆಟ್ಟಿಲೇರುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ಮುಗ್ಗರಿಸುವುದು ವಿಡಿಯೋದಲ್ಲಿ ದಾಖಲಾಗಿದೆ. ತೀವ್ರವಾಗಿ ಬೀಸುತ್ತಿದ್ದ ಗಾಳಿಯ ನಡುವೆ ಆಯ ತಪ್ಪಿದ ಜೋ ಬೈಡನ್, ಆಸರೆಗಾಗಿ ಮೆಟ್ಟಿಲಿನ ಬದಿಯ ಕಂಬಿಗಳನ್ನು ಹಿಡಿದುಕೊಂಡಿದ್ದಾರೆ.

ಮೊದಲ ಬಾರಿ ಎಡವಿದಾಗ ಹೇಗೋ ಸಾವರಿಸಿಕೊಂಡು ಅವರು ಸಮತೋಲನ ಪಡೆದುಕೊಂಡಿದ್ದಾರೆ. ಆದರೆ ಮತ್ತೊಂದು ಹೆಜ್ಜೆ ಇರಿಸಿದಾಗ ಎರಡು ಬಾರಿ ಸತತವಾಗಿ ಮುಗ್ಗರಿಸಿದ್ದಾರೆ. ಅದೃಷ್ಟವಶಾತ್ ಮೆಟ್ಟಿಲಿನಿಂದ ಜಾರಿ ಅವಘಡ ಸಂಭವಿಸಿಲ್ಲ. ಮೂರನೇ ಬಾರಿ ಮುಗ್ಗರಿಸಿದಾಗ ಮೆಟ್ಟಿಲಿನ ಮೇಲೆ ಬೀಳುವಂತಾಗಿತ್ತು. ಆಗಲೂ ನಿಯಂತ್ರಣ ಸಾಧಿಸಿಕೊಂಡು ಎದ್ದು ನಿಂತಿದ್ದಾರೆ. ಬಳಿಕ ಎರಡೂ ಕಡೆಯ ಕಂಬಿಗಳನ್ನು ಹಿಡಿದು ಮೇಲೆ ಧಾವಿಸಿದ್ದಾರೆ.

ಈ ವೇಳೆ ಅವರ ಕಾಲಿಗೆ ಗಾಯವಾಗುವ ಅಪಾಯವಿತ್ತು. ಆದರೆ ಅವರಿಗೆ ಯಾವ ಸಮಸ್ಯೆಯೂ ಆಗಿಲ್ಲ. ಅವರು ಆರಾಮಾಗಿ ಇದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೈನ್ ಜೀನ್ ಪೀರ್ರೆ ತಿಳಿಸಿದ್ದಾರೆ.

US President Joe Biden Stumbles Thrice While Boarding Air Force One: Video

'ಅಂದು ಬಹಳ ಗಾಳಿ ಬೀಸುತ್ತಿತ್ತು. ನಾನೂ ಕೂಡ ಮೆಟ್ಟಿಲು ಏರುವಾಗ ಹೆಚ್ಚೂ ಕಡಿಮೆ ಬಿದ್ದೇಬಿಟ್ಟಿದ್ದೆ. ಬೈಡನ್ ಅವರು ಶೇ 100ರಷ್ಟು ಆರಾಮಾಗಿ ಇದ್ದಾರೆ' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+