Get Updates
Get notified of breaking news, exclusive insights, and must-see stories!

1953ರ ಬಳಿಕ ಮೊದಲ ಬಾರಿ ಮಹಿಳೆಗೆ ಮರಣದಂಡನೆ

ವಾಷಿಂಗ್ಟನ್, ಜನವರಿ 13: ಅಮೆರಿಕದಲ್ಲಿ 1953ರ ಬಳಿಕ ಇದೇ ಮೊದಲ ಬಾರಿಗೆ ಮಹಿಳಾ ಅಪರಾಧಿಯೊಬ್ಬರಿಗೆ ಮರಣದಂಡನೆ ಶಿಕ್ಷೆ ಜಾರಿಮಾಡಲಾಗಿದೆ. ಕನ್ಸಾಸ್‌ನ 52 ವರ್ಷದ ಲಿಸಾ ಮೊಂಟ್‌ಗೊಮೆರಿ ಎಂಬಾಕೆಯನ್ನು ಬುಧವಾರ ಗಲ್ಲಿಗೇರಿಸಲಾಯಿತು. ಟ್ರಂಪ್ ಆಡಳಿತವು ನೀಡಿದ ಸರಣಿ ಮರಣದಂಡನೆ ಅನುಮತಿಗಳಲ್ಲಿ ಇದೂ ಒಂದು.

ಬುಧವಾರ ಮರಣದಂಡನೆ ಪ್ರಕ್ರಿಯೆ ಆರಂಭಿಸಲಾಯಿತು. ಲಿಸಾ ಮೊಂಟ್‌ಗೊಮೆರಿ ಅವರ ಮುಖದ ಮಾಸ್ಕ್ ಅನ್ನು ತೆಗೆದ ಮಹಿಳಾ ಅಧಿಕಾರಿ, ಆಕೆಗೆ ಕೊನೆಯದಾಗಿ ಏನಾದರೂ ಹೇಳಲು ಬಯಕೆ ಇದೆಯೇ ಎಂದು ಕೇಳಿದರು. ಅದಕ್ಕೆ ಆಕೆ 'ಇಲ್ಲ' ಎಂದು ಗದ್ಗದ ಸ್ವರದಲ್ಲಿ ಪ್ರತಿಕ್ರಿಯಿಸಿ ಸುಮ್ಮನಾದರು.

ಮರಣದಂಡನೆಗೂ ಮುನ್ನ ಕೊಂಚ ಉದ್ವಿಗ್ನರಾದಂತೆ ಲಿಸಾ ಕಂಡುಬಂದರು. ಮರಣದಂಡನೆ ಜಾರಿಗೆ ಕಾದು ನಿಂತಿದ್ದ ಪತ್ರಕರ್ತರತ್ತ ನಿರ್ಲಿಪ್ತ ನೋಟ ಹರಿಸಿದರು. ಬಳಿಕ ಅವರಿಗೆ ಮಾರಕ ಇಂಜೆಕ್ಷನ್ ನೀಡಲಾಯಿತು. ಸ್ಥಳೀಯ ಕಾಲಮಾನ ರಾತ್ರಿ 1.30ರ ವೇಳೆಗೆ ಕಪ್ಪು ಗವುಸು ಧರಿಸಿ, ಸ್ಟೆತಾಸ್ಕೋಪ್ ಹಿಡಿದ ಅಧಿಕಾರಿಯೊಬ್ಬರು ಒಳಗೆ ಪ್ರವೇಶಿಸಿ ಆಕೆಯ ಹೃದಯ ಮತ್ತು ನಾಡಿಮಿಡಿತ ಪರಿಶೀಲಿಸಿದರು. ನಂತರ ಆಕೆ ಮೃತಪಟ್ಟಿರುವುದನ್ನು ಖಚಿತಪಡಿಸಿದರು.

US Executes First Woman Since 1953, Lisa Montgomery Killer Of A Pregnant Woman

2007ರಲ್ಲಿ ಬಾಬ್ಬಿ ಜೋ ಸ್ಟಿನ್ನೆಟ್ ಎಂಬ ಎಂಟು ತಿಂಗಳ ಗರ್ಭಿಣಿಯನ್ನು ಅಪಹರಿಸಿ ಕತ್ತು ಹಿಸುಕಿ ಕೊಂದ ಅಪರಾಧದಲ್ಲಿ ಮಿಸ್ಸೌರಿಯಲ್ಲಿ ಲಿಸಾಳನ್ನು ಶಿಕ್ಷೆಗೆ ಗುರಿಪಡಿಸಲಾಗಿತ್ತು. ಸ್ಟಿನ್ನೆಟ್ ಅವರ ಗರ್ಭದಲ್ಲಿನ ಭ್ರೂಣವನ್ನು ಕತ್ತರಿಸಿದ್ದ ಲಿಸಾ, ಅವರನ್ನು ಕತ್ತುಹಿಸುಕಿ ಕೊಂದಿದ್ದರು. ಈ ಭಯಾನಕ ಘಟನೆಯಲ್ಲಿ ಮಗು ಬದುಕುಳಿದಿತ್ತು.

ಲಿಸಾ ತನ್ನ ಮಲತಂದೆ ಮತ್ತು ಅವರ ಸ್ನೇಹಿತರಿಂದ ಸತತವಾಗಿ ಅತ್ಯಾಚಾರಕ್ಕೆ ಒಳಗಾಗಿದ್ದರು. ಇದರಿಮದ ಮಾನಸಿಕವಾಗಿ ಗಾಸಿಗೊಂಡಿದ್ದರು ಎಂದು ವಕೀಲರು ವಾದಿಸಿದ್ದರು. ಲಿಸಾ, ಜುಲೈ ತಿಂಗಳಿನಿಂದ ಮಾರಕ ಇಂಜೆಕ್ಷನ್ ಮೂಲಕ ಮರಣದಂಡನೆಗೆ ಒಳಗಾದ 11 ಕೈದಿಯಾಗಿದ್ದಾಳೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+