ಯುಎಸ್ ಕ್ಯಾಪಿಟಲ್ ದಾಳಿಯಲ್ಲಿ ಪೊಲೀಸ್ ಸಾವು, ದಾಳಿಕೋರನ ಹತ್ಯೆ

ವಾಷಿಂಗ್ಟನ್, ಏಪ್ರಿಲ್ 3: ಯುಎಸ್ ಕ್ಯಾಪಿಟಲ್ ಕಟ್ಟಡಕ್ಕೆ ವ್ಯಕ್ತಿಯೊಬ್ಬ ಕಾರು ನುಗ್ಗಿಸಿದ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಅಧಿಕಾರಿ ಗಾಯಗೊಂಡಿದ್ದಾರೆ. ಭದ್ರತಾ ವ್ಯವಸ್ಥೆಗಳನ್ನು ಭೇದಿಸಿ ಕಟ್ಟಡದ ಬೇಲಿಗಳನ್ನು ಪುಡಿ ಮಾಡಿಕೊಂಡು ಈ ವಾಹನವನ್ನು ನುಗ್ಗಿಸಲಾಗಿದೆ. ಹೀಗಾಗಿ ಯುಎಸ್ ಕ್ಯಾಪಿಟಲ್ ಅನ್ನು ಬಂದ್ ಮಾಡಲಾಗಿದೆ.

ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಸೋಲನ್ನು ವಿರೋಧಿಸಿ ಟ್ರಂಪ್ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಮೇಲೆ ದಾಳಿ ನಡೆಸಿದ್ದರು. ಈ ಕಹಿ ಘಟನೆ ನಡೆದು ಮೂರು ತಿಂಗಳಲ್ಲಿಯೇ ಮತ್ತೊಂದು ಘಟನೆ ನಡೆದಿದೆ.

ಕಾರು ನುಗ್ಗಿಸಿದ ಚಾಲಕ, ಕಾರಿನಿಂದ ಹೊರಗೆ ನೆಗೆದು ಚಾಕು ಹಿಡಿದು ಭದ್ರತಾ ಸಿಬ್ಬಂದಿ ಮೇಲೆ ದಾಳಿಗೆ ಮುಂದಾದಾಗ ಕ್ಯಾಪಿಟಲ್ ಪೊಲೀಸರು ಆತನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಹಂಗಾಮಿ ಮುಖ್ಯಸ್ಥ ಯೋಗಾನಂದ ಪಿಟ್ಮನ್ ತಿಳಿಸಿದ್ದಾರೆ.

US Capitol Vehicle Attack: Policeman Died And Attacker Shot Dead

ಈಸ್ಟರ್ ರಜೆಗೆಂದು ಕ್ಯಾಂಪ್ ಡೇವಿಡ್‌ಗೆ ಪತ್ನಿ ಜಿಲ್ ಬೈಡನ್ ಜತೆ ತೆರಳಿದ್ದ ಅಧ್ಯಕ್ಷ ಜೋ ಬೈಡನ್, ದಾಳಿಯಲ್ಲಿ ಮೃತಪಟ್ಟ ಹಿರಿಯ ಪೊಲೀಸ್ ಅಧಿಕಾರಿ ವಿಲಿಯಮ್ ಎವಾನ್ಸ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ದಾಳಿಕೋರನನ್ನು ಇಂಡಿಯಾನಾದ 25 ವರ್ಷದ ಕಪ್ಪು ವರ್ಣೀಯ ನೊಹ್ ಗ್ರೀನ್ ಎಂದು ಗುರುತಿಸಲಾಗಿದೆ. ಈತ ನೇಷನ್ ಆಫ್ ಇಸ್ಲಾಂ ಎಂಬ ಕಪ್ಪು ವರ್ಣೀಯರ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ. ಇದು ಭಯೋತ್ಪಾದನೆಗೆ ಸಂಬಂಧಿಸಿದ ಘಟನೆ ಎನಿಸುತ್ತಿಲ್ಲ. ಆದರೆ ಈ ನಿಟ್ಟಿನಲ್ಲಿಯೂ ತನಿಖೆ ನಡೆಸುವುದಾಗಿ ಪಿಟ್ಮನ್ ತಿಳಿಸಿದ್ದಾರೆ.

ಗ್ರೀನ್ ನಿರುದ್ಯೋಗಿಯಾಗಿದ್ದು, ಆರೋಗ್ಯ ಸಮಸ್ಯೆಗಳನ್ನು ಕೂಡ ಎದುರಿಸುತ್ತಿದ್ದ. ತಾನು ಊಹಿಸಲೂ ಸಾಧ್ಯವಾಗದ ಪರೀಕ್ಷೆಗಳನ್ನು ಎದುರಿಸಿದ್ದು, ಆಧ್ಯಾತ್ಮಿಕ ಪ್ರಯಾಣವನ್ನು ಹುಡುಕುತ್ತಿರುವುದಾಗಿ ಜಾಲತಾಣಗಳಲ್ಲಿ ಬರೆದುಕೊಂಡಿದ್ದ. ಆತನ ಪೋಸ್ಟ್‌ಗಳನ್ನು ನೋಡಿದರೆ ಮಾನಸಿಕವಾಗಿ ಹತಾಶೆ ಮತ್ತು ಉದ್ವೇಗಕ್ಕೆ ಒಳಗಾಗಿದ್ದ ಎನಿಸುತ್ತದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+