ವಾಲ್‌ಮಾರ್ಟ್‌ನಲ್ಲಿ ದಾಳಿಕೋರರಿಂದ ಗುಂಡಿನ ದಾಳಿ: ಮೂವರು ಬಲಿ
ವಾಷಿಂಗ್ಟನ್, ನವೆಂಬರ್ 19: ಒಹ್ಲಹೊಮಾದ ವಾಲ್‌ಮಾರ್ಟ್ ಮಳಿಗೆಯ ಹೊರಗೆ ನಡೆದ ದಾಳಿಯಲ್ಲಿ ಮೂವರು ಮಂದಿ ಬಲಿಯಾಗಿದ್ದಾರೆ.
ಆಂತರಿಕ ವ್ಯಾಜ್ಯದ ಕಾರಣದಿಂದ ಮಳಿಗೆಯ ಹೊರಗೆ ವಾಹನ ನಿಲುಗಡೆ ಜಾಗದಲ್ಲಿ ಈ ದಾಳಿ ನಡೆದಿದೆ ಎಂದು ಡಂಕನ್ ಪಟ್ಟಣದ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಇವರಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.ಮೂವರು ವಾಹನದಲ್ಲಿ ಕುಳಿತಿದ್ದಾಗ ಅಲ್ಕಿಗೆ ಆಗಮಿಸಿದ್ದ ಹಂತಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಹಂತಕದಲ್ಲಿ ಮತ್ತೊಬ್ಬ ವ್ಯಕ್ತಿ ಆತನ ಪಿಸ್ತೂಲು ಕಸಿದುಕೊಳ್ಳಲು ಮುಂದಾದಾಗ ದಾಳಿಕೋರ ತಾನೇ ಸ್ವತಃ ಗುಂಡು ಹಾರಿಸಿಕೊಂಡ ಎಂಬ ಮಾಹಿತಿ ಲಭ್ಯವಾಗಿದೆ.
ಮೃತಪಟ್ಟವರ ಪೈಕಿ ಒಬ್ಬರು ವಾಹನದ ಒಳಗೆ ಹಾಗೂ ಇಬ್ಬರು ವಾಹನದ ಹೊರಗೆ ಇದ್ದರು. ಘಟನಾ ಸ್ಥಳದಲ್ಲಿ ಪಿಸ್ತೂಲು ಪತ್ತೆಯಾಗಿದೆ.












Click it and Unblock the Notifications