• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೌರ ವ್ಯವಸ್ಥೆಯಲ್ಲಿ ಗುಲಾಬಿ ಬಣ್ಣದ ಪುಟಾಣಿ ಗ್ರಹ ಪತ್ತೆ

|

ವಾಷಿಂಗ್ಟನ್, ಡಿಸೆಂಬರ್ 20: ನಮ್ಮ ಸೌರ ವ್ಯವಸ್ಥೆಯಲ್ಲಿ ಅತ್ಯಂತ ದೂರದಲ್ಲಿರುವ ಕುಬ್ಜ ಗ್ರಹವೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ವಿಶೇಷವೆಂದರೆ ಈ ಗ್ರಹ ಗುಲಾಬಿ ವರ್ಣದಲ್ಲಿ ಇರುವುದು. ವಿಜ್ಞಾನಿಗಳು ಇದಕ್ಕೆ 'ಫಾರೌಟ್' ಎಂದು ನಾಮಕರಣ ಮಾಡಿದ್ದಾರೆ.

ಉಂಗುರ ಕಳೆದುಕೊಳ್ಳುತ್ತಿರುವ ಶನಿಯ ಟೈಮೇ ಚೆನ್ನಾಗಿಲ್ಲವಾ?

ನಿಧಾನವಾಗಿ ಚಲಿಸುವ, ಹಿಮಾಚ್ಛಾದಿತ ಈ ಗುಲಾಬಿ ಗ್ರಹ ಸೂರ್ಯನಿಂದ ಭೂಮಿಗಿಂತಲೂ 120-130 ಪಟ್ಟು ಹೆಚ್ಚು ದೂರದಲ್ಲಿದೆ.

ಈ ಕಿರಿದಾದ ಗ್ರಹ 310-375 ಮೈಲುಗಳಷ್ಟು (500-600 ಕಿ.ಮೀ) ವಿಸ್ತೀರ್ಣ ಹೊಂದಿದ್ದು, ಅಧಿಕೃತವಾಗಿ 2018 VG 18 ಎಂಬ ಹೆಸರು ಪಡೆದುಕೊಂಡಿದೆ ಎಂದು ವಾಷಿಂಗ್ಟನ್‌ನಲ್ಲಿರುವ ಕಾರ್ನೇಜ್ ವಿಜ್ಞಾನ ಸಂಸ್ಥೆಯ ಖಗೋಳ ವಿಜ್ಞಾನಿ ಸ್ಕಾಟ್ ಶೆಫರ್ಡ್ ತಿಳಿಸಿದ್ದಾರೆ.

ನಮ್ಮ ಸೌರ ವ್ಯವಸ್ಥೆಯಲ್ಲಿ ಅಂದಾಜು 50 ಕುಬ್ಜ ಗ್ರಹಗಳಿವೆ. ಇವುಗಳಲ್ಲಿ ಅತಿ ದೊಡ್ಡದು ಎಂದರೆ ಪ್ಲೂಟೊ 1,470 ಮೈಲುಗಳು (2,370 ಕಿ.ಮೀ) ಮತ್ತು ಎರಿಸ್ 1,445 ಮೈಲು (2,325 ಕಿ.ಮೀ) ವಿಸ್ತೀರ್ಣ ಹೊಂದಿವೆ.

ಬಾಹ್ಯಾಕಾಶದ ಸುಂದರ ಚಿತ್ರ ಸೆರೆಹಿಡಿದ ನಾಸಾದ 'ಟೆಸ್'

ಈ ಕುಬ್ಜ ಗ್ರಹವನ್ನು ಇದೇ ಮೊದಲ ಬಾರಿಗೆ ನೋಡಿದ್ದೇವೆ. ಇದು ಬಹಳ ನಿಧಾನವಾಗಿ ಚಲಿಸುತ್ತಿದೆ. ಇಷ್ಟು ನಿಧಾನಗತಿಯಲ್ಲಿ ಸಾಗುವ ಗ್ರಹವನ್ನು ಇದೇ ಮೊದಲ ಬಾರಿಗೆ ನೋಡಿರುವುದು. ಈ ಕಾರಣಕ್ಕಾಗಿ ನಾನು 'ಫಾರ್ ಔಟ್' ಎಂದು ಗೊಣಗಿಕೊಂಡೆ. ಅದು ಅಷ್ಟು ಆಕರ್ಷಕವಾಗಿದೆ. ಅಲ್ಲದೆ ಸೌರ ವ್ಯವಸ್ಥೆಯಲ್ಲಿ ಅತಿ ದೂರದಲ್ಲಿಯೂ ಇದೆ. ಹೀಗಾಗಿ ಅದಕ್ಕೆ 'ಫಾರೌಟ್' ಎಂದು ಅಡ್ಡ ಹೆಸರು ಇರಿಸಿದ್ದೇನೆ ಎಂದು ಶೆಫರ್ಡ್ ತಿಳಿಸಿದ್ದಾರೆ.

ದೈತ್ಯ ಗುರುವಿಗೆ ಇದೆ ಇನ್ನೂ ಡಜನ್ ಹೊಸ ಚಂದ್ರರ ನಂಟು

ಈ ಗ್ರಹ ಪತ್ತೆಯಾಗಿರುವುದನ್ನು ಸೋಮವಾರ ಪ್ರಕಟಿಸಲಾಗಿದೆ. ಅದರ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲ. ಕಳೆದ ತಿಂಗಳಷ್ಟೇ ಅದನ್ನು ಪತ್ತೆ ಹಚ್ಚಿದ್ದೇವೆ. ಅದರ ಹೊಳಪಿನ ಮೂಲಕ ಗಾತ್ರವನ್ನು ನಿರ್ಧರಿಸಿದ್ದೇವೆ. ಅದು ಗುಲಾಬಿ ವರ್ಣದ್ದಾಗಿದೆ. ಅದರ ಮೇಲೆ ಹಿಮವನ್ನು ಇರಿಸಿ ಅದಕ್ಕೆ ಸೋಲಾರ್ ರೇಡಿಯೇಷನ್ ಅನ್ನು ನಿರಂತರವಾಗಿ ಹಾಯಿಸಿದರೆ ಹಿಮವು ಒಂದು ರೀತಿ ಕೆಂಪು ಬಣ್ಣ/ಗುಲಾಬಿ ಬಣ್ಣಕ್ಕೆ ತಿರುಗುತ್ತದೆ ಎಂದು ಶೆಫರ್ಡ್ ಹೇಳಿದ್ದಾರೆ.

English summary
Scientists have discovered the most distant object in solar system. Nicknamed Farout, a pinkish dwarf planet about 120-130 times further from the sun than Earth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X