ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ನಿಭಾಯಿಸುವಲ್ಲಿ ಟ್ರಂಪ್ ಸೋತಿದ್ದಾರೆ: ಅಮೆರಿಕನ್ನರು

|
Google Oneindia Kannada News

ವಾಷಿಂಗ್ಟನ್, ಜುಲೈ 18: ಅಮೆರಿಕದಲ್ಲಿ ಲಕ್ಷ ಮಂದಿಯನ್ನು ಬಲಿಪಡೆದ ಕೊವಿಡ್ 19 ರೋಗವನ್ನು ನಿಭಾಯಿಸುವಲ್ಲಿ ಡೊನಾಲ್ಡ್ ಟ್ರಂಪ್ ಸೋತಿದ್ದಾರೆ ಎಂದು ಬಹುತೇಕ ಅಮೆರಿಕನ್ನರು ಅಭಿಪ್ರಾಯಪಟ್ಟಿದ್ದಾರೆ.

Recommended Video

ಕೊರೊನ ವಿರುದ್ಧದ ಯುದ್ಧದಲ್ಲಿ ಗೆದ್ದ Sharath Bacche Gowda | Oneindia Kannada

ಮಾಸ್ಕ್ ಧರಿಸುವ ಬಗ್ಗೆ ಹಲವು ಚರ್ಚೆಗಳು ನಡೆದಿವೆ, ಮಾಸ್ಕ್ ಧರಿಸದೇ ಇರುವವರು ಟ್ರಂಪ್ ಅನುಯಾಯಿಗಳು, ಮಾಸ್ಕ್ ಧರಿಸುವವರು ಟ್ರಂಪ್ ವಿರೋಧಿಗಳು ಎನ್ನುವ ಮಾತುಗಳೂ ಕೇಳಿಬಂದಿತ್ತು, ದಿನದಿಂದ ದಿನಕ್ಕೆ ಸೋಂಕು ಕಡಿಮೆಯಾಗುವ ಬದಲು ಹೆಚ್ಚಾಗುತ್ತಿದೆ.

ಕಡೆಗೂ ಮಾಸ್ಕ್ ಧರಿಸಿದ ಡೊನಾಲ್ಡ್ ಟ್ರಂಪ್, ಉಡಾಫೆ ಇನ್ನಿಲ್ಲಕಡೆಗೂ ಮಾಸ್ಕ್ ಧರಿಸಿದ ಡೊನಾಲ್ಡ್ ಟ್ರಂಪ್, ಉಡಾಫೆ ಇನ್ನಿಲ್ಲ

ಈ ಮಧ್ಯೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಕೊರೊನಾ ಸೋಂಕನ್ನು ನಿರ್ವಹಿಸುತ್ತಿರುವ ರೀತಿಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್-ಎಬಿಸಿ ಸಮೀಕ್ಷೆ ವರದಿ ಮಾಡಿದೆ.

Number Of Americans Who Disapprove Of Trumps Handling Of Coronavirus Rising

ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ವರದಿ ಪ್ರಕಾರ ಅಮೆರಿಕದಲ್ಲಿ ಇದುವರೆಗೆ ಕೋವಿಡ್-19ಗೆ 36 ಲಕ್ಷದ 41 ಸಾವಿರದ 539 ಮಂದಿಗೆ ಸೋಂಕು ತಗಲಿದ್ದು ಸೋಂಕಿನಿಂದ 1 ಲಕ್ಷದ 39 ಸಾವಿರದ 176 ಮಂದಿ ಮೃತಪಟ್ಟಿದ್ದಾರೆ.

ಮೊನ್ನೆ ಜುಲೈ 12ರಿಂದ 15ರ ಮಧ್ಯೆ ಈ ಸಮೀಕ್ಷೆ ನಡೆಸಲಾಗಿದ್ದು ಅದರಲ್ಲಿ ಶೇಕಡಾ 38ರಷ್ಟು ಮಂದಿ ಅಮೆರಿಕನ್ನರು ಅಧ್ಯಕ್ಷರು ಕೊರೊನಾ ಸೋಂಕನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಶೇಕಡಾ 51ರಷ್ಟಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇದೀಗ ಶೇಕಡಾ 46ಕ್ಕೆ ಇಳಿದಿರುವುದೇ ಅದಕ್ಕೆ ನಿದರ್ಶನ ಎನ್ನುತ್ತಿದ್ದಾರೆ.

ಆದರೆ ಶೇಕಡಾ 60ರಷ್ಟು ಮಂದಿ ಇದನ್ನು ಒಪ್ಪುತ್ತಿಲ್ಲ, ದೇಶದಲ್ಲಿ ಮಾರ್ಚ್ ತಿಂಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶೇಕಡಾ 45ರಷ್ಟಿದ್ದರೆ ಅದು ಮೇ ತಿಂಗಳಲ್ಲಿ ಶೇಕಡಾ 53ರಷ್ಟಾಗಿದೆ ಎನ್ನುತ್ತಿದ್ದಾರೆ.

ದೇಶದ 1,006 ವಯಸ್ಕರ ಮೇಲೆ ನಡೆಸಿದ ಸೆಲ್ ಫೋನ್ ಮತ್ತು ಸ್ಥಿರ ದೂರವಾಣಿ ಸಂದರ್ಶನದಿಂದ ಈ ಮಾಹಿತಿ ಹೊರಬಿದ್ದಿದೆ.ಕೊರೊನಾ ಸೋಂಕನ್ನು ನಿಭಾಯಿಸುವಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಶೇಕಡಾ 52ರಷ್ಟು ಮಂದಿ ಹೇಳುತ್ತಿದ್ದಾರೆ.

English summary
Americans’ views of President Trump’s handling of the coronavirus pandemic have deteriorated significantly as cases rise across the country and personal fears of becoming infected persist, a Washington Post-ABC News poll finds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X