• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ: ಪೊಲೀಸರಿಂದ ಮತ್ತೊಬ್ಬ ಕಪ್ಪುವರ್ಣೀಯನ ಹತ್ಯೆ

|

ಮಿನ್ನೆಪೊಲಿಸ್, ಏಪ್ರಿಲ್ 12: ಅಮೆರಿಕದಲ್ಲಿ ಜನಾಂಗೀಯ ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ. ಮಿನ್ನೆಪೊಲಿಸ್‌ನಲ್ಲಿ ಕಪ್ಪು ವರ್ಣೀಯ ಯುವಕನೊಬ್ಬನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ವಿರುದ್ಧ ಭಾನುವಾರ ರಾತ್ರಿ ಭಾರಿ ಪ್ರತಿಭಟನೆ ನಡೆದಿದೆ. ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದ ಘಟನೆ ಇನ್ನೂ ಹಸಿರಾಗಿರುವಾಗಲೇ ಈ ಘಟನೆ ನಡೆದಿದೆ.

ಮಿನ್ನೆಪೊಲಿಸ್‌ನ ವಾಯವ್ಯ ಭಾಗದ ಬ್ರೂಕ್ಲಿನ್ ಸೆಂಟರ್‌ನ ಪೊಲೀಸ್ ಠಾಣೆಯ ಎದುರು ನೂರಾರು ಜನರು ಸೇರಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಚೆದುರಿಸಲು ಪೊಲೀಸರು ಅಶ್ರುವಾಯು ಮತ್ತು ಫ್ಲ್ಯಾಶ್‌ಬ್ಯಾಂಗ್‌ಗಳನ್ನು ಸಿಡಿಸಿದರು.

ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು, 196 ಕೋಟಿ ಪರಿಹಾರ ಘೋಷಣೆ ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು, 196 ಕೋಟಿ ಪರಿಹಾರ ಘೋಷಣೆ

ಭಾನುವಾರ ಸಂಜೆ ಕರೆ ಮಾಡಿದ 20 ವರ್ಷದ ಮಗ ಡಾಂಟೆ ರೈಟ್, ಪೊಲೀಸರು ತನ್ನನ್ನು ಎಳೆದಾಡುತ್ತಿರುವುದಾಗಿ ತಿಳಿಸಿದ್ದ. ಆಮೇಲೆ ಫೋನ್ ಕೆಳಕ್ಕೆ ಇಡುವಂತೆ ಅಧಿಕಾರಿಗಳು ತನ್ನ ಮಗನಿಗೆ ಗದರುವುದು ಕೇಳಿಸಿತು. ನಂತರ ಒಬ್ಬ ಅಧಿಕಾರಿ ಫೋನ್ ಕರೆಯನ್ನು ಅಂತ್ಯಗೊಳಿಸಿದರು. ಸ್ವಲ್ಪ ಸಮಯದ ಬಳಿಕ ಮಗನ ಗೆಳತಿ ಕರೆ ಮಾಡಿ ಆತನನ್ನು ಪೊಲೀಸರು ಗುಂಡಿಕ್ಕಿ ಕೊಂದಿರುವುದಾಗಿ ತಿಳಿಸಿದರು ಎಂದು ಕೇಟಿ ರೈಟ್ ಆರೋಪಿಸಿದ್ದಾರೆ.

ಬ್ರೂಕ್ಲಿನ್ ಸೆಂಟರ್‌ನಲ್ಲಿ ನಡೆದ ಗುಂಡಿನ ದಾಳಿ ಘಟನೆಯಲ್ಲಿ ಅಧಿಕಾರಿಯೊಬ್ಬರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಮಿನ್ನೆಸೊಟಾ ಬ್ಯೂರೊ ಆಫ್ ಕ್ರಿಮಿನಲ್ ಅಪ್ರೆಹೆನ್ಷನ್ ಖಚಿತಪಡಿಸಿದೆ. ಆದರೆ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ವಿವರ ನೀಡಲು ನಿರಾಕರಿಸಿದೆ.

ಬ್ರೂಕ್ಲಿನ್ ಸೆಂಟರ್ ಪೊಲೀಸ್ ಇಲಾಖೆ ಹೇಳಿಕೆ ಪ್ರಕಾರ, ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಚಾಲಕನೊಬ್ಬನನ್ನು ಪೊಲೀಸರು ಹೊರಗೆ ಎಳೆದಿದ್ದರು. ಆತನ ಮೇಲೆ ಹಳೆಯ ವಾರಂಟ್ ಒಂದು ಇರುವುದು ಕಂಡುಬಂದ ಬಳಿಕ ಅವನನ್ನು ವಶಕ್ಕೆ ಪಡೆದುಕೊಳ್ಳಲು ಪ್ರಯತ್ನಿಸಲಾಯಿತು. ಆದರೆ ಆತ ತಪ್ಪಿಸಿಕೊಂಡು ಕಾರಿನತ್ತ ಓಡಿದ್ದರಿಂದ ಪೊಲೀಸ್ ಅಧಿಕಾರಿಯೊಬ್ಬರು ಗುಂಡು ಹಾರಿಸಿದರು. ಆತ ಸ್ಥಳದಲ್ಲಿಯೇ ಮೃತಪಟ್ಟ. ಕಾರ್‌ನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ಜೀವಕ್ಕೆ ಅಪಾಯವಿಲ್ಲದ ರೀತಿಯಲ್ಲಿ ಗಾಯಗೊಂಡರು. ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು.

ಇದು ಜನಾಂಗೀಯ ದ್ವೇಷದಿಂದ ನಡೆದ ಹತ್ಯೆ ಎಂದು ಬ್ರೂಕ್ಲಿನ್ ಸೆಂಟರ್ ಎದುರು ಹಾಜರಾದ ನೂರಾರು ಮಂದಿ ಪೊಲೀಸರೊಂದಿಗೆ ಘರ್ಷಣೆಗೆ ಮುಂದಾದರು.

English summary
Minneapolis cop shoots a young black man caused violant protest in Brooklyn Center, US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X