ಡ್ರಗ್ ಮಾಫಿಯಾ ದೊರೆ ಎಲ್ ಚಾಪೊಗೆ 30 ವರ್ಷ ಜೈಲು
ನ್ಯೂಯಾರ್ಕ್, ಜುಲೈ 18: ಜಗತ್ತಿನ ಕುಖ್ಯಾತ ಡ್ರಗ್ ಮಾಫಿಯಾ ಕಿಂಗ್ ಜಾಕ್ವಿನ್ ಗುಜ್ಮಾನ್ ಲಾರಾ ಅಲಿಯಾಸ್ ಎಲ್ ಚಾಪೊಗೆ(62) ಅಮೆರಿಕ ನ್ಯಾಯಾಲವು 30 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಡ್ರಗ್ ಮಾಫಿಯಾದ ದೊರೆ ಎಂದು ಕರೆಯಲ್ಪಡುತ್ತಿದ್ದ ಪ್ಯಾಬ್ಲೊ ಎಸ್ಕೋಬನನ್ನು 1993ರಲ್ಲಿ ಎನ್‌ಕೌಂಟರ್ ಮಾಡಿದ ಬಳಿಕ ಜಾಗತಿಕ ಡ್ರಗ್ ಮಾಫಿಯಾವನ್ನು ಚಾಪೊ ಆಳುತ್ತಿದ್ದ ಎನ್ನಲಾಗಿದೆ.
ಈತನ ಮೇಲೆ ಸಾಕಷ್ಟು ಚಿತ್ರಗಳು ಕೂಡ ಆಗಿವೆ.ಅಮೆರಿಕಕ್ಕೆ ನೂರಾರು ಟನ್ ಕೊಕೈನ್ ಸೇರಿ ಇತರೆ ಮಾದಕ ದ್ರವ್ಯಗಳನ್ನು ರವಾನಿಸಿರುವ ಆರೋಪವು ಚಾಪೊ ಮೇಲಿದೆ.

ಆದರೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರ ವಿರುದ್ಧವೇ ಕೂಗಾಡಿರುವ ಚಾಪೊ ಪ್ರಕರಣ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಬ್ರಿಯಾನ್ ಕೊಗ್ಯಾನ್ ಕಡು ಭ್ರಷ್ಟ ನ್ಯಾಯಾಧೀಶ ಎಂದು ಅಲವತ್ತುಕೊಂಡಿದ್ದಾನೆ.
ಸಿನೊಲಲಾದ ಹಾಲಿ ಉಪಾಧ್ಯಕ್ಷನೂ ಆಗಿರುವ ಚಾಪೊನನ್ನು 2017ರಲ್ಲಿ ಮೆಕ್ಸಿಕೊದಿಂದ ಅಮೆರಿಕಕ್ಕೆ ಹಸ್ತಾಂತರ ಮಾಡಲಾಗಿತ್ತು. ಅಮೆರಿಕವಲ್ಲದೆ ವಿಶ್ವದ ಸಾಕಷ್ಟು ರಾಷ್ಟ್ರಗಳಲ್ಲಿ ಈತನ ವಿರುದ್ಧ ಡ್ರಗ್ಸ್ ಮಾಫಿಯಾ ಪ್ರಕರಣಗಳು ದಾಖಲಾಗಿವೆ.
ಅಮೆರಿಕ ಒಂದರಲ್ಲೇ ಡ್ರಗ್ಸ್ ಮಾರಾಟದಿಂದ 12.7 ಬಿಲಿಯನ್ ಡಾಲರ್ ಆದಾಯವನ್ನು ಚಾಪೊ ಗಳಿಸಿದ್ದ ಎನ್ನಲಾಗಿದೆ.












Click it and Unblock the Notifications