ಭಾರತ ಮೂಲದ ಮಕ್ಕಳ ತಜ್ಞನಿಂದ ಒತ್ತೆಯಾಳು ಇರಿಸಿಕೊಂಡು ವೈದ್ಯೆಯ ಹತ್ಯೆ, ಆತ್ಮಹತ್ಯೆ
ಹ್ಯೂಸ್ಟನ್, ಜನವರಿ 28: ಅಂತಿಮ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಭಾರತ ಮೂಲದ 43 ವರ್ಷದ ಮಕ್ಕಳ ತಜ್ಞರೊಬ್ಬರು ಮಹಿಳಾ ವೈದ್ಯರೊಬ್ಬರನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ.
ವ್ಯಕ್ತಿಯನ್ನು ಭಾರತ ಮೂಲದ ಡಾ. ಭರತ್ ನರುಮಂಚಿ ಎಂದು ಗುರುತಿಸಲಾಗಿದ್ದು, ಕೆಲವು ದಿನಗಳ ಹಿಂದಷ್ಟೇ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅದು ಅಂತಿಮ ಹಂತದ್ದಲ್ಲಿದ್ದು, ಗುಣಪಡಿಸಲು ಅಸಾಧ್ಯವಾಗಿತ್ತು. ರಾಜಧಾನಿ ಆಸ್ಟಿನ್‌ನಲ್ಲಿನ ವೈದ್ಯಕೀಯ ಕಚೇರಿಯೊಂದರಲ್ಲಿ ಘಟನೆ ನಡೆದಿದ್ದು, ವೈದ್ಯೆಯ ಹತ್ಯೆಗೂ ಮುನ್ನ ಭರತ್ ಅನೇಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು.
ಮಕ್ಕಳ ವೈದ್ಯಕೀಯ ಸಮೂಹದ ಕಚೇರಿಯಲ್ಲಿ ಗನ್ ಹಿಡಿದ ವ್ಯಕ್ತಿಯೊಬ್ಬ ಪ್ರವೇಶಿಸಿದ್ದು, ಕಟ್ಟಡದ ಒಳಗೆ ಅನೇಕರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದಾರೆ ಎಂದು ಮಂಗಳವಾರ ಪೊಲೀಸರಿಗೆ ಕರೆ ಬಂದಿತ್ತು. ಆರಂಭದಲ್ಲಿ ಹಲವಾರು ಒತ್ತೆಯಾಳುಗಳನ್ನು ಇರಿಸಿಕೊಳ್ಳಲಾಗಿತ್ತು. ಆದರೆ ಅವರಲ್ಲಿ ಕೆಲವರು ತಪ್ಪಿಸಿಕೊಂಡರೆ, ಇನ್ನು ಕೆಲವರಿಗೆ ಅಲ್ಲಿಂದ ಹೋಗಲು ಭರತ್ ಅವಕಾಶ ನೀಡಿದ್ದರು. ಆದರೆ ಕ್ಯಾಥರಿನ್ ಡೋಡ್ಸನ್ ಎಂಬ ಮಕ್ಕಳ ತಜ್ಞೆಯನ್ನು ಮಾತ್ರ ಬಿಟ್ಟಿರಲಿಲ್ಲ.

ಅಲ್ಲಿಂದ ತಪ್ಪಿಸಿಕೊಂಡಿದ್ದ ಒತ್ತೆಯಾಳುಗಳು, ವ್ಯಕ್ತಿಯ ಕೈಯಲ್ಲಿ ಪಿಸ್ತೂಲು ಇದ್ದು, ಜತೆಗೆ ಎರಡು ಚೀಲಗಳಿವೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಘಟನೆಗೂ ಒಂದು ವಾರ ಮುನ್ನವಷ್ಟೇ ಕಚೇರಿಗೆ ಬಂದಿದ್ದ ಭರತ್, ಸ್ವಯಂಸೇವಕನ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದರ ಹೊರತಾಗಿ ಭರತ್ ಹಾಗೂ ವೈದ್ಯೆ ಕ್ಯಾಥರಿನ್‌ಗೆ ಯಾವ ಸಂಬಂಧವಿತ್ತು ಎನ್ನುವುದು ಪೊಲೀಸರಿಗೆ ಗೊತ್ತಾಗಿಲ್ಲ.
ಭರತ್ ಮನವೊಲಿಸಲು ಪೊಲೀಸರು ಅನೇಕ ರೀತಿ ಪ್ರಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಸತತ ಪ್ರಯತ್ನದ ಬಳಿಕ ಕಟ್ಟಡದ ಒಳ ಪ್ರವೇಶಿಸಿದ ಪೊಲೀಸರಿಗೆ ಇಬ್ಬರೂ ಗುಂಡೇಟಿನಿಂದ ಸತ್ತಿರುವುದು ಕಂಡುಬಂದಿದೆ.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications