• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಪೆಲಿಂಗ್‌ ಬೀ ಗೆದ್ದ ಭಾರತ ಮೂಲದ ಹರಣಿ ಲೋಗನ್‌

|
Google Oneindia Kannada News

ನವದೆಹಲಿ, ಜೂ. 3: ಭಾರತೀಯ ಮೂಲದ ಅಮೆರಿಕನ್ ಹುಡುಗಿ ಹರಿಣಿ ಲೋಗನ್ 2022ರ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆ ಗೆದ್ದಿದ್ದಾರೆ. ಟೆಕ್ಸಾಸ್ ರಾಜ್ಯದ ೮ನೇ ತರಗತಿ ವಿದ್ಯಾರ್ಥಿನಿಯಾಗಿರುವ ಹರಿಣಿ ಮತ್ತೊಬ್ಬ ಭಾರತೀಯ ಸ್ಪರ್ಧಾಳು ವಿಕ್ರಮ್ ರಾಜುರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ಧಾರೆ.
ಲೈಟ್ನಿಂಗ್ ರೌಂಡ್ ಟೈಬ್ರೇಕರ್‌ವರೆಗೂ ಹೋದ ಈ ಸ್ಪರ್ಧೆಯಲ್ಲಿ ಹರಿಣಿ ಹೊಸ ದಾಖಲೆಯನ್ನೇ ಬರೆದರು. ಸ್ಪೆಲಿಂಗ್ ಬೀ ಸ್ಪರ್ಧೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಲೈಟ್ನಿಂಗ್ ಸುತ್ತಿನ ಟೈಬ್ರೇಕರ್ ನಡೆದದ್ದು.

ಪತ್ನಿ ವಿರುದ್ಧ ಕೋರ್ಟ್ ಕೇಸ್ ಗೆದ್ದ ಹಾಲಿವುಡ್ ಸ್ಟಾರ್ ಜಾನಿ ಡೆಪ್ಪತ್ನಿ ವಿರುದ್ಧ ಕೋರ್ಟ್ ಕೇಸ್ ಗೆದ್ದ ಹಾಲಿವುಡ್ ಸ್ಟಾರ್ ಜಾನಿ ಡೆಪ್

ಕ್ಷಿಪ್ರವಾಗಿ ಸ್ಪೆಲಿಂಗ್ ಹೇಳುವ ಈ ಸುತ್ತಿನಲ್ಲಿ 90 ಸೆಕೆಂಡ್ ಕಾಲಾವಕಾಶ ಇರುತ್ತದೆ. ಇದರಲ್ಲಿ ಹರಿಣಿ 22 ಪದಗಳಿಗೆ ಸರಿಯಾದ ಸ್ಪೆಲಿಂಗ್ ಹೇಳಿದ್ದಾರೆ. ಈಕೆಗಿಂತ ಕಿರಿಯನಾಗಿರುವ ಮತ್ತು 7ನೇ ತರಗತಿ ವಿದ್ಯಾರ್ಥಿಯಾಗಿರುವ ವಿಕ್ರಮ್ ರಾಜು ಕೇವಲ 15 ಪದಗಳ ಸ್ಪೆಲಿಂಗ್ ಹೇಳಿದರು.

ಹರಿಣಿ ಲೋಗನ್ ಈ ಸ್ಪೆಲಿಂಗ್ ಬೀ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವುದು ಇದು ನಾಲ್ಕನೇ ಬಾರಿ. ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಹರಿಣಿಗೆ ಅಮೆರಿದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪ್ರೇರಣೆಯಂತೆ.

ಇವರೆಂಥಾ ಓದುಗರು?: ಗ್ರಂಥಾಲಯದ ಪುಸ್ತಕ ಹಿಂತಿರುಗಿಸಲು 46 ವರ್ಷ!ಇವರೆಂಥಾ ಓದುಗರು?: ಗ್ರಂಥಾಲಯದ ಪುಸ್ತಕ ಹಿಂತಿರುಗಿಸಲು 46 ವರ್ಷ!

ಫೈನಲ್ ಸ್ಪರ್ಧೆಯಲ್ಲಿ ಸೋತ 12 ವರ್ಷದ ವಿಕ್ರಮ್ ರಾಜು ಮುಂದಿನ ವರ್ಷ ಮತ್ತೆ ಸ್ಪರ್ಧಿಸಿ ಪ್ರಶಸ್ತಿ ಗೆಲ್ಲುವ ಛಲ ವ್ಯಕ್ತಪಡಿಸಿದ್ದಾರೆ.

India-born Harani Logan Wins Spelling Bee Contest

ಬಹಳ ಒತ್ತಡದಲ್ಲಿ ಅಡಲಾಗುವ ಸ್ಪೆಲಿಂಗ್ ಬೀ ಸ್ಪರ್ಧೆ ಅಮೆರಿಕಾದ್ಯಂತ ಜನಪ್ರಿಯವೆನಿಸಿದೆ. ಮಕ್ಕಳಲ್ಲಿ ಇಂಗ್ಲೀಷ್ ಭಾಷೆಯ ಮೇಲಿನ ಪ್ರೌಢಿಮೆಯನ್ನು ಒರೆಗೆ ಹಚ್ಚುವ ಈ ಸ್ಪರ್ಧೆಯಲ್ಲಿ ಆಡುವುದು ಬಹಳ ಕಠಿಣ. ಕ್ಷಿಪ್ರಗತಿಯಲ್ಲಿ ಪ್ರತಿಕ್ರಿಯೆ ಕೊಡಬೇಕಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಮಕ್ಕಳೇ ಪ್ರಾಬಲ್ಯ ಸಾಧಿಸುತ್ತಾ ಬಂದಿರುವುದು ವಿಶೇಷ. .

(ಒನ್ಇಂಡಿಯಾ ಸುದ್ದಿ)

Recommended Video

   ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಓಪನರ್ ಸ್ಥಾನ ಯಾರಿಗೆ? ದ್ರಾವಿಡ್ & ರಾಹುಲ್ ಗೆ ಟೆನ್ಶನ್ | OneIndia Kannada
   English summary
   Indian-born American girl Harini Logan has won the 2022 Scripps National Spelling Bee contest by beating another India origin boy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X