ವೀಸಾ ಗೊಂದಲ ವಿದ್ಯಾರ್ಥಿಗಳು ಉಸ್ಸಪ್ಪ, ಸಾಕಪ್ಪಾ ಸಹವಾಸ!

ಅಮೆರಿಕದಲ್ಲಿ ಈಗ ಎಲ್ಲವೂ ಅಯೋಮಯ. ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗಿರುವ ಜಗತ್ತಿನ ಶಕ್ತಿಶಾಲಿ ರಾಷ್ಟ್ರದಲ್ಲಿ ಡೊನಾಲ್ಡ್ ಟ್ರಂಪ್ ಕೈಗೊಳ್ಳುತ್ತಿರುವ ನಿರ್ಧಾರಗಳು ದೊಡ್ಡಣ್ಣನ ಬುಡ ಅಲುಗಾಡಿಸಿದೆ. ಇತ್ತೀಚೆಗೆ ಟ್ರಂಪ್ ಸರ್ಕಾರ ಪ್ರಕಟಿಸಿರುವ ವಿವಾದಾತ್ಮಕ ನಿರ್ಧಾರವೊಂದು ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳು ಅತಂತ್ರರಾಗುವಂತೆ ಮಾಡಿದೆ.

H1B ಸೇರಿದಂತೆ ಹಲವು ಉದ್ಯೋಗ ಸಂಬಂಧಿ ವೀಸಾಗಳನ್ನು 2020ರ ಅಂತ್ಯದವರೆಗೂ ರದ್ದು ಮಾಡಿ ವಿದೇಶಿ ಕಾರ್ಮಿಕರಿಗೆ ಶಾಕ್‌ ನೀಡಿದ್ದ ಟ್ರಂಪ್‌, ಈಗ ವಿದೇಶಿ ವಿದ್ಯಾರ್ಥಿಗಳಲ್ಲೂ ಭಯ ಹುಟ್ಟಿಸುವ ನಿರ್ಧಾರ ಕೈಗೊಂಡಿದ್ದಾರೆ. ಅಷ್ಟಕ್ಕೂ ಕೊರೊನಾ ಕೂಪವಾಗಿರುವ ಅಮೆರಿಕದಲ್ಲಿ ಭಾಗಶಃ ಎಲ್ಲಾ ರಾಜ್ಯಗಳು ಲಾಕ್‌ಡೌನ್ ಹೇರಿವೆ. ಅದರಲ್ಲೂ ಶಾಲಾ-ಕಾಲೇಜುಗಳು ಸದ್ಯಕ್ಕೆ ತೆರೆಯುವ ಸಂಭವವೇ ಇಲ್ಲ. ಹೀಗಾಗಿಯೇ ಅಮೆರಿಕದಾದ್ಯಂತ ಆನ್‌ಲೈನ್ ಕ್ಲಾಸ್‌ಗಳನ್ನ ನಡೆಸಲಾಗುತ್ತಿದೆ.

ಆದರೆ ಇದನ್ನೇ ದಾಳವಾಗಿ ಮಾಡಿಕೊಂಡ ಟ್ರಂಪ್ ಸರ್ಕಾರ ಆನ್‌ಲೈನ್‌ ತರಗತಿಗಳ ಮೂಲಕವೇ ಪಾಠ ಮುಂದುವರಿಸಲು ನಿರ್ಧರಿಸಿದರೆ, ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ತಮ್ಮ ತಮ್ಮ ದೇಶಕ್ಕೆ ಹಿಂದಿರುಗಬೇಕಾಗುತ್ತೆ ಅಂತಾ ಫರ್ಮಾನು ಹೊರಡಿಸಿದೆ. ಇದರಿಂದ ಅಮೆರಿಕದಲ್ಲಿರುವ ಸುಮಾರು 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಗ ಖಾಲಿ ಮಾಡುವ ಆಲೋಚನೆಯಲ್ಲಿದ್ದಾರೆ.

'ಗ್ರೇಟ್ ಎಸ್ಕೇಪ್' ಪ್ಲಾನ್..!

'ಗ್ರೇಟ್ ಎಸ್ಕೇಪ್' ಪ್ಲಾನ್..!

ಅಮೆರಿಕ ಇಡೀ ಜಗತ್ತಿನ ಎಜುಕೇಷನ್ ಹಬ್. ಇಲ್ಲಿ ಓದಬೇಕು ಅನ್ನೋದು ಲಕ್ಷಾಂತರ ವಿದ್ಯಾರ್ಥಿಗಳ ಕನಸು. ಹಾಗೇ ಅಮೆರಿಕದಲ್ಲಿರುವಷ್ಟು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಬೇರೆಲ್ಲೂ ಇಲ್ಲ. ವಿಶ್ವದಾದ್ಯಂತ 50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಮೆರಿಕದಲ್ಲೇ ಅತಿಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. 2019ರ ಅಂಕಿ-ಅಂಶಗಳ ಪ್ರಕಾರ ಅಮೆರಿಕದಲ್ಲಿ 10 ಲಕ್ಷಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಿದ್ದಾರೆ. ಹೀಗೆ ಅಮೆರಿಕದ ಎದುರು ಯುಕೆ, ಕೆನಡಾ ದೇಶಗಳು ಕೂಡ ಮಂಕಾಗಿಬಿಡುತ್ತವೆ. ಆದರೆ ಇಷ್ಟು ಪ್ರಮಾಣದ ವಿದ್ಯಾರ್ಥಿಗಳು ಇದೀಗ ದಿಢೀರ್ ಜಾಗ ಖಾಲಿ ಮಾಡಿ, ಊರು-ಕೇರಿ ಸೇರುವ ಆಲೋಚನೆಯಲ್ಲಿದ್ದಾರೆ. ವಿದ್ಯಾರ್ಥಿಗಳ ಈ ನಿರ್ಧಾರ ಕೊರೊನಾ ಕೂಪದಲ್ಲಿ ನರಳುತ್ತಿರುವ ಅಮೆರಿಕ ಅನ್ನೋ ದೈತ್ಯ ರಾ‍‍ಷ್ಟ್ರಕ್ಕೆ ಗಾಯದ ಮೇಲೆ ಬರೆ ಎಳೆದಿದೆ.

 ಊರು ಸೇರಿದವರು ವಾಪಸ್ ಬರಲ್ಲ..!

ಊರು ಸೇರಿದವರು ವಾಪಸ್ ಬರಲ್ಲ..!

ಸದ್ಯದ ಸ್ಥಿತಿ ನೋಡಿದರೆ ಅಮೆರಿಕದಲ್ಲಿ ಪ್ರಾಣ ಉಳಿಸಿಕೊಳ್ಳೋದೆ ದೊಡ್ಡ ಸಾಹಸ. 32 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರಿಗೆ ಕೊರೊನಾ ಸೋಂಕು ವಕ್ಕರಿಸಿದ್ದರೆ, ಲಕ್ಷಕ್ಕೂ ಹೆಚ್ಚು ಜನರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗಲೇ ಹಿಂದೆ-ಮುಂದೆ ಯೋಚಿಸದೆ ಟ್ರಂಪ್ ನಾನಾ ನಿಯಮಗಳನ್ನ ಹೇರುತ್ತಿದ್ದಾರೆ. ಅಲ್ಲಿನ ನಾಗರಿಕರಿಗೆ ಟ್ರಂಪ್ ಮಾತು ಪಾಲಿಸುವುದು ಅನಿವಾರ್ಯವಾದರೂ, ವಿದೇಶಿ ವಿದ್ಯಾರ್ಥಿಗಳಿಗೆ ಈ ತಲೆನೋವು ಬಿಲ್‌ಕುಲ್ ಬೇಡ. ಈಗಾಗಲೇ ನಾನಾ ಸಮಸ್ಯೆಗೆ ಸಿಲುಕಿ ನಲುಗಿರುವ ವಿದ್ಯಾರ್ಥಿಗಳು, ಮೊದಲು ಅಮೆರಿಕ ಬಿಟ್ಟು ಹೋದರೆ ಸಾಕಪ್ಪಾ ಅಂತಿದ್ದಾರೆ.

ದುಡ್ಡು ಇಲ್ಲದೆ ಏನೂ ನಡೆಯೋದೆ ಇಲ್ಲ

ದುಡ್ಡು ಇಲ್ಲದೆ ಏನೂ ನಡೆಯೋದೆ ಇಲ್ಲ

ಯಾಕಂದ್ರೆ ಅಮೆರಿಕದಲ್ಲಿ ದುಡ್ಡು ಇಲ್ಲದೆ ಏನೂ ನಡೆಯೋದೆ ಇಲ್ಲ. ಕೈಯಲ್ಲಿ ಕಾಸಿದ್ದರೆ ಮಾತ್ರ ಅಮೆರಿಕ ಸ್ವರ್ಗ, ಇಲ್ಲವಾದರೆ ಅದು ಅಕ್ಷರಶಃ ನರಕ. ಈ ರೀತಿ ಸನಸ್ಯೆಗಳ ಸುಳಿಗೆ ಸಿಲುಕಿ ತಮ್ಮ ದೇಶಗಳಿಗೆ ವಾಪಸ್ ಹೋಗಲು ಸಿದ್ಧವಾಗಿರುವ ಬಹುಪಾಲು ವಿದ್ಯಾರ್ಥಿಗಳು, ಮತ್ತೆ ಅಮೆರಿಕದ ಸಹವಾಸವೇ ಬೇಡ ಅಂತಿದ್ದಾರೆ. ಇದು ಅಮೆರಿಕದ ಪ್ರತಿಷ್ಠಿತ ಯೂನಿವರ್ಸಿಟಿಗಳ ನಿದ್ದೆಗೆಡಿಸಿದೆ. ಯಾಕಂದ್ರೆ ವಿದೇಶಿ ವಿದ್ಯಾರ್ಥಿಗಳಿಂದಲೇ ಅಮೆರಿಕದ ಹತ್ತಾರು ವಿಶ್ವವಿದ್ಯಾಲಯಗಳು ಜೇಬು ತುಂಬಿಸಿಕೊಳ್ಳುತ್ತಿದ್ದವು. ಆದರೆ ಈಗ ದಿಢೀರ್ ಅಂತಾ ಟ್ರಂಪ್ ಹೊಸ ರೂಲ್ಸ್ ಬಗ್ಗೆ ಮಾತನಾಡ್ತಿರೋದು ಅಮೆರಿಕದ ಶಿಕ್ಷಣ ಸಂಸ್ಥೆಗಳ ನಿದ್ದೆಗೆಡಿಸಿದೆ.

ವಿದೇಶಿ ವಿದ್ಯಾರ್ಥಿಗಳ ಅಂಕಿ-ಅಂಶ

ವಿದೇಶಿ ವಿದ್ಯಾರ್ಥಿಗಳ ಅಂಕಿ-ಅಂಶ

ದೇಶ 2019 2018
ಅಮೆರಿಕ 10,95,299 10,94,792
ಯುಕೆ 4,96,570 5,06,480
ಚೀನಾ 4,92,185 4,89,200
ಕೆನಡಾ 4,89,200 3,70,710
ಆಸ್ಟ್ರೇಲಿಯಾ 4,20,501 3,71,885
ತಪ್ಪು ನಿರ್ಧಾರಗಳು ಸ್ವತಃ ಟ್ರಂಪ್‌ಗೆ ಮುಳುವಾಗುತ್ತಿವೆ

ತಪ್ಪು ನಿರ್ಧಾರಗಳು ಸ್ವತಃ ಟ್ರಂಪ್‌ಗೆ ಮುಳುವಾಗುತ್ತಿವೆ

ಚುನಾವಣೆ ಹೊತ್ತಲ್ಲೇ ಅಮೆರಿಕ ಅಧ್ಯಕ್ಷರು ಕೈಗೊಳ್ಳುತ್ತಿರುವ ತಪ್ಪು ನಿರ್ಧಾರಗಳು ಸ್ವತಃ ಟ್ರಂಪ್‌ಗೆ ಮುಳುವಾಗುತ್ತಿವೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ, ನೂರಾರು ಕನಸು ಹೊತ್ತು ಅಮೆರಿಕ ಅನ್ನೋ ದೈತ್ಯ ರಾಷ್ಟ್ರಕ್ಕೆ ಹಾರಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಟ್ರಂಪ್‌ರ ವಿಚಿತ್ರ ರೂಲ್ಸ್‌ಗಳಿಗೆ ಬೆಚ್ಚಿಬಿದ್ದಿದ್ದಾರೆ. ಅಮೆರಿಕದಲ್ಲಿ ಭಾರತ ಸೇರಿದಂತೆ ಏಷ್ಯಾ ಮೂಲದಿಂದ ವಲಸೆ ಹೋಗಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಬಹುದೊಡ್ಡದಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಏಷ್ಯಾ ಮೂಲದ ವಿದ್ಯಾರ್ಥಿಗಳು ಕೂಡ ಅಮೆರಿಕದಿಂದ ಹೊರಬಂದು, ಪರ್ಯಾಯ ಮಾರ್ಗಗಳ ಕಡೆ ಮುಖ ಮಾಡುವ ಆಲೋಚನೆಯಲ್ಲಿದ್ದಾರೆ. ಹೀಗೆ ಟ್ರಂಪ್ ಕೈಗೊಳ್ಳುತ್ತಿರುವ ವಿವಾದಾತ್ಮಕ ನಿರ್ಣಯಗಳು ಅಮೆರಿಕವನ್ನ ಜಾಗತಿಕ ಮಟ್ಟದಲ್ಲಿ ಒಬ್ಬಂಟಿಯಾಗಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+