ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಸಾಚಾರ ನಡೆಸಿದವರನ್ನು 'ದೇಶಭಕ್ತರು' ಎಂದ ಟ್ರಂಪ್ ಪುತ್ರಿ

|
Google Oneindia Kannada News

ವಾಷಿಂಗ್ಟನ್, ಜನವರಿ 7: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಪರ ಪ್ರತಿಭಟನೆ ನಡೆಸಿದ ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿದ ಜನರನ್ನು ಟ್ರಂಪ್ ಮಗಳು ಇವಾಂಕಾ ಟ್ರಂಪ್, 'ದೇಶಭಕ್ತರು' ಎಂದು ಕರೆದಿದ್ದಾರೆ.

ಪ್ರತಿಭಟನಾಕಾರರು ಶಾಂತಿಯಿಂದ ವರ್ತಿಸಬೇಕು ಎಂದು ಕೋರಿ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. 'ನಮ್ಮ ಕ್ಯಾಪಿಟಲ್ ಪೊಲೀಸ್ ಮತ್ತು ಕಾನೂನು ಸುವ್ಯವಸ್ಥೆಯನ್ನು ದಯವಿಟ್ಟು ಬೆಂಬಲಿಸಿ. ಅವರು ನಿಜಕ್ಕೂ ನಮ್ಮ ದೇಶದ ಪರವಾಗಿದ್ದಾರೆ. ಶಾಂತಿಯಿಂದ ಇರಿ' ಎಂದು ಟ್ರಂಪ್ ಹೇಳಿದ್ದರು.

ವಾಷಿಂಗ್ಟನ್ ಡಿಸಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಮೇಯರ್ ವಾಷಿಂಗ್ಟನ್ ಡಿಸಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಮೇಯರ್

ಇದನ್ನು ಹಂಚಿಕೊಂಡಿದ್ದ ಇವಾಂಕಾ ಟ್ರಂಪ್, 'ಅಮೆರಿಕದ ದೇಶಭಕ್ತರೇ- ನಮ್ಮ ಕಾನೂನು ವ್ಯವಸ್ಥೆಯ ಯಾವುದೇ ಭದ್ರತಾ ಉಲ್ಲಂಘನೆ ಅಥವಾ ಅಗೌರವವು ಒಪ್ಪುವಂತಹದ್ದಲ್ಲ. ಈ ಹಿಂಸಾಚಾರವನ್ನು ಕೂಡಲೇ ನಿಲ್ಲಿಸಬೇಕು. ದಯವಿಟ್ಟು ಶಾಂತಯುತರಾಗಿ' ಎಂದು ಟ್ವೀಟ್ ಮಾಡಿದ್ದರು. ಆದರೆ ಕೆಲವೇ ನಿಮಿಷದಲ್ಲಿ ಅವರು ಆ ಟ್ವೀಟ್ ಅನ್ನು ಅಳಿಸಿ ಹಾಕಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

Donald Trumps Daughter Ivanka Trump Calls Rioters America Patriots, Then Deletes Tweet

ಕಾನೂನಾತ್ಮಕ ಪ್ರಜಾಪ್ರಭುತ್ವ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳುವುದು ನೈಜ ದೇಶಭಕ್ತಿ. ಅದನ್ನು ನಿರಾಕರಿಸುವುದು ಮತ್ತು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವುದು ಅಮೆರಿಕ ವಿರೋಧಿ ಎಂದು ಇವಾಂಕಾ ಸಂಬಂಧಿ, ರೂಪದರ್ಶಿ ಕರ್ಲಿ ಕ್ಲೋಸ್ ಪ್ರತಿಕ್ರಿಯೆ ನೀಡಿದ್ದಾರೆ.

ಹಿಂಸಾಚಾರಕ್ಕೆ ಟ್ರಂಪ್ ಕಾರಣ: ಬರಾಕ್ ಒಬಾಮ ಆರೋಪಹಿಂಸಾಚಾರಕ್ಕೆ ಟ್ರಂಪ್ ಕಾರಣ: ಬರಾಕ್ ಒಬಾಮ ಆರೋಪ

'ಯುಎಸ್ ಕ್ಯಾಪಿಟಲ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ದಾಂಧಲೆಯನ್ನು ಕೂಡಲೇ ನಿಲ್ಲಿಸಬೇಕು. ಅದರಲ್ಲಿ ಭಾಗಿಯಾಗಿರುವವರು ಕಾನೂನು ವ್ಯವಸ್ಥೆಯ ಅಧಿಕಾರಿಗಳನ್ನು ಗೌರವಿಸಬೇಕು ಮತ್ತು ಕೂಡಲೇ ಕಟ್ಟಡದಿಂದ ಹೊರಹೋಗಬೇಕು' ಎಂದು ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದ್ದಾರೆ.

English summary
Donald Trump's daughter Ivanka Trump has called rioters who protested supporting Trump as American Patriots and then deletes her tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X